3-4 ವಾರದಲ್ಲಿ ನೇರ ಖಾತೆಗೆ ಜಮೆ
ಫೈಲ್ ಮಾಡಿದ ನಂತರ ಇಲಾಖೆ ಪರಶೀಲಿಸುತ್ತದೆ
Advertisement
ವರಮಾನ ತೆರಿಗೆ ಪಾವತಿದಾರರಿಗೆ ಇದು ಗೊತ್ತಿರುತ್ತದೆ. ತ್ರೆ„ಮಾಸಿಕ ಅವಧಿಗೊಮ್ಮೆ ತನ್ನ ಕೆಲಸಗಾರನ ಸಂಬಳ,ಆತ ಆ ವರ್ಷದಲ್ಲಿ ಮಾಡಿರುವ ಹೂಡಿಕೆಗಳನ್ನು ಪರಿಗಣಿಸಿ ಮಾಸಿಕ ವೇತನದಿಂದ ನಿರ್ದಿಷ್ಟ ಮೊತ್ತವನ್ನು ತೆರಿಗೆ ಬಾಬಿ¤ಗೆ ಕಟಾವಣೆ ಮಾಡಿ ಕೇಂದ್ರ ಸರಕಾರಕ್ಕೆ ಠೇವಣಿ ಮಾಡಿರುತ್ತಾರೆ. ಸ್ವಂತ ವ್ಯವಹಾರಸ್ಥರು ಮತ್ತು ಉದ್ದಿಮೆದಾರರು ತಾವೇ ಸ್ವತಃ ಮುಂಗಡ ತೆರಿಗೆ ರೂಪದಲ್ಲಿ ತಮ್ಮ ಆದಾಯಕ್ಕನುಗುಣವಾದ ಮೊತ್ತವನ್ನು ಪಾವತಿ ಮಾಡಿರುತ್ತಾರೆ.
Related Articles
Advertisement
2. ಸಾಮಾನ್ಯವಾಗಿ ವರಮಾನ ತೆರಿಗೆ ರಿಟರ್ನ್ ಫೈಲ್ ಮಾಡಿದ ನಂತರದಲ್ಲಿ ತೆರಿಗೆ ಇಲಾಖೆ ಪರೀಶೀಲನೆ ಮಾಡುತ್ತದೆ, ಸೆಕ್ಷನ್ 143(1)ರ ಅಡಿಯಲ್ಲಿ ಇಂಟಿಮೇಶನ್ ಕಳುಹಿಸಿ, ತೆರಿಗೆ ಲೆಕ್ಕಾಚಾರ ಸರಿ ಇದೆ ಎಂದು ಖಾತ್ರಿ ಪಡಿಸುತ್ತದೆ.
3. ಒಂದೊಮ್ಮೆ ನೀವು ಇ-ಫೈಲಿಂಗ್ ಮಾಡುವವರಾದರೆ ಇಲಾಖೆಯ ವೆಬ್ ಸೈಟಿನಲ್ಲಿ ನಿಮ್ಮ ತೆರಿಗೆ ಲೆಕ್ಕದ ತಃಖೆ¤ಗಳು ಅಪ್ ಲೋಡ್ ಆಗುತ್ತಿದ್ದಂತೆ ಲೆಕ್ಕಾಚಾರಗಳು ಸರಿ ಇವೆಯೇ ಇಲ್ಲವೇ ಎಂಬುದು ಆ ಕ್ಷಣವೇ ಖಾತ್ರಿಯಾಗುತ್ತದೆ.
4. ಹೆಚ್ಚುವರಿ ತೆರಿಗೆ ಪಾವತಿಯಾಗಿದ್ದಲ್ಲಿ ತೆರಿಗೆದಾರನಿಗೆ ರೀಫಂಡ್ ಪಾವತಿಸುವ ಮೊತ್ತಕ್ಕೆ ಇಲಾಖೆ ಬಡ್ಡಿ ಸೇರಿಸಿ ಕೊಡಬೇಕು ಎಂಬ ನಿಯಮ 244-ಎರಲ್ಲಿ ಉಲ್ಲೇಖವಾಗಿದೆ. ಅಡ್ವಾನ್ಸ್ ಟ್ಯಾಕ್ಸ್ ಅಥವಾ ಟಿ.ಡಿ.ಎಸ್. ರೂಪದಲ್ಲಿ ಪಾವತಿಯಾದ ಹೆಚ್ಚುವರಿ ತೆರಿಗೆ ರೀಫಂಡ್ ಆಗಬೇಕಾದ ಸಂದರ್ಭದಲ್ಲಿ ತೆರಿಗೆ ಪಾವತಿದಾರ ಸಕಾಲದಲ್ಲಿ ರಿಟರ್ನ್ ಸಲ್ಲಿಸಿದ್ದಲ್ಲಿ, ಆ ಅಸೆನ್ಮೆಂಟ್ ವರ್ಷದ ಏಪ್ರಿಲ್ ಒಂದರಿಂದ ಮೊದಲ್ಗೊಂಡು ರೀಫಂಡ್ ಕೊಡುವ ದಿನಾಂಕದ ತನಕದ ಅವಧಿಗೆ ಇಲಾಖೆ ಬಡ್ಡಿ ಸೇರಿಸಿ ಕೊಡುತ್ತದೆ. ಒಂದುವೇಳೆ ರಿಟರ್ನ್ ನಿಗದಿತ ವಾಯಿದೆ ಒಳಗಡೆ ಸಲ್ಲಿಕೆಯಾಗದೇ ಇದ್ದಲ್ಲಿ, ರಿಟರ್ನ್ ಸಲ್ಲಿಕೆಯಾದ ದಿನದಿಂದ ರೀಫಂಡ್ ಕೊಡುವ ದಿನದ ತನಕದ ಅವಧಿಗೆ ಇಲಾಖೆ ಬಡ್ಡಿಕೊಡುತ್ತದೆ.
5. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ರೀತಿ ಇಲಾಖೆಯಿಂದ ರೀಫಂಡ್ ಮೊತ್ತದ ಮೇಲೆ ಪಡೆಯಲಾದ ಬಡ್ಡಿಯ ಭಾಗವು ತೆರಿಗೆಗೆ ಒಳಪಡಬೇಕಾದ ಮೊತ್ತವೇ ಆಗಿರುತ್ತದೆ. ಅಂದರೆ ಮುಂದಿನ ವರುಷದ ರಿಟರ್ನ್ ಸಲ್ಲಿಕೆಯಾಗುವಾಗ, ಹಳೆಯ ವರುಷದಲ್ಲಿ ಎಷ್ಟು ಮೊತ್ತ ಬಡ್ಡಿಬಾಬಿ¤ನಿಂದ ಬಂದಿತ್ತು ಎಂಬುದು ನಮೂದು ಮಾಡಬೇಕು.
6. ಒಂದುವೇಳೆ ಲೆಕ್ಕಾಚಾರ ತಪ್ಪಾಗಿ ಹೆಚ್ಚುವರಿ ಮೊತ್ತವೇನಾದರೂ ಆತನಿಗೆ ರೀಫಂಡ್ ಆಗಿದ್ದಲ್ಲಿ ಅದನ್ನು ವಸೂಲಿ ಮಾಡಲು ಸೆಕ್ಷನ್ 234-ಡಿ ಅನ್ವಯ ಇಲಾಖೆ ಕ್ರಮ ತೆಗೆದುಕೊಳ್ಳುವುದಕ್ಕೆ ಸ್ವತಂತ್ರವಿರುತ್ತದೆ. ಅಂತಹ ಸಂದರ್ಭದಲ್ಲಿ ತಾನು ವಸೂಲು ಮಾಡುವ ಮೊತ್ತಕ್ಕೆ ಬಡ್ಡಿ ಸೇರಿಸಿ ವಸೂಲು ಮಾಡುತ್ತದೆ.
7. ತೆರಿಗೆದಾರನು ಟಿ.ಡಿ.ಎಸ್. ಮೂಲಕ ಕಟಾವಣೆ ಆಗಿರುವ ಮೊತ್ತದ ರೀಫಂಡ್ ಪಡೆಯಲು ಮರೆತಿದ್ದಲ್ಲಿ, ಮೊತ್ತ ಕಟಾವಣೆಯಾದಂದಿನಿಂದ ಒಂದು ವರ್ಷದ ಒಳಗಾಗಿ ರೀಫಂಡ್ ಕ್ಲೈಮು ಮಾಡಬೇಕು. ಆ ನಂತರ ಹಳೆಯ ವರ್ಷಗಳ ಬಾಬಿ¤ನ ರೀಫಂಡ್‌ಗಳನ್ನು ಕೇಳುವಂತಿಲ್ಲ. ಅದು ಕೇಂದ್ರ ಸರಕಾರದ ಅನ್ ಕ್ಲೈಮ್‌ಡ್ ರೀಫಂಡ್ ಖಾತೆಗೆ ಜಮಾವಣೆಯಾಗುತ್ತದೆ.
8. ಸಾಮಾನ್ಯವಾಗಿ ತೆರಿಗೆ ರಿಟರ್ನ್ ಸಲ್ಲಿಸಿದ 3-4 ವಾರದಲ್ಲಿ ರೀಫಂಡ್ ಆಗಬೇಕಾದ ಮೊತ್ತ ನೇರವಾಗಿ ತೆರಿಗೆದಾರನ ಬ್ಯಾಂಕ್ ಖಾತೆಗೆ ಜಮಾವಣೆ ಆಗುತ್ತದೆ. ಆಧಾರ್ ಮತ್ತು ಪಾನ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಸರಕಾರವೇ ಕಡ್ಡಾಯಗೊಳಿಸಿದೆ.
9. ಇ-ಫೈಲಿಂಗ್ ಮಾಡುವ ತೆರಿಗೆದಾರರು ತಮ್ಮಿಂದ ಸಲ್ಲಿಕೆಯಾದ ರಿಟರ್ನಿನ ಇ-ವೆರಿಫಿಕೇಶನ್ ಮಾಡಬೇಕು. ಇದಕ್ಕೆ ನೆಟ್ ಬ್ಯಾಂಕಿಂಗ್ ಸೌಲಭ್ಯ ಇರಬೇಕು ಅಥವಾ ಆಧಾರ್ ನಂಬರ್ ಬಳಸಿ ಇ-ವೆರಿಫಿಕೇಶನ್ ಮಾಡಬೇಕು. ರಿಟರ್ನ್ ಸಲ್ಲಿಸಿದ 120 ದಿನಗಳ ಒಳಗಾಗಿ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗೆ ಸಲ್ಲಿಕೆಯಾದ ರಿಟರ್ನ್ ವೆರಿಫೈ ಆಗಿರುವುದು ಖಾತ್ರಿಯಾದ ನಂತರದ 2-3 ವಾರದಲ್ಲಿ ರೀಫಂಡ್ ಬರಬೇಕಾದ ಮೊತ್ತ ತೆರಿಗೆದಾರನ ಖಾತೆಗೆ ಜಮಾವಣೆಯಾಗುತ್ತದೆ.