Advertisement
ಸಾವಿನ ಲೆಕ್ಕಾಚಾರದಲ್ಲಿ ಶೇ. 80 ಪ್ರಕರಣಗಳು ದೇಶದ 32 ಜಿಲ್ಲೆಗಳಲ್ಲಿ ಕಂಡುಬಂದಿದ್ದು ,ಇದರಲ್ಲಿ ಬೆಂಗಳೂರು ನಗರ, ಬೀದರ್ ಜಿಲ್ಲೆಗಳು ಸೇರಿವೆ ಎಂದು ಈ ಸಮಿತಿ ಹೇಳಿದೆ. ಜತೆಗೆ ದೇಶದಲ್ಲಿ ಕೋವಿಡ್ ಸಾಮುದಾಯಿಕವಾಗಿ ಇನ್ನೂ ವ್ಯಾಪಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Related Articles
ಕೋವಿಡ್ ವಿಚಾರದಲ್ಲಿ ದೇಶವು ಮತ್ತೊಂದು ದೈನಂದಿನ ಗರಿಷ್ಠ ದಾಖಲೆ ಕಂಡಿದ್ದು, ಒಂದೇ ದಿನ 24,879 ಮಂದಿಗೆ ಸೋಂಕು ದೃಢಪಟ್ಟಿದೆ. ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರ ವರೆಗಿನ ಅವಧಿಯಲ್ಲಿ ಇಷ್ಟು ಮಂದಿಗೆ ಸೋಂಕು ತಗಲಿದ್ದು, 487 ಮಂದಿ ಸಾವಿಗೀಡಾಗಿದ್ದಾರೆ. ಗುಣಮುಖ ಪ್ರಮಾಣ ಶೇ.62.08ಕ್ಕೆ ಏರಿದ್ದು, ಈವರೆಗೆ 4.67 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 24 ತಾಸುಗಳಲ್ಲಿ ಮೃತಪಟ್ಟ ಈ 487 ಮಂದಿಯ ಪೈಕಿ 198 ಮಂದಿ ಮಹಾರಾಷ್ಟ್ರ, 64 ಮಂದಿ ತಮಿಳುನಾಡು ಮತ್ತು 54 ಮಂದಿ ಕರ್ನಾಟಕಕ್ಕೆ ಸೇರಿದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Advertisement
ಚೇತರಿಕೆ ಮಟ್ಟ ಶೇ.62ಕ್ಕೆಕೋವಿಡ್ ಏರುತ್ತಿರುವ ನಡುವೆ ದೇಶದಲ್ಲಿ ಶೇ. 62.09 ಮಂದಿ ಚೇತರಿಸಿ ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ದೇಶ ದಲ್ಲಿ 7.72 ಲಕ್ಷ ಪ್ರಕರಣಗಳು ದಾಖಲಾಗಿದ್ದರೆ ಇದ ರಲ್ಲಿ 4.78 ಲಕ್ಷ ಮಂದಿ ಗುಣ ಹೊಂದಿದ್ದಾರೆ. 2.72 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. 21 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದಲ್ಲಿ ಚೇತರಿಕೆಯೇ ಹೆಚ್ಚಿದೆ.