Advertisement
ಯಾಕುಬ್ ಕಾರ್ಕಳ: ಕಚ್ಚತೈಲ ರಫ್ತು ಇದರ ಮೇಲೆ ಪರಿಣಾಮ ಆಗಬಹುದು. ಕೊಲ್ಲಿ ರಾಷ್ಟ್ರದಲ್ಲಿ ದುಡಿಯುವ ಭಾರತೀಯರಿಗೆ ತುಂಬಾ ಕಷ್ಟ ನಷ್ಟ ಆಗಬಹುದು.
Related Articles
Advertisement
ಅನಿಲ್ ಕುಮಾರ್: ಯುದ್ಧ ಎಂದರೆ ಏನು? ಸೈನಿಕರನ್ನು ಹಿಂದಿಟ್ಟು ಮುಂದೆ ನಿಂತು ಯುದ್ಧ ಮಾಡುವನೆ ನಿಜವಾದ ರಾಜ ನಾಯಕ, ಇದುವೆ ನಿಜವಾದ ಯುದ್ಧ. ಸೈನಿಕರನ್ನು ಬಲಿ ಕೊಟ್ಟು ರಾಜನು ಗಚ್ಚಿನ ಮನೆಯಲ್ಲಿ ಕೂಡುವುದು ಇದಾವ ಯುದ್ಧ!
ಸಣ್ಣಮಾರಪ್ಪ. ಚಂಗಾವರ; ಇಂದು ದೇಶ ದೇಶಗಳ ನಡುವೆ ದೊಡ್ಡ ಮಟ್ಟದಲ್ಲಿ ರಪ್ತು ಅಮದು ನೆಡೆಯುತ್ತಿದೆ. ಯಾವುದೇ ದೇಶದಲ್ಲಿ ಕೆಟ್ಟ ಘಟನೆಗಳು ನೆಡೆದರೆ ಸಂಬಂಧ ಹೊಂದಿರುವ ಎಲ್ಲಾ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮಧುಕುಮಾರ್ ಬಿಳಿಚೋಡು: ಈಗಾಗಲೇ ಎರಡು ರಾಷ್ಟ್ರಗಳ ಮಧ್ಯೆ ಉಂಟಾಗಿರುವ ಬಿರುಕುಗಳಿಂದ ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡು ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇನ್ನೂ ಯುದ್ದ ನಡೆದರೆ ಭಾರತದ ಆರ್ಥಿಕತೆ ಪರಿಸ್ಥಿತಿ ತೀವ್ರ ಹದಗೆಟ್ಟು ಪೆಟ್ರೋಲ್-ಡೀಸೆಲ್ ಮತ್ತು ಬಂಗಾರದ ಬೆಲೆ ಗಗನಕ್ಕೆರಲಿದೆ. ಮೊದಲೇ ಭಾರತದ ಆರ್ಥಿಕ ಪರಿಸ್ಥಿತಿ ಕಂಗಾಲಾಗಿದ್ದು ಯುದ್ದದಿಂದ ಇದಕ್ಕೆ ಮತ್ತಷ್ಟು ಹೊರೆಯಾಗಲಿದೆ.
ರಾಜೇಶ್ ಅಂಚನ್ ಎಂ ಬಿ: ಅಂತಹ ಯಾವುದೇ ಗಂಭೀರ ಪರಿಣಾಮ ಬೀರೋಲ್ಲ ಕೇವಲ ಇಂಧನ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಯ ವಾಗಬಹುದು. ಭಾರತ ಇಂಧನ ಹೊರತುಪಡಿಸಿ ಬೇರೆ ಯಾವುದಕ್ಕೂ ಕೊಲ್ಲಿ ರಾಷ್ಟ್ರಗಳನ್ನು ಹೆಚ್ಚಾಗಿ ಅವಲಂಭಿಸಿಲ್ಲ. ವಿದೇಶಿ ಕೆಲಸಗಳನ್ನೇ ನಂಬಿಕೊಂಡಿರುವ ಕೆಲ ಭಾರತೀಯರಿಗೆ ಕಷ್ಟವಾಗಬಹುದು ಅಷ್ಟೇ. ಒಟ್ಟಾರೆ ಭಾರತಕ್ಕೆ ಯಾವುದೇ ಪರಿಣಾಮ ಆಗೋಲ್ಲಾ. ನಮ್ಮ ಈಗಿನ ಸರ್ಕಾರ ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಸಮರ್ಥವಾಗಿದೆ.
ಬಿ ಆರ್ ವಿಶ್ವನಾಥ್ ಗೌಡ; ಇರಾನ್ ಮತ್ತು ಅಮೆರಿಕ ನಡುವಿನ ಯುದ್ದ ನಡೆದರೂ ಕೂಡ ಭಾರತ ತಟಸ್ಥ ಧೋರಣೆ ಅನುಸರಿಸುತ್ತದೆ. ಇದೆ ನೆಪ ಮಾಡಿಕೊಂಡು ಪಾಕಿಸ್ತಾನ ತನ್ನ ಉದ್ದಟತನ ಪುಂಡಾಟಿಕೆ ನಡೆಸಿದರೆ ಪಾಕಿಸ್ತಾನದ ನಾಶ ಖಂಡಿತಾ.