Advertisement
ಅತಿವೃಷ್ಟಿ, ಬೆಳೆಹಾನಿ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಮಂಗಳವಾರ ಅವರು ಉತ್ತರಿಸಿದರು. ಬಿಜೆಪಿ ಸರಕಾರದಿಂದ ನಯಾಪೈಸೆ ಪರಿಹಾರ ನೀಡಿಲ್ಲವೆಂದ ಪ್ರತಿಪಕ್ಷ ನಾಯಕರ ಹೇಳಿಕೆಗೆ, ನಾನೂ ಕೂಡ ಪೈಸೆ ನೀಡಿಲ್ಲ ಎಂದಿದ್ದೆ. ಯಾಕೆಂದರೆ, ನಾವು ಕೋಟ್ಯಂತರ ರೂ.ಗಳನ್ನು ಸಂಕಷ್ಟದಲ್ಲಿರುವ ರೈತರು, ಸಂತ್ರಸ್ತರಿಗೆ ಶರವೇಗದಲ್ಲಿ ನೀಡುವ ಮೂಲಕ ನೆರವಿಗೆ ಧಾವಿಸಿದ್ದೇವೆ ಎಂದರು.
Related Articles
ಕೊಡಗಿನಲ್ಲಿ ಹಾನಿಗೀಡಾದ ಕಾಫಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ.ನಂತೆ ಒಟ್ಟು 38.80 ಕೋಟಿ ರೂ. ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ 62 ಜೀವ ಹಾನಿ ಸಂಭವಿಸಿದ್ದು, 945 ಜಾನುವಾರುಗಳು ಸಾವಿಗೀಡಾಗಿವೆ. 54,716 ಮನೆ, 3306 ಸೇತುವೆಗಳಿಗೆ, 995 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ. ರಾಜ್ಯ ಸರಕಾರ ತತ್‌ಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಿ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಿದೆ. ಕೇಂದ್ರ ಸರಕಾರ 15ನೇ ಹಣಕಾಸು 5270 ಕೋ. ರೂ. ಬಿಡುಗಡೆ ಮಾಡುತ್ತಿದೆ. ಹೆಚ್ಚಿನ ಪರಿಹಾರ ಕೋರಿ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದರು.
Advertisement
23,716 ಮನೆ ಹಾನಿ23,716 ಮನೆಗಳಿಗೆ ಹಾನಿಯಾಗಿದ್ದು, 332.87 ಕೋಟಿ ರೂ. ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿಯಾಗಿದ್ದರೆ, ಎನ್‌ಡಿಆರ್‌ಎಫ್ನಿಂದ 95,100 ರೂ., ರಾಜ್ಯ ಸರಕಾರದಿಂದ 4 ಲಕ್ಷ 49 ಸಾವಿರ ರೂ. ಸೇರಿ 5 ಲಕ್ಷ ರೂ. ಕೊಡಲಾಗುತ್ತಿದೆ. ಪ್ರವಾಹದಲ್ಲಿ ಮನೆಗಳು ಮುಳುಗಿ ನಷ್ಟಕ್ಕೆ ಒಳಗಾದ ತುರ್ತು ಪರಿಹಾರವಾಗಿ 10 ಸಾವಿರ ರೂ. ನೆರವು ನೀಡಲಾಗಿದೆ. ತೀವ್ರ ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂ.ಪರಿಹಾರ ಕೊಡಲಾಗುತ್ತಿದೆ ಎಂದರು.