Advertisement

ತನ್ನ 9 ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಗುಜರಾತ್ ನ ವಜ್ರ ವ್ಯಾಪಾರಿಯ ಮಗಳು

05:49 PM Jan 18, 2023 | Team Udayavani |

ಗುಜರಾತ್: ಗುಜರಾತ್ ಮೂಲದ ವಜ್ರದ ವ್ಯಾಪಾರಿಯ 9 ವರ್ಷದ ಮಗಳು ಭೌತಿಕ ಜೀವನವನ್ನು ತ್ಯಜಿಸಿ ಬುಧವಾರ ಸನ್ಯಾಸ ಜೀವನವನ್ನು ಸ್ವೀಕರಿಸಿದ್ದಾಳೆ.

Advertisement

9 ವರ್ಷದ ದೇವಾಂಶಿ ಸನ್ಯಾಸ ಸ್ವೀಕರಿಸಿದ ಬಾಲಕಿ, ಈಕೆಯ ತಂದೆ ಸೂರತ್‌ನ ಪ್ರಸಿದ್ಧ ಡೈಮಂಡ್ ಪಾಲಿಶಿಂಗ್ ಮತ್ತು ರಫ್ತು ಸಂಸ್ಥೆಯಾದ ಸಾಂಘ್ವಿ ಮತ್ತು ಸನ್ಸ್‌ನ ಮಾಲೀಕರಾಗಿದ್ದಾರೆ. ಈ ಕಂಪನಿಯು ಸುಮಾರು ಮೂರು ದಶಕಗಳಿಂದ ಸೂರತ್‌ನಲ್ಲಿ ಪ್ರಾಬಲ್ಯವನ್ನು ಹೊಂದಿದೆ.

ವಜ್ರದ ವ್ಯಾಪಾರಿಯಾದ ಧನೇಶ್ ಮತ್ತು ಅಮಿ ಸಾಂಘ್ವಿ ಅವರಿಗೆ ಇಬ್ಬರು ಪುತ್ರಿಯರಿದ್ದು, ಅವರಲ್ಲಿ ಹಿರಿಯ ಪುತ್ರಿಯಾದ ದೇವಾಂಶಿ ಸನ್ಯಾಸ ದೀಕ್ಷೆ ಸ್ವೀಕರಿಸಿದವಳು. ಜೈನ ಸನ್ಯಾಸಿ ಆಚಾರ್ಯ ವಿಜಯ್ ಕೀರ್ತಿಶ್ಸೂರಿ ಅವರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದಾಳೆ. ಸೂರತ್‌ನ ವೆಸು ಪ್ರದೇಶದಲ್ಲಿ ಸನ್ಯಾಸ ದೀಕ್ಷೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಅಲ್ಲಿ ಜೈನ ಸನ್ಯಾಸಿಗಳನ್ನು ಹೊರತುಪಡಿಸಿ ನೂರಾರು ಜನರು ಉಪಸ್ಥಿತರಿದ್ದರು. ದೀಕ್ಷಾ ತಪಸ್ವಿ ಜೀವನದ ಪ್ರತೀಕವಾಗಿದ್ದು, ಇದನ್ನು 9 ವರ್ಷದ ದೇವಾಂಶಿ ಒಪ್ಪಿಕೊಂಡಿದ್ದಾಳೆ ಎಂದು ದೇವಾಂಶಿ ತಂದೆ ಹೇಳಿಕೊಂಡಿದ್ದಾರೆ.

ವಜ್ರದ ವ್ಯಾಪಾರಿಯ ಕುಟುಂಬ ಸ್ನೇಹಿತ ನೀರವ್ ಶಾ, ದೇವಾಂಶಿ ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕ ಜೀವನದ ಕಡೆಗೆ ಒಲವು ತೋರುತ್ತಿದ್ದರು ಎಂದು ಹೇಳಿದರು. ಆದ್ದರಿಂದ ಅವರು ಇತರ ಸನ್ಯಾಸಿಗಳೊಂದಿಗೆ ಸೇರಿಕೊಂಡರು ಕಾಲ್ನಡಿಗೆಯಲ್ಲಿ ಸುಮಾರು 700 ಕಿಮೀ ಪ್ರಯಾಣಿಸಿದ್ದರು ಆದರೆ ಈಗ ಅಧಿಕೃತವಾಗಿ ಸನ್ಯಾಸಿ ಜೀವನವನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉಳ್ಳಾಲ ಇನ್ಸ್ ಪೆಕ್ಟರ್ ಇನ್ಸ್ಟಾ ಗ್ರಾಮ್ ಹ್ಯಾಕ್: ನಕಲಿ ಖಾತೆಯಿಂದ ಹಣಕ್ಕಾಗಿ ಬೇಡಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next