Advertisement

Fraud Case ಹಣ ಗಳಿಸುವ ಆಸೆ ತೋರಿಸಿ ವಂಚನೆ 9 ಲಕ್ಷ ರೂ. ಕಳೆದುಕೊಂಡ ಯುವಕ

09:26 PM Jan 13, 2024 | Team Udayavani |

ಬಂಟ್ವಾಳ: ಆ್ಯಪ್‌ ಮೂಲಕ ಹಣ ಗಳಿಸುವ ಆಸೆ ತೋರಿಸಿ ಮೋಸದ ಜಾಲಕ್ಕೆ ಸಿಲುಕಿ ಗೋಳ್ತಮಜಲಿನ ಯುವಕನೋರ್ವ ಒಟ್ಟು ಸುಮಾರು 9.09 ಲಕ್ಷ ರೂ. ಕಳೆದುಕೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Advertisement

ಉಮೈರ್‌ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರಿಗೆ ಟೆಲಿಗ್ರಾಮ್‌ ಆ್ಯಪ್‌ ನಲ್ಲಿ ಕಳೆದ ನವೆಂಬರ್‌ 10ರಂದು ಅಪರಿಚಿತ ಸಂಖ್ಯೆಯೊಂದರಿಂದ ಸಂದೇಶ ಬಂದಿದ್ದು, ನಿಮಗೆ ದಿನನಿತ್ಯ ಹಣ ಮಾಡುವ ಉದ್ದೇಶವಿದ್ದಲ್ಲಿ ನಮ್ಮ ಗ್ರೂಪಿಗೆ ಸೇರುವಂತೆ ತಿಳಿಸಿದ್ದರು.

ಅದರಂತೆ ಅವರು ಸೇರಿ ಗ್ರೂಪಿನ ಟಾಸ್ಕ್ ಗಳನ್ನು ಪೂರ್ತಿ ಮಾಡಿದ್ದರು. ಬಳಿಕ ಅವರು 7 ಸಾವಿರ ರೂ.ಗಳ ಟಾಸ್ಕ್ ಆಯ್ಕೆ ಮಾಡಿದಾಗ 25 ಸಾವಿರ ರೂ. ಪಾವತಿಸುವಂತೆ ಹೇಳಿದ್ದರು. ಹೀಗೆ ಉಮೈರ್‌ ಹಂತ ಹಂತವಾಗಿ 9.09 ಲಕ್ಷ ರೂ. ಪಾವತಿ ಮಾಡಿದ್ದರು.

ಆದರೆ ಅಪರಿಚಿತ ಹಣವನ್ನು ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next