ಡಮಾಸ್ಕಸ್: ಅಮೆರಿಕದ ವಿರುದ್ಧದ ದಾಳಿಗೆ ಪ್ರತಿಯಾಗಿ ಅಮೆರಿಕದ ಬುಧವಾರ ಪೂರ್ವ ಸಿರಿಯಾದಲ್ಲಿ ಇರಾನ್‌ಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ಸಿರಿಯಾದಲ್ಲಿ ಒಂದು ಸ್ಥಳವನ್ನು ಗುರಿಯಾಗಿಸಿ ನಡೆಸಿದ ಎರಡನೇ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ಕಳೆದ ತಿಂಗಳು, ಈ ಗುಂಪುಗಳು ಸಿರಿಯಾದಲ್ಲಿ ಅಮೆರಿಕದ ಸೈನಿಕರು ಮತ್ತು ಸೇನಾ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.
ಯುಎಸ್ ಮಿಲಿಟರಿ ಪಡೆಗಳು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮತ್ತು ಅಂಗಸಂಸ್ಥೆ ಗುಂಪುಗಳು ಬಳಸುತ್ತಿದ್ದ ಪೂರ್ವ ಸಿರಿಯಾದ ಸೌಲಭ್ಯದ ಮೇಲೆ ಸ್ವಯಂ-ರಕ್ಷಣಾ ದಾಳಿಯನ್ನು ನಡೆಸಿತು. ಈ ದಾಳಿಯನ್ನು ಎರಡು ಯುಎಸ್ ಎಫ್ -15 ಗಳು ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯದ ವಿರುದ್ಧ ನಡೆಸಿತು” ಎಂದು ಆಸ್ಟಿನ್ ತಿಳಿಸಿದ್ದಾರೆ.
ಈ ನಡುವೆ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಮರಕ್ಕೆ ಇರಾನ್ ನೀಡಿರುವ ಕುಮ್ಮಕ್ಕೇ ಕಾರಣ ಅಷ್ಟುಮಾತ್ರವಲ್ಲದೆ ಮಧ್ಯ ಪ್ರಾಚ್ಯದಲ್ಲಿ ಅಶಾಂತಿ ನೆಲೆಸಲು ಇರಾನ್ ಕಾರಣ ಎಂದು ಅಮೆರಿಕ ಆರೋಪಿಸಿದೆ.
ಇದನ್ನೂ ಓದಿ: Bangalore: ಮಾಹಿತಿ ನೀಡುವ ನೆಪದಲ್ಲಿ ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕ ಸೆರೆ