ಉತ್ತರಾಖಂಡ: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಕೇದಾರನಾಥ ಯಾತ್ರೆಯ ಮೂಲ ಶಿಬಿರವಾದ ಗೌರಿಕುಂಡ್‌ನಲ್ಲಿ ಬುಧವಾರ ಮುಂಜಾನೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಸಂಭವಿಸಿ ಗುಡಿಸಲಿನಲ್ಲಿ ಮಲಗಿದ್ದ ಇಬ್ಬರು ಸಹೋದರರು ಮೃತಪಟ್ಟು ಓರ್ವ ಗಾಯಗೊಂಡಿದ್ದಾನೆ ಇದು ಕಳೆದ ಐದು ದಿನಗಳಲ್ಲಿ ಗೌರಿಕುಂಡ್‌ನಲ್ಲಿ ಸಂಭವಿಸಿದ ಎರಡನೇ ಭೂಕುಸಿತ ಪ್ರಕರಣವಾಗಿದೆ.
ಗೌರಿಕುಂಡ್ ಗ್ರಾಮದ ಹೆಲಿಪ್ಯಾಡ್ ಬಳಿಯ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಒಂದು ಕುಟುಂಬದ ನಾಲ್ವರು ಅವಶೇಷಗಳಲ್ಲಿ ಹೂತುಹೋಗಿದ್ದಾರೆ ಎಂದು ರುದ್ರಪ್ರಯಾಗದ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.
ಘಟನೆಯಲ್ಲಿ ಜಾನಕಿ ಎಂಬ ಮಹಿಳೆ ಅವಶೇಷಗಳಡಿಯಿಂದ ಯಾವುದೇ ಗಾಯಗಳಿಲ್ಲದೆ ಹೊರಬಂದಿದ್ದು ಮತ್ತು ಅವರ ಮೂವರು ಮಕ್ಕಳು ಅದರ ಅಡಿಯಲ್ಲಿ ಸಿಲುಕಿದ್ದರು ಘಟನೆಯ ಮಾಹಿತಿ ಪಡೆದ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ಮಕ್ಕಳನ್ನು ರಕ್ಷಣೆ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದುರುದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಬ್ರಿಜ್ ಭೂಷಣ್