Advertisement

ಕಿಲಿಮಂಜಾರೊ ಪರ್ವತಾರೋಹಣ: ಋತ್ವಿಕಾ ವಿಶ್ವದ 2ನೇ ಕಿರಿಯ ಸಾಧಕಿ

03:06 AM Mar 02, 2021 | Team Udayavani |

ಅನಂತಪುರ: ಆಂಧ್ರಪ್ರದೇಶದ ಅನಂತ ಪುರ ಜಿಲ್ಲೆಯ ಕೇವಲ 9 ವರ್ಷದ ಕುಮಾರಿ ಋತ್ವಿಕಾ ಶ್ರೀ, ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತ ಕಿಲಿಮಂಜಾರೊವನ್ನು ಏರಿದ್ದಾರೆ.

Advertisement

ಈ ಸಾಧನೆ ಮಾಡಿದ ವಿಶ್ವದ 2ನೇ ಅತೀಕಿರಿಯ, ಏಷ್ಯಾದ ಕಿರಿಯ ಸಾಧಕಿ ಎನಿಸಿಕೊಂಡಿದ್ದಾರೆ. ಸಮುದ್ರ ಮಟ್ಟ ದಿಂದ 5,681 ಮೀ. ಎತ್ತರವಿರುವ ಗಿಲ್ಮನ್‌ ಪಾಯಿಂಟ್‌ ಅನ್ನು ಅವರು ತಲುಪಿ ಅಮೋಘ ಸಾಧನೆ ಮಾಡಿದ್ದಾರೆ.

ಋತ್ವಿಕಾ ಶ್ರೀ ತಂದೆ ಕ್ರಿಕೆಟ್‌ ತರಬೇತುದಾರ. ಅವರಿಗೆ ಪರ್ವತಾರೋಹಣದಲ್ಲಿ ಆಸಕ್ತಿಯಿದೆ. ಮಗಳಿಗೆ ತೆಲಂಗಾಣದ ಬಂಡೆ ಏರುವ ಶಾಲೆಯಲ್ಲಿ, ನಂತರ ಲಡಾಖ್‌ನಲ್ಲಿ ತರಬೇತಿ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next