Advertisement

ಉಕ್ಕಿನ ಹಕ್ಕಿಯ ಗೂಡೊಳಗೆ ಸುಂದರ ಬದುಕು…

06:00 AM Jul 10, 2018 | |

ದೇಶ ವಿದೇಶಗಳಿಗೆ ದಿನವೂ ಸಾವಿರಾರು ಮಂದಿಯನ್ನು ಕಳಿಸುವ, ವಿದೇಶಗಳಿಂದ ಬಂದವರನ್ನು “ಬರಮಾಡಿಕೊಳ್ಳುವ ತಾಣ’ ವಿಮಾನ ನಿಲ್ದಾಣ. ಅಲ್ಲಿ ಒಂದು ಸಣ್ಣ ಯಡವಟ್ಟಾದರೂ ದೇಶ ವಿದೇಶಗಳಲ್ಲೆಲ್ಲಾ ಸುದ್ದಿಯಾಗುತ್ತದೆ. ಅಂತ ಅವಘಡಗಳು ಆಗದಿರಲಿ ಎಂಬ ಉದ್ದೇಶದಿಂದಲೇ ಎಲ್ಲ ವಿಭಾಗಕ್ಕೆ ಸಂಬಂಧಿಸಿದ ಮುಕ್ಯ ಅದಿಕಾರಿಗಳನ್ನು “ಏರ್‌ಪೋರ್ಟ್‌ ಅಥಾರಿಟಿ ಅಪ್‌ ಇಂಡಿಯಾ’ ನೇಮಿಸಿಕೊಳ್ಳುತ್ತದೆ. 1972ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ, ಇದೀಗ 908 ಮ್ಯಾನೇಜರ್‌, ಜೂನಿಯರ್‌ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ….

Advertisement

ಏರ್‌ಪೊರ್ಟ್‌ ಅತಾರಿಟಿ ಆಫ್ ಇಂಡಿಯಾ (ಎಎಐ)ದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ವಿಬಾಗದ ಕುರಿತ ವಿವರ ಇಂತಿದೆ. 

ಹುದ್ದೆಗಳೆಷ್ಟು?
ವ್ಯವಸ್ಥಾಪಕ(ಫೈನಾನ್ಸ್‌)- 18
ವ್ಯವಸ್ಥಾಪಕ(ಫೈರ್‌ ಸರ್ವೀಸ್‌)- 16
ವ್ಯವಸ್ಥಾಪಕ(ಟೆಕ್ನಿಕಲ್‌)- 1
ವ್ಯವಸ್ಥಾಪಕ(ಇಂಜಿನಿಯರ್‌ ಎಲೆಕ್ಟ್ರಿಕಲ್‌)- 52
ವ್ಯವಸ್ಥಾಪಕ(ಇಂಜಿನಿಯರ್‌ ಸಿವಿಲ್‌)- 71
ವ್ಯವಸ್ಥಾಪಕ(ಅಫೀಶಿಯಲ್‌ ಲಾಂಗ್ವೇಜ್‌)- 3
ವ್ಯವಸ್ಥಾಪಕ(ಕಮರ್ಷಿಯಲ್‌)- 6
ವ್ಯವಸ್ಥಾಪಕ(ಹ್ಯೂಮನ್‌ ರಿಸೋರ್ಸ್‌)-5
ವ್ಯವಸ್ಥಾಪಕ(ಎಲೆಕ್ಟ್ರಾನಿಕ್ಸ್‌)- 325
ಕಿರಿಯ ಕಾರ್ಯನಿರ್ವಾಹಕ(ಏರ್‌ ಟ್ರಾಫಿಕ್‌ ಕಂಟ್ರೋಲ್‌)- 200
ಕಿರಿಯ ಕಾರ್ಯನಿರ್ವಾಹಕ(ಫೈನಾನ್ಸ್‌)- 25
ಕಿರಿಯ ಕಾರ್ಯನಿರ್ವಾಹಕ(ಫೈರ್‌ ಸರ್ವೀಸ್‌)-15
ಕಿರಿಯ ಕಾರ್ಯನಿರ್ವಾಹಕ(ಏರ್‌ಪೋರ್ಟ್‌ ಆಪರೇಷನ್ಸ್‌)-69
ಕಿರಿಯ ಕಾರ್ಯನಿರ್ವಾಹಕ(ಟೆಕ್ನಿಕಲ್‌)-10
ಕಿರಿಯ ಕಾರ್ಯನಿರ್ವಾಹಕ(ಅಫೀಶಿಯಲ್‌ ಲಾಂಗ್ವೇಜ್‌)-06
ಕಿರಿಯ ಕಾರ್ಯನಿರ್ವಾಹಕ( ಇನ್ಫರ್ಮೇಷನ್‌ ಟೆಕ್ನಾಲಜಿ)-27
ಕಿರಿಯ ಕಾರ್ಯನಿರ್ವಾಹಕ(ಕಾರ್ಪೊರೇಟ್‌ ಮ್ಯಾನೇಜ್‌ಮೆಂಟ್‌ ಮತ್ತು ಮ್ಯಾನೇಜ್‌ಮೆಂಟ್‌ ಸರ್ವೀಸ್‌)-03
ಕಿರಿಯ ಕಾರ್ಯನಿರ್ವಾಹಕ(ಹ್ಯೂಮನ್‌ ರಿಸೋರ್ಸ್‌)-32
ಕಿರಿಯ ಕಾರ್ಯನಿರ್ವಾಹಕ(ಕಮರ್ಷಿಯಲ್‌)-25

ಒಟ್ಟು 908 ಹುದ್ದೆಗಳು 

ವಿದ್ಯಾರ್ಹತೆ, ವಯೋಮಿತಿ
ವ್ಯವಸ್ಥಾಪಕ ಮತ್ತು ಕಿರಿಯ ಕಾರ್ಯನಿರ್ವಾಹಕರ ಹುದ್ದೆಗಳಿಗೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಪದವಿ, ಇಂಜಿನಿಯರ್‌ ಹುದ್ದೆಗಳಿಗೆ ಬಿ.ಇ/ಬಿ.ಟೆಕ್‌ ಪದವಿ ಪಡೆದಿರಬೇಕು. ವ್ಯವಸ್ಥಾಪಕ ಹುದ್ದೆಗಳಿಗೆ 5 ವರ್ಷಗಳ ವೃತ್ತಿ ಅನುಭವ ಅಗತ್ಯ. ಕಿರಿಯ ಕಾರ್ಯನಿರ್ವಾಹಕ ಹುದ್ದೆಗೆ ವೃತ್ತಿ ಅನುಭವದ ಅಗತ್ಯವಿಲ್ಲ. ಈ ಎಲ್ಲ ಹುದ್ದೆಗಳನ್ನು ಸಾಮಾನ್ಯ, ಪರಿಶಿಷ್ಟ ವರ್ಗದವರಿಗೆ ವಿಂಗಡನೆ ಮಾಡಲಾಗಿದೆ. ಜೂ. 30ಕ್ಕೆ ಅನುಗುಣವಾಗಿ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ಮತ್ತು ಕಿರಿಯ ಕಾರ್ಯ ನಿರ್ವಾಹಕ ಹುದ್ದೆಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ವ್ಯವಸ್ಥಾಪಕ ಹುದ್ದೆಗೆ 60,000-1,80,000 ರೂ. ಮತ್ತು ಕಿರಿಯ ಕಾರ್ಯನಿರ್ವಾಹಕ ಹುದ್ದೆಗೆ 40,000- 1,40,000 ರೂ. ವೇತನ ಇರುತ್ತದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಆನ್‌ಲೈನ್‌ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರ ದಾಖಲೆ ಪರಿಶೀಲನೆ, ಸಂದರ್ಶನ, ದೈಹಿಕ ಪರೀಕ್ಷೆ, ಧ್ವನಿ ಮತ್ತು ಸಹಿಷ್ಣುತೆ ಪರೀಕ್ಷೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಆಯ್ಕೆ ಪತ್ರ ರವಾನಿಸಲಾಗುತ್ತದೆ.

Advertisement

ಅರ್ಜಿ ಸಲ್ಲಿಕೆ ವಿಧಾನ
ಎಎಐನ www.aai.aero ಮೂಲಕ ಪ್ರವೇಶಿಸಿ ತಮ್ಮ ಇ-ಮೇಲ್‌ ಅಡ್ರೆಸ್‌ ನಮೂದಿಸಿ ರಿಜಿಸ್ಟರ್‌ ಆಗಬೇಕು. ಬಳಿಕ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ತಾವು ಬಯಸಿದ ಹುದ್ದೆಗೆ ಅನುಗುಣವಾಗಿ ನಮೂದಿಸಿದರೆ ರಿಜಿಸ್ಟ್ರೇಷನ್‌ ಸ್ಲಿಪ್‌ ನಮೂದಾಗುತ್ತದೆ. ಅದರ ಮೂಲಕ 24 ಗಂಟೆಗಳೊಳಗೆ ಎಎಐ ವೆಬ್‌ಸೈಟಿನ ಮೂಲಕವೇ ಅಪ್ಲಿಕೇಷನ್‌ ನಂಬರ್‌, ಜನ್ಮ ದಿನಾಂಕ ನಮೂದಿಸಿ ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಸಹಾಯದಿಂದ ಶುಲ್ಕ ಪಾವತಿಸಬಹುದಾಗಿದೆ.
ಅರ್ಜಿಗಳು ಜುಲೈ 16ರಿಂದ ಸಿಗುತ್ತವೆ. ಅರ್ಜಿ ಸಲ್ಲಿಕೆಗೆ ಆಕ್ಟೋಬರ್‌ 16 ಕಡೆಯ ದಿನ. ಅರ್ಜಿ ಶುಲ್ಕ 1000 ರೂ. ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಆಕ್ಟೋಬರ್‌ 18 ಕಡೆಯ ದಿನ.
ಹೆಚ್ಚಿನ ಮಾಹಿತಿಗೆ: www.goo.gl/ZXHUqs

ಎನ್. ಅನಂತನಾಗ್ 

Advertisement

Udayavani is now on Telegram. Click here to join our channel and stay updated with the latest news.

Next