Advertisement

ಉಡುಪಿ: 90 ಪಾಸಿಟಿವ್‌ ಪ್ರಕರಣ ; 75 ಮಂದಿ ಸ್ಥಳೀಯರು

02:00 AM Jul 12, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಶನಿವಾರ 573 ಕೋವಿಡ್ 19 ನೆಗೆಟಿವ್‌ ಮತ್ತು 90 ಪಾಸಿಟಿವ್‌ ಪ್ರಕರಣ ವರದಿಯಾಗಿವೆ.

Advertisement

ಇದು ಇತ್ತೀಚಿನ ದಿನಗಳಲ್ಲಿ ವರದಿಯಾದ ಹೆಚ್ಚಿನ ಪಾಸಿಟಿವ್‌ ಸಂಖ್ಯೆಯಾಗಿದೆ.

ಪಾಸಿಟಿವ್‌ ಪ್ರಕರಣಗಳಲ್ಲಿ ಓರ್ವ ಎಎಸ್‌ಐ ಇದ್ದಾರೆ.

ಪಾಸಿಟಿವ್‌ ಪ್ರಕರಣಗಳಲ್ಲಿ ಉಡುಪಿ ತಾಲೂಕಿನವರು 66, ಕುಂದಾಪುರ ತಾಲೂಕಿನವರು 20, ಕಾರ್ಕಳ ತಾಲೂಕಿನವರು 4 ಮಂದಿ. 57 ಪುರುಷರು, 25 ಮಹಿಳೆಯರು, ಮೂವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳಿದ್ದಾರೆ.

ಮುಂಬಯಿಯಿಂದ ಬಂದ 8 ಮಂದಿ, ಬೆಂಗಳೂರಿನಿಂದ ಬಂದ ಐವರು, ದ.ಕ. ಮತ್ತು ರಾಯಚೂರಿನಿಂದ ಬಂದ ತಲಾ ಒಬ್ಬರಿಗೆ ಸೋಂಕು ತಗಲಿದೆ. 75 ಮಂದಿ ಸ್ಥಳೀಯರಾಗಿದ್ದಾರೆ. ಅವರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ.

Advertisement

ಎಂಟು ಮಂದಿ ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯಿಂದ, 11 ಮಂದಿ ಕಾರ್ಕಳ ತಾಲೂಕು ಆಸ್ಪತ್ರೆಯಿಂದ, ಇಬ್ಬರು ಕುಂದಾಪುರ ತಾಲೂಕು ಆಸ್ಪತ್ರೆಯಿಂದ ಒಟ್ಟು 21 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಶನಿವಾರ 269 ಮಾದರಿ ಸಂಗ್ರಹಿಸಿದ್ದು ಈವರೆಗಿನ ಮಾದರಿಗಳ ಸಂಖ್ಯೆ 21,678ಕ್ಕೇರಿದೆ. ಒಟ್ಟು 18,081 ನೆಗೆಟಿವ್‌ ಮತ್ತು 1,567 ಪಾಸಿಟಿವ್‌ ಪ್ರಕರಣಗಳಾಗಿವೆ. 1,245 ಜನರು ಗುಣಮುಖರಾಗಿದ್ದಾರೆ. 319 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 2,030 ಮಾದರಿಗಳ ವರದಿ ಬರಬೇಕಿದೆ. ಪ್ರಸ್ತುತ 1,285 ಮಂದಿ ಮನೆ ಮತ್ತು 137 ಮಂದಿ ಐಸೊಲೇಶನ್‌ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಮೃತ ವ್ಯಕ್ತಿಗೆ ಪಾಸಿಟಿವ್‌
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಲ್ಪೆ ಮೂಲದ 55ರ ಹರೆಯದ ವ್ಯಕ್ತಿಯೋರ್ವರ ಸಾವು ಕೋವಿಡ್ 19 ಸೋಂಕಿನಿಂದ ಸಂಭವಿಸಿರುವುದು ದೃಢವಾಗಿದೆ. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೋವಿಡ್ 19 ನೆಗೆಟಿವ್‌ ಬಂದಿತ್ತು. ಗುರುವಾರ ಮೃತಪಟ್ಟಿದ್ದು, ಆ ಬಳಿಕ ನಡೆಸಿದ ಪರೀಕ್ಷೆಯ ವರದಿಯಲ್ಲಿ ಸೋಂಕು ದೃಢವಾಗಿದೆ.

ಪಡುಬಿದ್ರಿ: 11 ಪ್ರಕರಣ
ಮುಂಬಯಿಯಿಂದ ಬಂದಿರುವ ಬೆಂಗ್ರೆಯ 6 ಮಂದಿ, ಬೆಂಗಳೂರಿನಿಂದ ಬಂದಿರುವ ಎರ್ಮಾಳಿನ ದಂಪತಿ, ಹೆಜಮಾಡಿ ಗರಡಿ ಬಳಿಯ  ಅಕ್ಕ, ತಮ್ಮ, ನಡ್ಪಾಲಿನ ಸೋಂಕಿತ ಸಹೋದರರ ಪ್ರಾಥಮಿಕ ಸಂಪರ್ಕ ಹೊಂದಿರುವ ಹೆಜಮಾಡಿ ಮಸೀದಿ ಬಳಿಯ ವ್ಯಕ್ತಿಯ ಸಹಿತ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 11 ಮಂದಿಯಲ್ಲಿ ಶನಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರಲ್ಲಿ 6 ಮತ್ತು 11 ವರ್ಷದ ಮಕ್ಕಳೂ ಇದ್ದಾರೆ.

ಹೆಜಮಾಡಿ ಗರಡಿ ಬಳಿಯ ಅಕ್ಕ-ತಮ್ಮ ತಿಂಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದು, ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಲಾಗಿತ್ತು.

ಹೆತ್ತವರೊಂದಿಗೆ ಮಗನೂ ಆಸ್ಪತ್ರೆಗೆ ಬಾಧಿತರೆಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಬಂದ ದಂಪತಿಗೆ 10 ವರ್ಷದ ಮಗನಿದ್ದು ಆತನಿಗೆ ಸೋಂಕು ಇಲ್ಲದಿದ್ದರೂ ಅನಿವಾರ್ಯವಾಗಿ ಹೆತ್ತವರೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಯ ಎಲ್ಲರ ವರದಿ ನೆಗೆಟಿವ್‌

ಇದೇ ಸಂದರ್ಭ ಪಡುಬಿದ್ರಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ 21 ಸಿಬಂದಿ ಮತ್ತು 8 ಮಂದಿ ಆಶಾ ಕಾರ್ಯ ಕರ್ತೆಯರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ಕರ್ಕುಂಜೆ ಯುವಕನಿಗೆ ಕೋವಿಡ್ 19 ಪಾಸಿಟಿವ್‌
ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ಪರಿಸರದ ಯುವಕನಿಗೆ ಕೋವಿಡ್ 19 ಪಾಸಿಟಿವ್‌ ದೃಢವಾಗಿದೆ. ಚಾಲಕರಾಗಿರುವ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದು, ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಮೂವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಪ್ರಯೋಗಾಲಯ ಕಾರ್ಯಾರಂಭ
ಉಡುಪಿಯ ಜಿಲ್ಲಾಸ್ಪತ್ರೆ ಯಲ್ಲಿ ಆರಂಭಗೊಂಡ ಸರಕಾರಿ ಪ್ರಯೋಗಾಲಯವು ಜು. 9ರಿಂದ ಕಾರ್ಯಾರಂಭಿಸಿದೆ. ಶನಿವಾರ 48 ಗಂಟಲ ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next