Advertisement

ಮುಖದಲ್ಲಿ ಬೆಳೆದಿದ್ದ 8 ಕೆ.ಜಿ ಗೆಡ್ಡೆ ತೆಗೆದ ವೈದ್ಯರು

06:38 PM Oct 02, 2021 | Team Udayavani |

ಬೆಂಗಳೂರು: ನಗರದ ಆಸ್ಟರ್‌ ಸಿಎಂಐ ಆಸ್ಪತ್ರೆಯ ವೈದ್ಯರ ತಂಡವು ವ್ಯಕ್ತಿಯೊಬ್ಬರ ಮುಖದ ಮೇಲೆ ಬೆಳೆದಿದ್ದ ಎಂಟು ಕೆ.ಜಿ ಗೆಡ್ಡೆಯನ್ನು 40 ಗಂಟೆಗೂ ಹೆಚ್ಚು ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತೆಗೆದುಹಾಕಿದ್ದಾರೆ.

Advertisement

ಓಡಿಶಾ ಮೂಲಕ 31 ವರ್ಷದ ಈ ವ್ಯಕ್ತಿಯು ಬಾಲ್ಯದಿಂದಲೂ ಬಾಹ್ಯ ನರಗಳ ಹಾನಿಕರವಲ್ಲದ ಗೆಡ್ಡೆ  ಯಾದ ಪ್ಲೆಕ್ಸಿಫಾರ್ಮ್ ನ್ಯೂರೋಫೈಬ್ರೋಮಾ ಎಂಬ ಅಪರೂಪದ ಸ್ಥಿತಿಯಿಂದ ಬಳಲುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಮುಖದ ಮೇಲೆ ಗೆಡ್ಡೆ ಕಾಣಿಸಿಕೊಂಡಿದ್ದು, ವಯಸ್ಸಾದಂತೆ ಅದು ಬೆಳೆಯಿತು. 8 ಕೆ.ಜಿಗಿಂತಲೂ ಹೆಚ್ಚು ತೂಕದ ಗೆಡ್ಡೆ ದೊಡ್ಡದಾಗಿ ಮುಖದ ಬಲಭಾಗದಿಂದ ನೇತಾಡುತ್ತಿತ್ತು. ಶಸ್ತ್ರಚಿಕಿತ್ಸೆಯಿಂದ ರಕ್ತಸ್ರಾವ ಪ್ರಾಣಕ್ಕೆ ಅಪಾಯ ಎಂದು ಅನೇಕ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದ್ದವು.

ಇದನ್ನೂ ಓದಿ:-ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಯುವಕನಿಂದ ಕರ್ನಾಟಕ ಸೈಕಲ್ ಯಾತ್ರೆ

ಈ ಹಿನ್ನೆಲೆ ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆರು ತಿಂಗಳ ಅವಧಿಯಲ್ಲಿ 16 ವಿವಿಧ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಗೆಡ್ಡೆಯನ್ನು ತೆರೆದು ಹಾಕಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ನರವಿಜ್ಞಾನದ ಮುಖ್ಯಸ್ಥ ಡಾ. ರವಿ ಗೋಪಾಲ್‌ ವರ್ಮಾ, ಬೃಹತ್‌ ಗೆಡ್ಡೆ ಮುಖದ ಮತ್ತು ಕುತ್ತಿಗೆಯ ಬಲಭಾಗದಲ್ಲಿದ್ದು, ಬಲ ಕಣ್ಣುಗೂಡಿಗೆ ನುಸುಳಿ ಬಲಗಣ್ಣನ್ನು ಸಂಪೂರ್ಣವಾಗಿ ಆವರಿಸಿತ್ತು.

Advertisement

ಇದು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವ ಪ್ರಕ್ರಿಯೆಯನ್ನು ಕಷ್ಟಕರ ವಾಗಿತ್ತು. ನಮ್ಮ ವೈದ್ಯರ ತಂಡ ಬಹಳ ಎಚ್ಚರಿಕೆಯಿಂದ ಈ ಪ್ರಕರಣವನ್ನು ನಿಭಾಯಿಸಿದ್ದು, ಶಸ್ತ್ರಚಿಕಿತ್ಸೆಯ ಸಮಯ ದಲ್ಲಿ ರಕ್ತಸ್ರಾವವನ್ನು ಕಡಿಮೆ ಇರುವಂತೆ ನೋಡಿಕೊಂಡು ಗೆಡ್ಡೆಯನ್ನು ತೆಗೆದುಹಾಕಿ ಮುಖದ ಮೂಳೆಯನ್ನು ಪುನಃ ಜೋಡಿಸಲಾಯಿತು ಎಂದು ತಿಳಿಸಿದರು.

ಅರವಳಿಕೆ ತಜ್ಞ ಡಾ.ರಾಘವೇಂದ್ರ ಪೈ.ಕೆ ಮಾತನಾಡಿ, ಗೆಡ್ಡೆಯನ್ನು ಸೇರಿಸಿ ರೋಗಿಯು 58 ಕೆ.ಜಿ. ತೂಕವಿದ್ದ. ಕಳೆದ ವರ್ಷ ಡಿ.1 ರಂದು, 19 ಗಂಟೆಗಳು ನಡೆದ ಮೊದಲ ಶಸ್ತ್ರಚಿಕಿತ್ಸೆಯ ದಿನ, ಅವನು ತೀವ್ರವಾದ ರಕ್ತದ ನಷ್ಟವನ್ನು ಅನುಭವಿಸಿದನು. ಸುಮಾರು 40 ಲೀಟರ್‌ ದ್ರವ, ರಕ್ತ ಮತ್ತು ರಕ್ತದ ಕಣಗಳನ್ನು ರೋಗಿಗೆ ಬಾಹ್ಯವಾಗಿ ನೀಡಲಾಯಿತು. ಈ ಶಸ್ತ್ರಚಿಕಿತ್ಸೆಗಾಗಿ ಒಟ್ಟು 12 ಯೂನಿಟ್‌ ರಕ್ತ ಬಳಕೆಯಾಗಿತ್ತು. ಐಸಿಯುನಲ್ಲಿ 3 ದಿನಗಳು ಸುಧಾರಿಸಿಕೊಂಡ ನಂತರ 23 ಗಂಟೆ ಮತ್ತೊಂದು ನಡೆಸಲಾಯಿತು. ಬಳಿಕ 18 ನೇ ದಿನದಂದು ವಾರ್ಡ್‌ಗೆ ವರ್ಗಾಯಿಸಿದೆವು. ಆಗ ದೇಹದ ತೂಕ ಸುಮಾರು 44 ಕೆಜಿ ತ್ತು ಎಂದು ವಿವರಿಸಿದರು.

ವೈದ್ಯರಿಗೆ ಕೃತಜ್ಞತೆ-

ಗೆಡ್ಡೆಯನ್ನು ತೆಗೆದುಹಾಕುವ ಭರವಸೆಯಲ್ಲಿ, ನಾನು ವಿವಿಧ ವೈದ್ಯರನ್ನು ಸಂಪರ್ಕಿಸಿದ್ದೆ ಮತ್ತು ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೆ, ಆದರೆ ಅದು ವ್ಯರ್ಥವಾಯಿತು. ಗೆಡ್ಡೆಯಿಂದಾಗಿ ನಾನು

ಹೊರಗೆ ಹೋಗಲು ಹಿಂಜರಿಯುತ್ತಿದ್ದೆ ಮತ್ತು ನಾಚಿಕೆಪಡುತ್ತಿದ್ದೆ. ಅಂತಿಮವಾಗಿ ಬೆಂಗಳೂರಿನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಕ್ಕಿದೆ. ಆಸ್ಪತ್ರೆಯ ಎಲ್ಲ ವೈದ್ಯರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ರೋಗಿ ಮನ್ಬೋದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next