ಹಾಸನ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ. 57ರಷ್ಟು ಹೆಚ್ಚು ಮಳೆಯಾಗಿದ್ದು, ಮುಂಗಾ ರು ಹಂಗಾಮಿನ ಬೆಳೆಗಳ ಬಿತ್ತನೆ ಪ್ರಮಾಣ ದಲ್ಲಿ ಶೇ.99ರಷ್ಟು ಸಾಧನೆಯಾಗಿದೆ.
ಜಿಲ್ಲೆಯಲ್ಲಿ ವಾಡಿಕೆ ಮಳೆ ಸೆಪ್ಟಂಬರ್ ಅಂತ್ಯದವರೆಗೆ 916.1 ಮಿ.ಮೀ.ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ 1441.9 ಮಿ.ಮೀ.ನಷ್ಟು ಅಂದರೆ, ವಾಡಿಕೆಗಿಂತ ಶೇ.57ರಷ್ಟು ಮಳೆ ಸುರಿದಿದೆ. ಜಿ
ಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2,53, 596 ಹೆಕ್ಟೇರ್‌ನಲ್ಲಿ ಬೆಳೆಗಳ ಬಿತ್ತನೆ ಗುರಿ ನಿಗದಿಯಾಗಿ ದ್ದು, ಆ ಪೈಕಿ 2,50,836 ಹೆಕ್ಟೇರ್ ನಲ್ಲಿ ಅಂದರೆ ಶೇ. 98.91 ರಷ್ಟು ಬಿತ್ತನೆಯಾಗಿದೆ. ಕೆಲವು ತಾಲೂಕುಗಳಲ್ಲಿ ಗುರಿ ಮೀರಿದ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಏಕದಳ ಧಾನ್ಯಗಳು: ಭತ್ತ, ರಾಗಿ, ಜೋಳ, ಮುಸು ಕಿನ ಜೋಳ ಸೇರಿದಂತೆ ಏಕದಳ ಧಾನ್ಯಗಳ ಬಿತ್ತನೆ ಗುರಿ 2,18,472 ಹೆಕ್ಟೇರ್‌ಗೆ ಬದಲಾಗಿ 2,14,578 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ.98.21ರಷ್ಟು ಸಾಧನೆಯಾಗಿದೆ. ಏಕ ದಳ ಧಾನ್ಯಗಳ ಪೈಕಿ ಮುಸುಕಿನ ಜೋಳದ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆ ಯಾಗಿದೆ. 1,05,158 ಹೆಕ್ಟೇರ್ ಬಿತ್ತನೆ ಗುರಿಗೆ ಬದಲಾಗಿ 1,10,985 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳದ ಬಿತ್ತನೆಯಾಗಿದ್ದು, ಶೇ.105ರಷ್ಟು ಮುಸು ಕಿನ ಜೋಳದ ಬಿತ್ತನೆ ಆಗಿದೆ.
ರಾಗಿ ಬಿತ್ತನೆ ಗುರಿ 70,816 ಹೆಕ್ಟೇರ್‌ಗೆ ಬದಲಾಗಿ 66,679 ಹೆಕ್ಟೇರ್ ಬಿತ್ತನೆಯಾಗಿ ಶೇ.94.15ರಷ್ಟು ಸಾಧನೆ ಯಾಗಿದ್ದರೆ, ಭತ್ತದ ಬೆಳೆ ಬಿತ್ತನೆ ಗುರಿ 37,998 ಹೆಕ್ಟೇರ್‌ಗೆ ಗುರಿ ನಿಗದಿಯಾಗಿದ್ದು, 35,872 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.94.40ರಷ್ಟು ಸಾಧನೆ ಯಾಗಿದೆ. ಜೋಳದ ಬೆಳೆ ಬಿತ್ತನೆ ಗುರಿ 4000ಹೆಕ್ಟೇರ್‌ಗೆ ಬದಲಾಗಿ ಕೇವಲ 935 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿ ಶೇ.23.32ರಷ್ಟು ಸಾಧನೆಯಾಗಿದೆ.
ದ್ವಿದಳ ಧಾನ್ಯಗಳು: ತೊಗರಿ, ಉದ್ದು, ಅಲಸಂದೆ, ಅವರೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ ಗುರಿ 20, 745 ಹೆಕ್ಟೇರ್‌ಗೆ ಬದಲಾಗಿ 19521 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ, 94 ರಷ್ಟು ಸಾಧನೆ ಮಾಡಲಾಗಿದೆ.
ಎಣ್ಣೆಕಾಳುಗಳು: ಜಿಲ್ಲೆಯಲ್ಲಿ ಸೂರ್ಯಕಾಂತಿ, ಸಾಸಿವೆ, ಎಳ್ಳು, ನೆಲಗಡೆ ಸೇರಿದಂತೆ 1185 ಹೆಕ್ಟೇರ್ ಎಣ್ಣೆಕಾಳುಗಳ ಬಿತ್ತನೆ ಗುರಿ ನಿಗದಿಯಾಗಿದ್ದು, ಆ ಪೈಕಿ 2910 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಗುರಿ ಮೀರಿದ ಶೇ.245ರಷ್ಟು ಸಾಧನೆಯಾಗಿದೆ.
ವಾಣಿಜ್ಯ ಬೆಳೆಗಳು: ತಂಬಾಕು, ಹತ್ತಿ, ಕಬ್ಬು ಸೇರಿದಂತೆ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ 13,194 ಹೆಕ್ಟೇರ್‌ಗೆ ಬದಲಾಗಿ 13,827 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಗುರಿ ಮೀರಿದ ಶೇ.104 ರಷ್ಟು ಸಾಧನೆಯಾಗಿದೆ.
– ಎನ್. ನಂಜುಂಡೇಗೌಡ