Advertisement

ಗಂಗಾವತಿ: 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ದತೆ

05:34 PM Mar 02, 2023 | Team Udayavani |

ಗಂಗಾವತಿ: ಗಂಗಾವತಿ ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ.06 ಮತ್ತು 07 ರಂದು ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನದ ಜಾತ್ರೆ ಜರುಗಲಿದ್ದು ಈಗಾಗಲೇ ವೇದಿಕೆ ನಿರ್ಮಾಣ ಸೇರಿ ಸಮ್ಮೇಳನಕ್ಕೆ ಆಗಮಿಸುವವರಿಗೆ ಊಟೋಪಚಾರದ ಕುರಿತು ಭರ್ಜರಿ ಸಿದ್ದತೆಗಳು ನಡೆಯುತ್ತಿದ್ದು ಗುರುವಾರ ಬೆಳ್ಳಿಗ್ಗೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸಮ್ಮೇಳನ ವೇದಿಕೆ ನಿರ್ಮಾಣವಾಗುತ್ತಿರುವ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾರ್ಯಕ್ರಮದ ವೇದಿಕೆ ಎತ್ತರಿಸುವಂತೆ ವೇದಿಕೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು.

Advertisement

ಎರಡು ದಿನಗಳ ಸಮ್ಮೇಳನದಲ್ಲಿ ನಾಡು, ನುಡಿ, ಜಲ ಹಾಗೂ ಗಂಗಾವತಿ ತಾಲೂಕಿಗೆ ಅಭಿವೃದ್ಧಿ ಪೂರಕವಾಗುವಂತಹ ಗೋಷ್ಠಿಗಳು ನಡೆಯಲಿದ್ದು ಈಗಾಗಲೇ ಆಹ್ವಾನ ಪತ್ರಿಕೆ ಮುದ್ರಣ ಕಾರ್ಯ ಜರುಗಿದೆ. ಎರಡು ದಿನಗಳ ಸಮ್ಮೇಳನಕ್ಕೆ ಆಗಮಿಸುವವರಿಗೆ ಬೆಳ್ಳಿಗ್ಗೆ ಉಪಹಾರ ಮಧ್ಯಾನ್ಹ ರಾತ್ರಿ ಊಟದ ವ್ಯವಸ್ಥೆ ಮಾಡಲು ದಾಸೋಹ ಕಮೀಟಿ ಸಿದ್ದತೆ ನಡೆಸಿದ್ದು ಬೆಳ್ಳಿಗ್ಗೆ ಉಪ್ಪಿಟ್ಟು, ಮಧ್ಯಾನ್ಹ ಮತ್ತು ರಾತ್ರಿ ಕಡಕ್ ರೊಟ್ಟಿ, ತರಕಾರಿ, ಕಾಳಿನ ಪಲ್ಯಾ, ಅನ್ನ ಸಾಂಬಾರ, ಪುಡಿ ಚಟ್ನಿ ಸೇರಿ ಹಲವು ಆಹಾರಗಳ ಮೆನು ಸಿದ್ದಪಡಿಸಿಕೊಂಡಿದ್ದು ಎರಡು ದಿನಗಳು ಸೇರಿ ಸುಮಾರು 15 ಸಾವಿರ ಜನತೆ ಊಟ ಮಾಡುವ ವ್ಯವಸ್ಥೆಯನ್ನು ದಾಸೋಹ ಕಮೀಟಿ ಶಾಸಕ ಪರಣ್ಣ ಮುನವಳ್ಳಿ ಸಹಕಾರದಲ್ಲಿ ಸಿದ್ದತೆ ನಡೆಸಿದೆ.

ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ಗಂಗಾವತಿಯ ಬಾಲಾಜಿ ಡೆಕೋರೇರ‍್ಸ್ಗಳಿಗೆ ವಹಿಸಲಾಗಿದ್ದು ಸುಮಾರು 5 ಸಾವಿರ ಜನರು ಕುಳಿತುಕೊಳ್ಳುವಷ್ಟು ಚೇರ್‌ಗಳು ಸೇರಿ ಕಾರ್ಯಕ್ರಮದ ವೇದಿಕೆ ಸಿದ್ದಪಡಿಸಲಾಗುತ್ತಿದೆ. ವೇದಿಕೆ ಎತ್ತರ ಹೆಚ್ಚಿಸುವಂತೆ ಕಸಾಪ ಪದಾಧಿಕಾರಿಗಳ ಮನವಿ ಪುಸ್ಕರಿಸಿ ವೇದಿಕೆ ಎತ್ತರ ಮಾಡುವಂತೆ ಶಾಸಕ ಪರಣ್ಣ ಮುನವಳ್ಳಿ ಡೆಕೋರೇರ‍್ಸ÷ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ರಾಘವೇಂದ್ರ ಶೆಟ್ಟಿ, ಡಾ|ಶಿವಕುಮಾರ ಮಾಲೀಪಾಟೀಲ್, ರಮೇಶ ಕಲಕುರ್ಣಿ, ಮೈಲಾರಪ್ಪ ಬೂದಿಹಾಳ, ರುದ್ರೇಶ, ಶಿವಾನಂದ, ಶಿವಕಾಂತ, ಉಜ್ಜನಗೌಡ, ಅಕ್ಕಿ ಚಂದ್ರು, ಯಂಕಪ್ಪ ಕಟ್ಟಿಮನಿ, ರಾಘವೇಂದ್ರ ತೂನಾ, ಬಸವರಾಜ ಹಡಪದ್, ಸಿದ್ದಲಿಂಗಯ್ಯ ಸೇರಿ ಕಸಾಪ ಪದಾಧಿಕಾರಿಗಳಿದ್ದರು.

ಮಾ.06,07 ರಂದು ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಎರಡು ದಿನಗಳ ಕಾಲ ನೆಲ,ಜಲ ಭಾಷೆ ಕುರಿತು ಚಿಂತನ ಮಂಥನ ಜರುಗಲಿದೆ. ಜತೆಗೆ ಗಂಗಾವತಿಯ ಪ್ರಗತಿಗಾಗಿ ವಿದ್ವಾಂಸರು ಸಲಹೆ ಸೂಚನೆ ನೀಡಲಿದ್ದಾರೆ. ಕಿಷ್ಕಿಂದಾ ಅಂಜನಾದ್ರಿ, ಮೋರ್ಯರಬೆಟ್ಟ, ಕುಮ್ಮಟದುರ್ಗ, ಹೇಮಗುಡ್ಡ, ಸೇರಿ ಇಲ್ಲಿಯ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಿ ಪ್ರವಾಸಿಗರನ್ನು ದೇಶ ವಿದೇಶಗಳಿಂದ ಸೆಳೆಯುವ ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿವೆ. ನೀರಾವರಿಗೆ, ಶೈಕ್ಷಣಿಕ ಪ್ರಗತಿಗೆ ಸಂಬಂಧಪಟ್ಟ ಕುರಿತು ಸಾಹಿತಿಗಳು ಬೆಳಕು ಚೆಲ್ಲುವ ಸಾಧ್ಯತೆ ಇದ್ದು ಎಲ್ಲರೂ ಕೂಡಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ ಮಾಡಿ ಮುಂದಿನ ಪೀಳಿಗೆಗೆ ಭವಿಷ್ಯವನ್ನು ತೋರಿಸಬೇಕಿದೆ.

Advertisement

– ಪರಣ್ಣ ಮುನವಳ್ಳಿ ಶಾಸಕರು ಅಧ್ಯಕ್ಷರು ಸ್ವಾಗತ ಸಮಿತಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ

Advertisement

Udayavani is now on Telegram. Click here to join our channel and stay updated with the latest news.

Next