Advertisement

ಜು. 5ರೊಳಗೆ ಅರ್ಹರೆಲ್ಲರಿಗೂ ಹಕ್ಕುಪತ್ರ: ಮಠಂದೂರು

11:35 PM Jun 06, 2020 | Sriram |

ಪುತ್ತೂರು: 94ಸಿ ಮತ್ತು 94ಸಿಸಿಗೆ ಸಂಬಂಧಿಸಿ ಜು. 5ರೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೂ ಹಕ್ಕುಪತ್ರ ವಿತರಿಸಿ ದ.ಕ. ಜಿಲ್ಲೆಯಲ್ಲಿಯೇ ಪುತ್ತೂರು ತಾಲೂಕಿನಲ್ಲಿ ನೂರಕ್ಕೆ ನೂರು ಹಕ್ಕು ಪತ್ರ ವಿತರಿಸಲು ಯತ್ನಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ತಾಲೂಕು ಆಡಳಿತ ವತಿಯಿಂದ ಜೂ. 6ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.

ಅಧಿವೇಶನ, ಕೋವಿಡ್-19 ಮೊದಲಾದ ಕಾರಣಗಳಿಂದ ಹಕ್ಕುಪತ್ರ ವಿತರಿಸಲು ಸಮಸ್ಯೆ ಉಂಟಾಗಿತ್ತು. ತಾಲೂಕಿನಲ್ಲಿ 94ಸಿಗೆ 13,757 ಅರ್ಜಿಗಳು ಬಂದಿದ್ದು, 7,759 ಮಂದಿಗೆ ಹಕ್ಕುಪತ್ರ ದೊರೆತಿದೆ. 5,900 ಅರ್ಜಿಗಳು ತಿರಸ್ಕೃತಗೊಂಡಿವೆ. 94ಸಿಸಿಯಲ್ಲಿ 87 ಅರ್ಜಿಗಳು ಬಾಕಿ ಇವೆ. 94ಸಿ ಮತ್ತು 94 ಸಿಸಿ ಸೇರಿ ಒಟ್ಟು ಸುಮಾರು 350 ಅರ್ಜಿಗಳು ವಿತರಣೆಗೆ ಬಾಕಿ ಆಗಿವೆ ಎಂದರು.

ಮಾರಾಟ ಮಾಡಬೇಡಿ
ಫಲಾನುಭವಿಗಳಿಗೆ ಹಕ್ಕುಪತ್ರ, ನಕ್ಷೆಯನ್ನು ನೀಡಲಾಗುತ್ತಿದೆ. ಮುಂದೆ ಕನ್ವರ್ಶನ್‌ ಮಾಡುವ ಆವಶ್ಯಕತೆ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ ಎಂದರು.

ಮನೆ ನಿವೇಶನ ಹಕ್ಕುಪತ್ರ ಪಡೆಯಲು ಅಧಿಕಾರಿಗಳಿಗೆ ಹಣ ಕೊಡಬೇಡಿ. ಅದೇ ರೀತಿ ಅಧಿಕಾರಿಗಳು ಬಡವನ ಕೈಯಿಂದ ಹಣ ಪಡೆಯಬೇಡಿ. ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಭ್ರಷ್ಟಾಚಾರ ಮುಕ್ತವಾಗಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

Advertisement

221 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿದರು. ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್‌, ವಿದ್ಯಾ ಆರ್‌. ಗೌರಿ, ತಾ.ಪಂ. ಸದಸ್ಯರಾದ ಮುಕುಂದ ಗೌಡ, ಮೀನಾಕ್ಷಿ ಮಂಜುನಾಥ್‌, ದಿವ್ಯಾ ಪುರುಷೋತ್ತಮ, ಹರೀಶ್‌ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು. ತಹಶೀಲ್ದಾರ್‌ ರಮೇಶ್‌ ಬಾಬು ಪ್ರಸ್ತಾವಿಸಿದರು. ಕಂದಾಯ ನಿರೀಕ್ಷಕ ವಿಜಯ ವಿಕ್ರಮ್‌ ಕಾರ್ಯಕ್ರಮ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next