Advertisement

ಆಪಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 9 ವರ್ಷದ ಭಾರತೀಯ ಬಾಲಕಿ

11:39 AM Sep 26, 2022 | Team Udayavani |

ಮುಂಬೈ: ಐಒಎಸ್ ಆ್ಯಪ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಆಪಲ್ ಸಿಇಒ ಟಿಮ್ ಕುಕ್ ಅವರು ದುಬೈನಲ್ಲಿ ನೆಲೆಸಿರುವ ಒಂಬತ್ತು ವರ್ಷದ ಭಾರತೀಯ ಬಾಲಕಿಯೊಬ್ಬಳು ಶ್ಲಾಘಿಸಿದ್ದಾರೆ.

Advertisement

‘ಹನಾಸ್’ ಎಂದು ಹೆಸರಿಸಲಾದ ಇದು ಕಥೆ ಹೇಳುವ ಅಪ್ಲಿಕೇಶನ್ ಆಗಿದ್ದು, ಪೋಷಕರು ಕಥೆಗಳನ್ನು ರೆಕಾರ್ಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಅಪ್ಲಿಕೇಶನ್ ಸಣ್ಣ ಕಥೆಗಳು, ಮಲಗುವ ಸಮಯದ ಕಥೆಗಳು ಮತ್ತು ಮಕ್ಕಳಿಗಾಗಿ ನೈತಿಕ ಮತ್ತು ಕ್ಲಾಸಿಕ್ ಕಥೆಗಳನ್ನು ಸಹ ಒಳಗೊಂಡಿದೆ.

9 ವರ್ಷದ ಹನಾ ಮುಹಮ್ಮದ್ ರಫೀಕ್ ಅವರು ಈ ‘ಹನಾಸ್’ ಅಪ್ಲಿಕೇಶನ್‌ ನ ರಚನೆ ಮಾಡಿದವರು. ಹನಾ ಅವರು ವಿಶ್ವದ ಅತ್ಯಂತ ಕಿರಿಯ ಆಪಲ್ ಐಒಎಸ್ ಡೆವಲಪರ್ ಆಗಿದ್ದಾರೆ.

ಇದನ್ನೂ ಓದಿ:ಮತ್ತೊಂದು ಟಿ20 ಗೆಲುವು; ಪಾಕಿಸ್ಥಾನದ ಗೆಲುವಿನ ದಾಖಲೆ ಅಳಿಸಿ ಹಾಕಿದ ಭಾರತ

ಗಲ್ಫ್ ನ್ಯೂಸ್ ವರದಿಯ ಪ್ರಕಾರ ಹನಾ ಅವರು 8 ವರ್ಷದವರಿದ್ದಾಗ ಈ ಆ್ಯಪ್ ಅಭಿವೃದ್ಧಿ ಮಾಡಿದ್ದರು. ಆ್ಯಪ್ ಪೂರ್ಣಗೊಂಡ ಬಳಿಕ ಹನಾ ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಈ ಬಗ್ಗೆ ಇಮೇಲ್ ಮಾಡಿದ್ದರು. ಈ ಇಮೇಲ್ ನಲ್ಲಿ ಹನಾ ಅವರು ಸುಮಾರು 10 ಸಾವಿರಕ್ಕೂ ಹೆಚ್ಚು ಲೈನ್ ಗಳ ಕೋಡ್ ಬರೆದಿದ್ದರು.

Advertisement

ವಿಶೇಷವೆಂದರೆ, ಹನಾ ಅವರು ಮನೆಯಲ್ಲಿಯೇ ತಮ್ಮ ಸಹೋದರಿಯಿಂದ ಈ ಕೋಡಿಂಗ್ ಗಳನ್ನು ಕಲಿತಿದ್ದಾರೆ. ಹನಾ ಸಹೋದರಿಗೆ ಈಗ ಹತ್ತು ವರ್ಷ ಪ್ರಾಯ. ಆಕೆ ಆರು ವರ್ಷವಿದ್ದಾಗಲೇ ವೆಬ್ ಸೈಟೊಂದನ್ನು ರಚಿಸಿದ್ದರು. ಮುಂದಿನ ವರ್ಷ ಆಪಲ್‌ನ ವರ್ಲ್ಡ್‌ವೈಡ್ ಡೆವಲಪರ್‌ ಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹನಾ ಬಯಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next