Advertisement

934 ಕೋಟಿ ರೂ. ವಂಚನೆ ಕೇಸ್‌: ಬಿಸಿ ಮುಟ್ಟಿಸಿದ ಎಸಿಬಿ

04:37 PM Feb 09, 2019 | |

ಬೆಂಗಳೂರು: ಪೌರ ಕಾರ್ಮಿಕರ ಭವಿಷ್ಯನಿಧಿ ಹಾಗೂ ಇಎಸ್‌ಐ ಪಾವಿಸದೇ 384 ಕೋಟಿ ರೂ.ವಂಚನೆ ಹಾಗೂ ಪೌರಕಾರ್ಮಿಕರ ನಕಲಿ ದಾಖಲೆ ಸೃಷ್ಟಿಸಿ 550 ಕೋಟಿ ರೂ. ಮೌಲ್ಯದ ನಕಲಿ ಬಿಲ್‌ ಸೃಷ್ಟಿಸಿರುವ ಆರೋಪ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಗುರುವಾರ ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದೆ. 

Advertisement

ಈ ಕುರಿತು ಹಲವು ಬಾರಿ ನೋಟಿಸ್‌ ನೀಡಿದರೂ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಗುರುವಾರ ಬೊಮ್ಮನಹಳ್ಳಿ ವಲಯ ಕಚೇರಿಗೆ ಏಕಾಏಕಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ. ನಗರದ ಬಿಬಿಎಂಪಿ ವಲಯಕಚೇರಿಗಳಲ್ಲಿ ದಾಖಲೆಗಳನ್ನು ಕೋರಿದ್ದು ಕೆಲವು ಕಚೇರಿಗಳು ಸಲ್ಲಿಸಿದ್ದವು. ಬೊಮ್ಮನಹಳ್ಳಿ ವಲಯದಿಂದ ಸಲ್ಲಿಕೆಯಾಗಿರಲಿಲ್ಲ.

ಹೀಗಾಗಿ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಬಿಬಿಎಂಪಿಯಲ್ಲಿ 6,600 ಪೌರಕಾರ್ಮಿಕರ ನಕಲಿ ದಾಖಲೆ ಸೃಷ್ಟಿಸಿ 550 ಕೋಟಿ ವಂಚಿಸಲಾಗಿದೆ. ಜತೆಗೆ 384 ಕೋಟಿ ಭವಿಷ್ಯ ನಿಧಿ, ಇಎಸ್‌ಐ ಖಾತೆಗೆ ಪಾವತಿಸದೇ ವಂಚನೆ ನಡೆಸಲಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿತ್ತು. ಪ್ರಕರಣ ಎಸಿಬಿಗೆ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next