Advertisement

Coastal; ತಾಲೂಕು ಮಟ್ಟದಲ್ಲೇ 9/11:ಸರಕಾರದ ಅಧಿಸೂಚನೆ

11:46 PM Aug 07, 2024 | Team Udayavani |

ಪುತ್ತೂರು: ಕರಾವಳಿ ಭಾಗದಲ್ಲಿ ಒಂದು ಎಕ್ರೆ ತನಕ ಏಕ ನಿವೇಶನ ವಿನ್ಯಾಸಗಳಿಗೆ ತಾಲೂಕು ಮಟ್ಟದಲ್ಲೇ ಅನುಮೋದನೆ ನೀಡಲು ಸರಕಾರ ಅನುಮತಿ ನೀಡಿದೆ.

Advertisement

ಕರಾವಳಿ ಭಾಗದಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಸತಿ ಮತ್ತು ವಾಣಿಜ್ಯ ಭೂಪರಿವರ್ತಿತ ಜಮೀನುಗಳ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

ಕರಾವಳಿ ಭಾಗದ ಶಾಸಕರು ಈ ಹಿಂದೆ 25 ಸೆಂಟ್ಸ್‌ ವಿಸ್ತೀರ್ಣವರೆಗಿನ ಜಮೀನುಗಳಿಗೆ ಗ್ರಾಮ ಪಂಚಾಯತ್‌ಗಳಿಂದ, 25 ಸೆಂಟ್ಸ್‌ ಮೇಲ್ಪಟ್ಟು ಒಂದು ಎಕ್ರೆವರೆಗಿನ ಜಮೀನುಗಳಿಗೆ ತಾಲೂಕು ಪಂಚಾಯತ್‌ಗಳಿಂದ; ಒಂದು ಎಕ್ರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನುಗಳಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸಗಳಿಗೆ ಅನುಮೋದನೆ ಪಡೆದು ನಮೂನೆ 9 ಮತ್ತು 11ಗಳನ್ನು ಈ ಹಿಂದೆ ನೀಡಲಾಗುತ್ತಿದ್ದ ಬಗ್ಗೆ ಸಭೆಗೆ ವಿವರಿಸಿ ಪ್ರಸ್ತುತ ಸರಕಾರದಿಂದ ಹೊರಡಿಸಲಾಗಿರುವ ಆದೇಶದ ಹಿನ್ನೆಲೆಯಲ್ಲಿ ಮಿತಿ ಇಲ್ಲದೆ ಎಲ್ಲ ಜಮೀನುಗಳಿಗೆ ನಗರಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸ ಅನು ಮೋದನೆ ಪಡೆಯ ಬೇಕಾಗಿರುವುದ ರಿಂದ ಕರಾವಳಿ ಭಾಗದ ಸಾರ್ವ ಜನಿಕರಿಗೆ ಅನನುಕೂಲವಾಗು ತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸ ಲಾಗಿತ್ತು.

ಕರಾವಳಿ ಭಾಗದಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಿಂದ ಜಿಲ್ಲಾ ಕೇಂದ್ರದವರೆಗೆ ಸಾರ್ವಜನಿಕರು ಸಂಪರ್ಕ ಹೊಂದುವ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾ ಕೇಂದ್ರದೊಂದಿಗೆ ಜಿಲ್ಲೆಯಲ್ಲಿ ವಿವಿಧ ಯೋಜನಾ ಪ್ರಾಧಿಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿಕಾರಿಗಳಿಗೆ ಅಧಿಕಾರ ನೀಡಲು ಸಭೆ ನಿರ್ಧರಿಸಲಾಗಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವ್ಯಾಪ್ತಿಯನ್ನು ನಿಗದಿಪಡಿಸಲು ನಿರ್ಣಯಿಸಿ ಸರಕಾ ರವು ಈ ಕೆಳಕಂಡಂತೆ ಆದೇಶಿಸಿದೆ.

ಪುತ್ತೂರು, ಸುಳ್ಯ ತಾಲೂಕಿನ ಗ್ರಾ.ಪಂ., ನಗರಾಡಳಿತಗಳ ವ್ಯಾಪ್ತಿಗೆ ಪುತ್ತೂರು ಪುಡಾ ಸದಸ್ಯ ಕಾರ್ಯದರ್ಶಿ ಬಂಟ್ವಾಳ ತಾಲೂಕಿಗೆ ಬಂಟ್ವಾಳ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಮೂಡಬಿದಿರೆ, ಬೆಳ್ತಂಗಡಿ ತಾಲೂಕುಗಳಿಗೆ ಮೂಡು ಬಿದಿರೆ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಮೂಲ್ಕಿ, ಉಳ್ಳಾಲ, ಮಂಗಳೂರು ತಾಲೂಕಿನ ಪುರಸಭೆ, ಗ್ರಾ.ಪಂ.ವ್ಯಾಪ್ತಿಗಳಿಗೆ ಮಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರನ್ನು ನಿಯೋಜಿಸಲಾಗಿದೆ.

Advertisement

ಮುಡಾದಿಂದ ಪುಡಾಕ್ಕೆ ಸ್ಥಳಾಂತರ
ಕಳೆದ ನಾಲ್ಕು ತಿಂಗಳಿಂದ 9/11 ದಾಖಲೆಯನ್ನು ಪಡೆಯಲು ದ.ಕ.ಜಿಲ್ಲೆಯ ಗ್ರಾಮಾಂತರ ತಾಲೂಕಿನ ನಿವಾಸಿಗಳು ಮಂಗಳೂರಿನ ಮುಡಾಕ್ಕೆ ತೆರಳಬೇಕಿತ್ತು. ಇದರಿಂದ ಕಡತ ವಿಲೇವಾರಿ ತಡವಾಗುವುದರಿಂದ ಮನೆ ಕಟ್ಟುವವರಿಗೂ ತೀವ್ರ ತೊಂದರೆಯುಂಟಾಗುತ್ತಿರುವ ಬಗ್ಗೆ ಶಾಸಕ ಅಶೋಕ್‌ ರೈ ಅವರು ಕಳೆದ ವಿಧಾನಸಭಾ ಅಧಿವೇಶದಲ್ಲಿ ಸರಕಾರದ ಗಮನ ಸೆಳೆದಿದ್ದರು. ಆ ಬಳಿಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ಅವರು ಕಂದಾಯ ಅಧಿಕಾರಿಗಳ ಮತ್ತು ಕರಾವಳಿ ಭಾಗದ ಶಾಸಕರ ಸಭೆಯನ್ನು ಕರೆದು ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದರು.

ಜನರ ಸಂಕಷ್ಟವನ್ನು ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು ತಾಲೂಕು ಕೇಂದ್ರದಲ್ಲೇ ಅದನ್ನು ನೀಡುವಂತೆ ಕಂದಾಯ ಅದಿಕಾರಿಗಳ ಸಭೆಯಲ್ಲಿಯೂ ಪ್ರಸ್ತಾವಿಸಿದ್ದೆ. ನನ್ನ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಜತೆಗೆ ಕರಾವಳಿ ಭಾಗಕ್ಕೆ ಎಲ್ಲ ತಾಲೂಕುಗಳಿಗೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಹೊರಡಿಸಿದೆ.
-ಅಶೋಕ್‌ ಕುಮಾರ್‌ರೈ, ಶಾಸಕ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next