Advertisement

ದಾವಣಗೆರೆಯಲ್ಲಿ ಇಂದು 94 ಜನರಿಗೆ ಸೊಂಕು ದೃಢ: ಓರ್ವ ಸಾವು

10:11 PM Oct 29, 2020 | Mithun PG |

ದಾವಣಗೆರೆ: ಜಿಲ್ಲೆಯಲ್ಲಿ  ಗುರುವಾರ  94 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು,   ಸಂತೆಬೆನ್ನೂರಿನ 63 ವರ್ಷದ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. 57 ಜನರು ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ದಾವಣಗೆರೆ ತಾಲೂಕಿನಲ್ಲಿ  39, ಹರಿಹರ ತಾಲೂಕಿನಲ್ಲಿ  21, ಜಗಳೂರು ತಾಲೂಕಿನಲ್ಲಿ 7,  ಚನ್ನಗಿರಿ ತಾಲೂಕಿನಲ್ಲಿ  11,  ಹೊನ್ನಾಳಿ ತಾಲೂಕಿನಲ್ಲಿ  15 ಹಾಗೂ ಹೊರ ಜಿಲ್ಲೆಯ ಒಂದು  ಸೇರಿ  ಒಟ್ಟು  94 ಪ್ರಕರಣಗಳು ವರದಿಯಾಗಿವೆ.

ಈ ಜಿಲ್ಲೆಯಲ್ಲಿ ಈವರೆಗೆ ಒಟ್ಟು 20,672 ಪ್ರಕರಣಗಳು ದಾಖಲಾಗಿದ್ದು, 19,622 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ 256 ಜನರ ಸಾವು ಸಂಭವಿಸಿದ್ದು  ಪ್ರಸ್ತುತ 794 ಸಕ್ರಿಯ ಪ್ರಕರಣಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next