Advertisement

 ಲಿಂಗಾನುಪಾತದಲ್ಲಿ ವ್ಯತ್ಯಾಸ: ಉಡುಪಿ ಜಿಲ್ಲೆಯಲ್ಲಿ ಸಾವಿರ ಪುರುಷರಿಗೆ 935 ಸ್ತ್ರೀಯರು!

09:15 PM Feb 03, 2022 | Team Udayavani |

ಉಡುಪಿ:  ಜಿಲ್ಲೆಯಲ್ಲಿ ಭ್ರೂಣಹತ್ಯೆ ಘಟನೆಗಳು ನಡೆಯದಿದ್ದರೂ ಲಿಂಗಾನುಪಾತದಲ್ಲಿ ತೀವ್ರ ವ್ಯತ್ಯಾಸಕಂಡುಬರುತ್ತಿದೆ.

Advertisement

2021ರ ಎ.1ರಿಂದ ಡಿ.31ರ ವರೆಗೆ ಜಿಲ್ಲೆಯ ಸಾವಿರ ಪುರುಷರಿಗೆ 935 ಸ್ತ್ರೀಯರಿದ್ದಾರೆ. ಜಿಲ್ಲೆಯಲ್ಲಿರುವ ಬಹುತೇಕ ಹೆಚ್ಚಿನ ಸಮು ದಾಯಗಳು ಮಾತೃ ಪ್ರಧಾನ ಪದ್ಧತಿ ಅನುಸರಿಸುತ್ತಿದ್ದರೂ, ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡುವ ರಕ್ತಸಂಬಂಧ ವ್ಯವಸ್ಥೆ, ಜನನದ ಲಿಂಗ ಅನುಪಾತವು ಇದಕ್ಕೆ ವಿರುದ್ಧವಾದ ಅಂಕಿ ಅಂಶ ನೀಡುತ್ತಿದೆ.

ಜಿಲ್ಲೆಯ 2021ರ ಅಂಕಿ-ಅಂಶಗಳ ಪ್ರಕಾರ 1,000 ಪುರುಷರಿಗೆ 935 ಸ್ತ್ರೀಯರಿದ್ದಾರೆ.  2011ರ ಜನಗಣತಿಯಂತೆ 1,000 ಪುರುಷರಿಗೆ 955 ಸ್ತ್ರೀಯರಿದ್ದರು. 10 ವರ್ಷಗಳ ಅವಧಿಯಲ್ಲಿ ಸ್ತ್ರೀಯರ ಸಂಖ್ಯೆ ಬಹುತೇಕ ಇಳಿಮುಖವಾಗಿದೆ.

ಕಾರಣ ಏನು? :

ಬಹುತೇಕ ದಂಪತಿಯವರು ಗಂಡು ಮಗುವನ್ನೇ ಹೆಚ್ಚಾಗಿ ಬಯಸುತ್ತಾರೆ. ಒಂದು ಗಂಡುಮಗುವಾದ ಬಳಿಕ ಮಕ್ಕಳು ಸಾಕೆಂದು ನಿರ್ಧಾರ ಬರುತ್ತಾರೆ. ಮೊದಲು ಹೆಣ್ಣು ಮಗುವಾಗಿದರೆ, ಗಂಡು ಮಗುವಿಗಾಗಿ ಕಾಯುತ್ತಾರೆ. ಈ ಮಾನಸಿಕತೆಯೂ ಲಿಂಗಾನುಪಾತ ವ್ಯತ್ಯಾಸಕ್ಕೆ ಕಾರಣವಾಗಿವೆ ಎಂದು ಜಿಲ್ಲಾ ಕುಟುಂಬ ಯೋಜನಾ ವಿಭಾಗದ ಮೂಲಗಳು ತಿಳಿಸಿವೆ.

Advertisement

ಅಧಿಕಾರಿಗಳಿಂದ ನಿಗಾ:  ಗರ್ಭಧರಿಸಿದ 12 ವಾರಗಳ ಬೆಳವಣಿಗೆಯ ಅನಂತರ ಭ್ರೂಣದ ಲಿಂಗವನ್ನು ಪತ್ತೆ ಮಾಡ ಬಹುದಾದ್ದರಿಂದ ಗರ್ಭಧಾರಣೆಯ ಎಲ್ಲ ವೈದ್ಯಕೀಯ ಚಟುವಟಿಕೆಗಳ ಮೇಲೆ ನಿಗಾ ಇಡಲು ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಈಗಾಗಲೇ ಜಿಲ್ಲೆಯ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಸ್ಪೈ ಕೆಮರಾಗಳನ್ನು ಅಳವಡಿಸಿದ್ದಾರೆ.

ಜಿಲ್ಲಾದ್ಯಂತ 75 ಸ್ಕ್ಯಾನಿಂಗ್‌ ಕೇಂದ್ರಗಳಿದ್ದರೂ, 47 ಖಾಸಗಿ ನರ್ಸಿಂಗ್‌ ಹೋಂಗಳು ಮತ್ತು ಕ್ಲಿನಿಕ್‌ಗಳು ಅರ್ಜಿ ಸಲ್ಲಿಸಿ ಗರ್ಭಧಾರಣೆಯ ವೈದ್ಯಕೀಯ ಪರೀಕ್ಷೆಯ ನೋಂದಣಿ ಪ್ರಮಾಣಪತ್ರವನ್ನು ತೆಗೆದುಕೊಂಡಿವೆ. ಪ್ರತೀ ತಿಂಗಳು ಈ 47 ಸಂಸ್ಥೆಗಳು ಜಿÇÉಾ ಕುಟುಂಬ ಯೋಜನಾ ಕಚೇರಿಗೆ ಸ್ಕ್ಯಾನಿಂಗ್‌ ವರದಿಗಳನ್ನು ಕಳುಹಿಸುತ್ತವೆ. ಅಲ್ಲಿ ನಡೆಸಲಾದ ಎಂಟಿಪಿಗಳ ಕಾರಣವನ್ನು ತಿಳಿಸುತ್ತದೆ. ನಾವು ಅನಂತರ ಕಾರಣವನ್ನು ಪರಿಶೀಲಿಸಲಾಗುತ್ತದೆ. ಭ್ರೂಣದಲ್ಲಿ ಪತ್ತೆಯಾದ ಜನ್ಮಜಾತ ವೈಪರೀತ್ಯ ಗಳು ಅಥವಾ ಗರ್ಭಾವಸ್ಥೆಯನ್ನು ಮುಂದು ವರಿಸುವುದರಿಂದ ತಾಯಿಯ ಜೀವಕ್ಕೆ ಅಪಾಯ ಇವೆ ಎನ್ನುವ ಅಂಶಗಳಿದ್ದರೆ ಮಾಡಬೇಕಾಗುತ್ತವೆ ಎನ್ನುತ್ತಾರೆ ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ| ರಾಮರಾವ್‌

ಜನನ ಪ್ರಮಾಣವೂ ಇಳಿಕೆ :

ಎರಡು ವರ್ಷಗಳಿಂದ ಕೋವಿಡ್‌ ಸಮಸ್ಯೆ ಉಲ್ಬಣಗೊಂಡ ಸಂದರ್ಭದಲ್ಲಿ ಸೋಂಕು ಹರಡುವ ಭೀತಿಯಿಂದ ಹೆಚ್ಚಿನ ದಂಪತಿಯವರು ಮಗು ಪಡೆಯಲು ಆಸಕ್ತಿ ಹೊಂದಲಿಲ್ಲ. ವೈದ್ಯರೂ ಕೂಡ ಸೂಕ್ತ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದರಿಂದ ಮತ್ತಷ್ಟು ಮುಂದೂಡಿಕೆ ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.

ಪ್ರತೀ ಸಾವಿರ ಪುರುಷರಿಗೆ ಸ್ತ್ರೀಯರ ವಿವರ  :

ವರ್ಷ  ಸ್ತ್ರೀಯರು

2018-19           976

2019-20           956

2020-21           957

ಜಿಲ್ಲೆಯಲ್ಲಿ ಯಾವುದೇ ಗರ್ಭಪಾತ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳು ಪ್ರತೀ ವರ್ಷ ಪರವಾನಿಗೆ ನವೀಕರಿಸುವಂತೆ ಆದೇಶ ನೀಡಲಾಗಿದ್ದು, ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. -ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next