Advertisement

ಸ್ಪೈಸ್‌ಜೆಟ್‌ನ 90 ಪೈಲಟ್‌ಗಳಿಗೆ 737 ಮ್ಯಾಕ್ಸ್‌ ಸಂಚಾರ ನಡೆಸುವುದಕ್ಕೆ ನಿರ್ಬಂಧ

08:51 PM Apr 13, 2022 | Team Udayavani |

ನವದೆಹಲಿ: ಭಾರತದಲ್ಲಿ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳನ್ನು ಹೊಂದಿರುವ ಏಕೈಕ ಏರ್‌ಲೈನ್‌ ಸಂಸ್ಥೆಯಾಗಿರುವ ಸ್ಪೈಸ್‌ಜೆಟ್‌ನ 90 ಪೈಲೆಟ್‌ಗಳಿಗೆ 737 ಮ್ಯಾಕ್ಸ್‌ ಸಂಚಾರ ನಡೆಸುವುದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ನಿರ್ಬಂಧ ವಿಧಿಸಿದೆ.

Advertisement

ಸ್ಪೈಸ್‌ಜೆಟ್‌ ಸಂಸ್ಥೆಯಲ್ಲಿ 11 ಮ್ಯಾಕ್ಸ್‌ ವಿಮಾನಗಳಿದ್ದು, ಅದಕ್ಕಾಗಿ 650 ಪೈಲೆಟ್‌ಗಳಿಗೆ ತರಬೇತಿ ನೀಡಲಾಗಿತ್ತು. ಅದರಲ್ಲಿ 90 ಪೈಲೆಟ್‌ಗಳ ತರಬೇತಿ ಸೂಕ್ತ ರೀತಿಯಲ್ಲಿ ಆಗಿಲ್ಲ ಎಂದು ಸಚಿವಾಲಯ ದೂರಿದೆ.

ಇದನ್ನೂ ಓದಿ:ಹಿಜಾಬ್ ತೀರ್ಪಿಗೆ ಬೆದರಿಕೆ : ಆರೋಪಿ ಮನವಿಯ ಮೇಲೆ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಆ ಹಿನ್ನೆಲೆ ಅವರಿಗೆ ಮರುತರಬೇತಿ ಪಡೆಯುವಂತೆ ಆದೇಶಿಸಿದೆ. ತರಬೇತಿ ಸಂಪೂರ್ಣವಾಗುವವರೆಗೆ ಅವರಿಗೆ ಬೋಯಿಂಗ್‌ 737 ವಿಮಾನ ಸಂಚರಿಸಲು ಅವಕಾಶವಿರಲಿದೆ.

ಸಚಿವಾಲಯದ ಈ ನಿರ್ಧಾರದಿಂದ ಮ್ಯಾಕ್ಸ್‌ ವಿಮಾನ ಹಾರಾಟಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next