Advertisement

ಪಿಎಚ್‌ಡಿ ಪರೀಕ್ಷೆ ಬರೆದ ಕೊಪ್ಪಳದ 91ರ ವೃದ್ದ

06:15 AM Sep 06, 2018 | Team Udayavani |

ಕೊಪ್ಪಳ/ಬಳ್ಳಾರಿ: ಶಿಕ್ಷಣ ಪಡೆವ ಹಂಬಲಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ಕೊಪ್ಪಳ ತಾಲೂಕಿನ ಬಿಸರಳ್ಳಿಯ 91ರ ಇಳಿ ವಯಸ್ಸಿನ ಬಸವರಾಜ ಬಿಸರಳ್ಳಿ ಅವರೇ  ಸಾಕ್ಷಿ. ತಮ್ಮ ಇಳಿ ವಯಸ್ಸಿನಲ್ಲಿಯೂ ಪಿಎಚ್‌ಡಿ ಪದವಿ ಪಡೆಯಬೇಕೆಂಬ ಆಸೆಯಿಂದ ಬಳ್ಳಾರಿಯ ಹಂಪಿ ವಿವಿಯಲ್ಲಿ ಮಂಗಳವಾರ ಪರೀಕ್ಷೆ ಬರೆದಿದ್ದಾರೆ.

Advertisement

ಸ್ವಾತಂತ್ರ್ಯ ಹೋರಾಟಗಾರರಾದ ಶರಣ ಬಸವರಾಜ ಬಿಸರಳ್ಳಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 1992ರಲ್ಲಿ ನಿವೃತ್ತರಾಗಿದ್ದಾರೆ. ಆಗಿನಿಂದಲೂ ಪಿಎಚ್‌ಡಿ ಪದವಿ ಪಡೆಯಬೇಕೆಂದು ಆಸೆಯನ್ನಿಟ್ಟುಕೊಂಡಿದ್ದರು. ಆದರೆ ವಿವಿಧ ಕಾರಣಗಳಿಂದ  ಆಸೆ ಈಡೇರಿರಲಿಲ್ಲ. ಈ ಮೊದಲು ಕರ್ನಾಟಕ ವಿವಿಯಲ್ಲಿ ಎಂಎ ಪದವಿ ಪಡೆದಿದ್ದರು. ಆದರೆ ಪಿಎಚ್‌ಡಿ ಅರ್ಹತೆಗೆ ಬೇಕಾದ ಶೇ.55 ಅಂಕ ಬಂದಿರಲಿಲ್ಲ. ಹಾಗಾಗಿ ಹಂಪಿ ವಿವಿಯಲ್ಲಿ ಎಂಎ ಪದವಿ ಪಡೆದಿದ್ದರು. ಆಗ ಶೇ.66 ಅಂಕ ಬಂದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪಿಎಚ್‌ಡಿಯಲ್ಲಿ ವಚನ ಸಾಹಿತ್ಯ ಅಧ್ಯಯನದ ವಿಭಾಗಕ್ಕಾಗಿ ಪರೀಕ್ಷೆ ಬರೆದಿದ್ದಾರೆ.

ಹಿರಿಯ ಚೇತನ ಶರಣ ಬಸವರಾಜ ಬಿಸರಳ್ಳಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಕವಲೂರು ಶಾಲೆಯ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಮಂಗಳೂರು, ಕೊಪ್ಪಳ ಸೇರಿದಂತೆ ನಾನಾ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. 1992ರಲ್ಲಿ ಮಂಗಳೂರು ಶಾಲೆಯಲ್ಲಿಯೇ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕವಾದರೂ ಪಿಎಚ್‌ಡಿ ಪಡೆಯಬೇಕೆನ್ನುವ ಆಸೆಗೆ ನಿರಂತರ ಪ್ರಯತ್ನ ನಡೆಸಿದ್ದರು. ನಾಲ್ವರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ.  ಐದು ಪುಸ್ತಕಗಳನ್ನು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next