Advertisement
ವೀಣೆ ಜನಪ್ರಿಯ ಸಂಗೀತೋಪಕರಣವಲ್ಲವಾದರೂ ಕೇವಲ ಕರಾವಳಿಯಲ್ಲಿರುವ 90 ವೀಣಾ ಕಲಾವಿದರನ್ನು ಕಲೆ ಹಾಕಿ ಅವರಿಂದ ಏಕಕಾಲದಲ್ಲಿ ವೀಣಾ ಝೇಂಕಾರ ಹೊರಡಿಸಿದ್ದು ಮಣಿಪಾಲದ ಡಾ|ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಸಾಧನೆ. ಎರಡೇ ಜಿಲ್ಲೆಗಳ ಕರಾವಳಿಯಲ್ಲಿ ಬೆಂಗಳೂರು ಬಾನಿ, ಮೈಸೂರು ಬಾನಿ, ತಿರುವನಂತಪುರ ಬಾನಿ ಹೀಗೆ ನಾನಾ ಶೈಲಿಯ ಇಷ್ಟೊಂದು ವೀಣಾ ವಾದಕರಿರುವುದು, ಈ ಇರುವಿಕೆ ಗೊತ್ತಾದದ್ದೂ ವಿಶೇಷ. ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಜು. 1ರಂದು ಟ್ರಸ್ಟ್ ನಡೆಸಿದ ಕಲಾಸ್ಪಂದನ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಈ ಐತಿಹಾಸಿಕವಾದ ಕಾರ್ಯಕ್ರಮ ಸಂಪನ್ನಗೊಂಡಿತು.
ಎಲ್ಲ ಕಲಾವಿದರೂ ತುಳಸಿಯ ಸಂಕೇತವಾದ ಹಸಿರು ಬಣ್ಣದ ಸೀರೆಗಳನ್ನು ಉಟ್ಟಿದ್ದರು. ಇದರಲ್ಲಿ ತುಳಸಿ ದಳದ ಚಿತ್ರವೂ ಇದೆ. ಉದ್ಯಾವರದ ಜಯಲಕ್ಷ್ಮೀ ಸ್ಟೋರ್ಗೆ ಸಂಘಟಕಿ ಪವನ ಆಚಾರ್ ಹೋಗಿ ನೋಡಿದಾಗ ಇಂತಹ ಸೀರೆ ಉತ್ತಮವೆಂದೆನಿಸಿತು. 67 ಮಹಿಳಾ ಕಲಾವಿದರು, 13 ಜನ ಪುರುಷ ಕಲಾವಿದರಿಗೆ ಅಗತ್ಯದ ಉಡುಗೆಗಳನ್ನು ಸೂರತ್‌ನಿಂದ ತರಿಸಿಕೊಟ್ಟವರು ಅಂಗಡಿ ಮಾಲಕರು. ಇದು ಪರಿಸರಸಹ್ಯ ಸಂಕೇತವಾಗಿಯೂ ಮೂಡಿಬಂತು. 90 ವೀಣಾವಾದಕರು ಕಾರ್ಯಕ್ರಮ ನೀಡಲು ಅನುವಾಗುವಂತೆ ವೇದಿಕೆ ವಿನ್ಯಾಸ ಮಾಡಿಕೊಟ್ಟ ಕೀರ್ತಿ ಜೈ ಹನುಮಾನ್ ಎಂಟರ್‌ಪ್ರೈಸೆಸ್‌ನ ಉದಯ್ ಮತ್ತು ವಿಜಯ್‌ಗೆ ಸಲ್ಲಬೇಕು.
Related Articles
ಮಂಗಳೂರು, ಉಡುಪಿ, ಪುತ್ತೂರು, ಸಾಲಿಗ್ರಾಮ, ಸುರತ್ಕಲ್, ಕಾರ್ಕಳ ಮೊದಲಾ ದೆಡೆಗಳಿಂದ ಕಲಾವಿದರು ವೈಣಿಕ ಸೇವೆಯನ್ನು ನಡೆಸಿದರು. ಇಲ್ಲೆಲ್ಲ ವೀಣೆಯನ್ನು ಕಲಿಸುವ ಶಾಲೆಗಳಿವೆ, ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಕೇವಲ ಹತ್ತು ವರ್ಷದ ಬಾಲಕರಿಂದ ಹಿಡಿದು ಹಿರಿಯ ಕಲಾವಿದರೂ ಇದ್ದರು. ಕಾರ್ಕಳದ ಪ್ರದ್ಯುಮ್ನ ಮತ್ತು ಅಭಿನವ ಕೇವಲ ಹತ್ತು ವರ್ಷದ ಬಾಲಕರು. ಹಿರಿಯ ವೀಣಾವಾದಕಿ ಜಯಲಕ್ಷ್ಮೀ ಸಾಣೂರು ಅವರು 68 ವರ್ಷದ ಹಿರಿಯರು, ಇವರು ವಿವಿಧೆಡೆ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರಲ್ಲದೆ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯೂ ಹೌದು. ಇವರಲ್ಲಿ ಎ ಶ್ರೇಣಿ ಕಲಾವಿದೆ ಮಣಿಪಾಲದ ಅರುಣಾಕುಮಾರಿ, ಮಂಗಳೂರಿನ ಗೋಪಾಲ ಮುದ್ಗಲ್, ಪುತ್ತೂರಿನ ಮೀನಾಕ್ಷಿ, ವಿಪಂಚಿ ಬಳಗದ ರಾಮಕೃಷ್ಣನ್, ವೀಣಾ ಉಪಾಧ್ಯಾಯ, ಶಿಲ್ಪಾ ಜೋಷಿ, ಸುಮಂಗಲಾ ಹೆಬ್ಟಾರ್, ಜಯಲಕ್ಷ್ಮೀ ಸಾಣೂರು, ಮಣಿಪಾಲದ ಶಶಿಕಲಾ ಎನ್. ಭಟ್, . ಸುರತ್ಕಲ್‌ನ ಅರ್ಜುನ ಮುದ್ಲಾಪುರ ಮೊದಲಾದವರು ವೀಣಾ ವಾದನದ ಕಛೇರಿ ಕೊಡುವವರು.
Advertisement
12ನೆಯ ವರ್ಷಕ್ಕೆ ವೀಣಾವಾದನವನ್ನು ಆರಂಭಿಸಿದ ಯುವಕ ರಾಮಕೃಷ್ಣನ್ ವೀಣಾ ವಾದನ ನುಡಿಸಿದರೆ, ಅರ್ಜುನ್ ಎಂ., ಡಾ|ಬಾಲಕೃಷ್ಣನ್ ಆರ್., ವೈಭವ ಪೈ ಅವರು ಕ್ರಮವಾಗಿ ವೀಣೆ, ವೇಣು, ಪಿಟೀಲಿನ ಜುಗಲ್ಬಂದಿ ನಡೆಸಿದರು. ಇವರಿಗೆ ಡಾ|ಬಾಲಚಂದ್ರ ಆಚಾರ್, ಬಾಲಚಂದ್ರ ಭಾಗವತ್ ಮೃದಂಗ ಸಹಕಾರ ನೀಡಿದರು. ಹೋದ ವರ್ಷ ರಾಮದಾಸ ಆಚಾರ್ಯರ ಸಾಮವೇದ ಗಾಯನವನ್ನು ವೀಣೆಯಲ್ಲಿ ಪವನ ಆಚಾರ್ ನುಡಿಸಿ ಹೊಸ ದಾಖಲೆ ನಿರ್ಮಿಸಿದ್ದರೆ ಈ ಬಾರಿ ಕೇವಲ ಸಾಮವೇದ ಗಾಯನ ಮಾತ್ರ ನಡೆಸಲಾಯಿತು. ಮುಖ್ಯ ಕಛೇರಿಯನ್ನು ಯೋಗವಂದನಾ ನಡೆಸಿದರೆ, ಕಲಾಸ್ಪಂದನದ ವಿದ್ಯಾರ್ಥಿಗಳು “ರಾಘವೇಂದ್ರ ಮಹಿಮೆ’ ವೀಣಾ ನಾಟಕ ನಡೆಸಿಕೊಟ್ಟರು. ಇದರಲ್ಲಿ ವೈಭವ ಪೈಯವರ ನಿರ್ದೇಶನದಲ್ಲಿ ವಿದ್ಯಾರ್ಥಿ ಗಳು ರಾಘವೇಂದ್ರಸ್ವಾಮಿಗಳು ರಚಿಸಿದ ಸ್ತೋತ್ರ, “ಇಂದು ಎನಗೆ ಗೋವಿಂದ’ ದಾಸರ ಹಾಡು ಗಳನ್ನು ವೀಣೆಯಲ್ಲಿ ನುಡಿಸಿದರು ಮತ್ತು ಮೌಖೀಕ ವಾಗಿಯೂ ನಾಟಕವನ್ನು ಪ್ರದರ್ಶಿಸಿದರು. 90 ವೀಣಾ ವಾದಕರು ಸ್ತೋತ್ರ, ತ್ಯಾಗರಾಜರ ರಚನೆ, ಮಧ್ವಾಚಾರ್ಯ, ವಾದಿರಾಜರ ರಚ ನೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಮೂರು ತಲೆಮಾರಿನ ಕಲಾವಿದರುವೀಣಾವೃಂದದಲ್ಲಿ ಹಿರಿಯ ಕಲಾವಿದರಾದ ಯೋಗವಂದನಾ ಬೆಂಗಳೂರು, ಪಾರಂಪಳ್ಳಿ ರಾಮಚಂದ್ರ ಐತಾಳ್, ಪುತ್ತೂರು ಮೀನಾಕ್ಷಿ ರಾವ್, ಮಣಿಪಾಲದ ಅರುಣಾಕುಮಾರಿ, ಜಯಲಕ್ಷ್ಮೀ ಭಟ್ ಸಾಣೂರು, ಸುಮಂಗಲಾ ಹಿರಿಯಡಕ, ಗೋಪಾಲ್ ಮುದ್ಗಲ್, ಮಂಗಳೂರು, ಸುನೀತಾ ಉಡುಪಿ, ಪವನ ಆಚಾರ್ ಒಟ್ಟು 9 ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ಇವರಲ್ಲಿ ಪಾರಂಪಳ್ಳಿ ರಾಮಚಂದ್ರ ಐತಾಳರ ವಯಸ್ಸು 97. ಇವರ ಪುತ್ರಿ ಸುಮಂಗಲಿ, ಮೊಮ್ಮಗಳು ಸುಶ್ರಾವ್ಯ ವೀಣಾವಾದಕರು. ಈ ಮೂವರ ಸಮಾಗಮ ರಾಜಾಂಗಣದಲ್ಲಿ ನಡೆಯಿತು. ರಾಮಚಂದ್ರ ಐತಾಳರು ವಯಸ್ಸಿನ ಕಾರಣಕ್ಕಾಗಿ ವೀಣೆಯನ್ನು ನುಡಿಸಲಿಲ್ಲ. ಮಗಳು, ಮೊಮ್ಮಗಳು ವೀಣೆಯನ್ನು ನುಡಿಸಿ ಸಭಾಸದರ ಮೆಚ್ಚುಗೆ ಗಳಿಸಿದರು. ರಾಷ್ಟ್ರಪತಿ ಕಲಾಂ ಮೆಚ್ಚಿದ್ದ ಕಲಾಬಳಗ
ಕಾರ್ಯಕ್ರಮದ ಸಂಘಟಕಿ ಪವನ ಆಚಾರ್ ಅವರು ಪಳ್ಳತಡ್ಕ ಕೇಶವ ಭಟ್ಟರ ಪುತ್ರಿ. ಸಸ್ಯವಿಜ್ಞಾನಿ ಕೇಶವ ಭಟ್ಟರು ಸಂಗೀತಾಭಿಮಾನಿಯಾಗಿದ್ದರೆ, ತಾಯಿ ದೇವಕಿ ಭಟ್ ಅವರು ಸ್ವತಃ ಗಾಯಕರು. ಪವನ ನೇತೃತ್ವದ ವಿಪಂಚಿ ಬಳಗ 2007ರ ಜೂನ್ 26ರಂದು ಡಾ|ಎ.ಪಿ.ಜೆ.ಅಬ್ದುಲ್‌ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ರಾಷ್ಟ್ರಪತಿ ಭವನದಲ್ಲಿ ಪಂಚವೀಣೆಯನ್ನು ನುಡಿಸಿ ಮೆಚ್ಚುಗೆ ಗಳಿಸಿಕೊಂಡವರು. ಮಟಪಾಡಿ ಕುಮಾರಸ್ವಾಮಿ