Advertisement
ತಹಶೀಲ್ದಾರ್ ಅವರಲ್ಲಿ ವಿವರ ಪಡೆದ ಅವರು, ತಾಲೂಕಿನಲ್ಲಿ ಕೊಳೆ ರೋಗ ದಿಂದ ಸಂತ್ರಸ್ತರಾಗಿರುವ 19,112 ಕೃಷಿಕರಿಂದ ಅರ್ಜಿ ಬಂದಿದ್ದು, 16,971 ಮಂದಿಗೆ ಸಹಕಾರಿ ಸಂಘಗಳಲ್ಲಿ ಹಾಗೂ 999 ಮಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈವರೆಗೆ 9.52 ಕೋಟಿ ರೂ. ಅನುದಾನ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ರಮ – ಸಕ್ರಮ ಯೋಜನೆಗಳಲ್ಲಿ ಈಗಾಗಲೇ 18,124 ಮಂದಿ ಕೃಷಿಕರಿಗೆ 63,075 ಎಕ್ರೆ ಕೃಷಿಭೂಮಿ ನೀಡಲಾಗಿದೆ. ಹೊಸದಾಗಿ ಅರ್ಜಿನಮೂನೆ 57ರಲ್ಲಿ 31,123 ಅರ್ಜಿಗಳು ಬಂದಿದ್ದು, ಪರಿಶೀಲನೆಯಲ್ಲಿವೆ. 94ಸಿಯಲ್ಲಿ 33,354 ಅರ್ಜಿ ಬಂದಿದ್ದು, 14,132 ಮಂಜೂರಾಗಿ, 13,269 ತಿರಸ್ಕೃತಗೊಂಡಿವೆ. 5,953 ಪರಿಶೀಲನೆಯಲ್ಲಿದೆ. 94ಸಿಸಿಯಲ್ಲಿ 738 ಅರ್ಜಿಗಳಲ್ಲಿ 268 ಪರಿಶೀಲನೆಯಲ್ಲಿದೆ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ತಿಳಿಸಿದರು. ಉಳಿದಿರುವ ಅರ್ಜಿ ಪರಿಶೀಲಿಸಿ ಶೀಘ್ರ ಮಂಜೂರು ಮಾಡು ವಂತೆ ಐವನ್ ಸೂಚಿಸಿದರು. ಡಿ.ಸಿ. ಮನ್ನಾ ಜಮೀನು: ವಿಶೇಷ ಸಭೆ
ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಾ ಜಮೀನಿನ ಸಮಸ್ಯೆಗೆ ಪರಿಹಾರ ಕಾಣುವಂತೆ ದಲಿತ ಮುಖಂಡರು ಬೇಡಿಕೆ ಮುಂದಿಟ್ಟಾಗ, ಬೆಳ್ತಂಗಡಿಯಲ್ಲಿ 61 ಎಕ್ರೆ ಜಮೀನು ಮಾತ್ರ ಲಭ್ಯವಿದ್ದು, ಅದನ್ನು ಅರ್ಹರಿಗೆ ಹಂಚಲು ಅರ್ಜಿ ಕರೆಯಲಾಗಿದೆ. 398 ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. 570 ಎಕ್ರೆ ಡಿ.ಸಿ. ಮನ್ನಾ ಜಮೀನು ಬೇರೆ ಉದ್ದೇಶಗಳಿಗೆ ಹಂಚಿಕೆಯಾಗಿದೆ ಹಾಗೂ 410 ಎಕ್ರೆ ಜಮೀನು ಅತಿಕ್ರಮಣವಾಗಿದೆ ಎಂದು ತಿಳಿಸಿದರು.
Related Articles
Advertisement
ಹಕ್ಕುಪತ್ರ: ಮನವಿಕಾಟಾಜೆ ಪ್ರದೇಶದಲ್ಲಿ ಸುಮಾರು 40 ಆದಿವಾಸಿ ಕುಟುಂಬಗಳು 1992ರಲ್ಲಿ ಅರ್ಜಿ ಸಲ್ಲಿಸಿದಾಗ, ಸರ್ವೇ ನಡೆದು ಕಂದಾಯ ಭೂಮಿಯೆಂದು ಗುರುತಿಸಲಾಗಿದ್ದರೂ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ದೂರುದಾರರು ಗಮನ ಸೆಳೆದರು. ಇನ್ನುಳಿದಂತೆ ತಣ್ಣೀರುಪಂಥ ಪಾಲೇದು ಎಂಬಲ್ಲಿ ಅಂಬೇಡ್ಕರ್‌ಭವನಕ್ಕೆ 2 ವರ್ಷಗಳ ಹಿಂದೆ ಅನುದಾನ ಮಂಜೂರುಗೊಂಡಿದ್ದರೂ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಮನವಿ ಸಲ್ಲಿಸಿ ದರು. ಈ ಬಗ್ಗೆ ತಹಶೀಲ್ದಾರ್ ಬಳಿ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಐವನ್ ಭರವಸೆ ನೀಡಿದರು. ಪ್ರತಿಗ್ರಾಮಗಳಲ್ಲಿ ರುದ್ರಭೂಮಿ ಅಗತ್ಯ ವಾಗಿ ಇರಬೇಕು ಎಂಬುದು ಸರಕಾರದ ಸೂಚನೆಯಿದ್ದು, ಅದಕ್ಕೆ ಅಗತ್ಯ ಜಾಗ ಮೀಸಲಿಸಬೇಕು. ಮನೆ ನಿವೇಶನಗಳಿಗೆ ಸಾಕಷ್ಟು ಅರ್ಜಿಗಳು ಕಾಯುತ್ತಿದ್ದು, ಸರಕಾರಿ ಜಾಗಗಳನ್ನು ಮೀಸಲಿರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಕ್ಕುಪತ್ರಗಳನ್ನು ಹಾಗೂ ವಿವಿಧ ಯೋಜನೆ ಫಲಾನುಭವಿಗಳಿಗೆ ಪಿಂಚಣಿ ಗಳನ್ನು ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತಬಂಗೇರ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರಕೃತಿ ವಿಕೋಪ ನಿಧಿಯ ಕುರಿತು ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಚರ್ಚಿಸಿ, ತಾಲೂಕಿನಲ್ಲಿ 24 ಲಕ್ಷ ರೂ. ಅನುದಾನ ಲಭ್ಯವಿದೆ. ಮಳೆಯಿಂದ ಹಾನಿಗೊಳಗಾದ ಮನೆ ಸಹಿತ ಇತರ ಭಾಗಶಃಹಾನಿಗೊಳಗಾಗಿದ್ದಲ್ಲಿ ಗರಿಷ್ಠ ಪರಿಹಾರ ಒದಗಿಸಲು ಪ್ರಯತ್ನಿಸಿ. ಹಾನಿ ಸಂದರ್ಭ ಜನಪ್ರತಿನಿಧಿಗಳ ಆಗಮನಕ್ಕೆ ನಿರೀಕ್ಷಿಸದೆ ಅಧಿಕಾರಿಗಳೇ ಹಾನಿ ಪ್ರದೇಶಕ್ಕೆ ಶೀಘ್ರ ಭೇಟಿ ನೀಡಿ ವರದಿ ಸಿದ್ಧಪಡಿಸುವಂತೆ ಸಲಹೆ ನೀಡಿದರು. ಪ್ರತಿ ತಾಲೂಕುಗಳಲ್ಲಿ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಭರವಸೆ ನೀಡಿದರು.
ಪ್ರಕೃತಿ ವಿಕೋಪ: ಗರಿಷ್ಠ ಪರಿಹಾರ
ಪ್ರಕೃತಿ ವಿಕೋಪ ನಿಧಿಯ ಕುರಿತು ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಚರ್ಚಿಸಿ, ತಾಲೂಕಿನಲ್ಲಿ 24 ಲಕ್ಷ ರೂ. ಅನುದಾನ ಲಭ್ಯವಿದೆ. ಮಳೆಯಿಂದ ಹಾನಿಗೊಳಗಾದ ಮನೆ ಸಹಿತ ಇತರ ಭಾಗಶಃಹಾನಿಗೊಳಗಾಗಿದ್ದಲ್ಲಿ ಗರಿಷ್ಠ ಪರಿಹಾರ ಒದಗಿಸಲು ಪ್ರಯತ್ನಿಸಿ. ಹಾನಿ ಸಂದರ್ಭ ಜನಪ್ರತಿನಿಧಿಗಳ ಆಗಮನಕ್ಕೆ ನಿರೀಕ್ಷಿಸದೆ ಅಧಿಕಾರಿಗಳೇ ಹಾನಿ ಪ್ರದೇಶಕ್ಕೆ ಶೀಘ್ರ ಭೇಟಿ ನೀಡಿ ವರದಿ ಸಿದ್ಧಪಡಿಸುವಂತೆ ಸಲಹೆ ನೀಡಿದರು.
ಪಿಂಚಣಿದಾರರೊಂದಿಗೆ ಸಭೆ
ಪ್ರತಿ ತಾಲೂಕುಗಳಲ್ಲಿ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಭರವಸೆ ನೀಡಿದರು.