Advertisement
ಇತ್ತೀಚೆಗೆ ಕೊರೆಸಲಾದ 144 ಬೋರ್‌ವೆಲ್‌ಗಳ ಪೈಕಿ 130 ಬೋರ್‌ವೆಲ್‌ಗಳಲ್ಲಿ ಉತ್ತಮ ನೀರು ಲಭ್ಯವಾಗುವ ಮೂಲಕ ಶೇ.90ರಷ್ಟು ಸಕ್ಸಸ್ ರೇಟ್ ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ ಅಂತರ್ಜಲ ಕೊರತೆ ಯಿಂದಾಗಿ ಆದಂತಹ ನೀರಿನ ಅಭಾವವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿಯು ಹಲವಾರು ಮುಂಜಾಗ್ರತಾ ಕ್ರಮ ಗಳನ್ನು ಅಳವಡಿಸಿಕೊಳ್ಳಲು ಮುಂದಾಗಿತ್ತು.
Related Articles
Advertisement
ಬತ್ತುತ್ತಲೇ ಇವೆ ಕೊಳವೆ ಬಾವಿಗಳು
ಬೆಂಗಳೂರಿನಲ್ಲಿ ಶೇ.56ರಷ್ಟು ಕೊಳವೆ ಬಾವಿಗಳು ಬತ್ತಿ ಹೋದರೆ, ಇನ್ನುಳಿದ ಶೇ.20ರಷ್ಟು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬರುತ್ತಿದ್ದು, ಶೀಘ್ರದಲ್ಲೇ ಬತ್ತುವ ಲಕ್ಷಣ ಗೋಚರಿಸಿದೆ. ಬೆಂಗಳೂರಿನ ಶೇ.60ರಷ್ಟು ಮಂದಿ ಕೊಳವೆ ಬಾವಿಗಳನ್ನೇ ಆಶ್ರಯಿಸಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಭಾರಿ ಬೆಲೆ ತೆತ್ತಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಚಾಲ್ತಿಯಲ್ಲಿರುವ ಶೇ.50ರಷ್ಟು ಕುಡಿಯುವ ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ದಿನದ ಕೆಲವು ಗಂಟೆ ಮಾತ್ರ ಸೇವೆ ನೀಡುತ್ತಿವೆ. ಈ ಘಟಕಗಳ ಮುಂದೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಅಲ್ಲಲ್ಲಿ ಕಾಣ ಸಿಗುತ್ತವೆ. ವೈಟ್ ಫೀಲ್ಡ್, ಯಲಹಂಕ, ರಾಜ ರಾಜೇಶ್ವರಿನಗರ, ಮಹದೇವಪುರ, ಮಾರತ್ತಳ್ಳಿ, ಸರ್ಜಾಪುರ ರಸ್ತೆ ಪ್ರಮುಖ ಭಾಗಗಳಲ್ಲಿ ನೀರಿಗೆ ಬೇಡಿಕೆ ವ್ಯಕ್ತವಾಗುತ್ತಿದೆ.
ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸುವ ನಿಟ್ಟಿನಲ್ಲಿ ಜಲಮಂಡಳಿಯಿಂದ ಕೊಳವೆ ಬಾವಿ ಕೊರೆಸಲಾಗಿದೆ. ಸಾರ್ವಜನಿಕರು ಈ ಕೊಳವೆ ಬಾವಿ ಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಬೆಂಗಳೂರಿಗರ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿಯು ಸಿದ್ಧವಾಗಿದೆ. ●ಡಾ|ವಿ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ
■ ಅವಿನಾಶ ಮೂಡಂಬಿಕಾನ