Advertisement

ಇಂದು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ 87ನೇ ಜನ್ಮ ವಾರ್ಷಿಕೋತ್ಸವ

11:27 AM Oct 15, 2018 | udayavani editorial |

ಹೊಸದಿಲ್ಲಿ : ‘ಭಾರತದ ಮಿಸೈಲ್‌ ಮ್ಯಾನ್‌’ ಎಂದು ಖ್ಯಾತ ರಾಗಿದ್ದ ದಿವಂಗತ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ 87ನೇ ಜನ್ಮ ವಾರ್ಷಿಕೋತ್ಸವದ ದಿನವಾಗಿರುವ ಇಂದು ಸೋಮವಾರ ಅನೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು ಟ್ವಿಟರ್‌ನಲ್ಲಿ ಕಲಾಂ ಅವರ ಅತ್ಯಮೋಘ ಕಾಣಿಕೆಗಳನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. 

Advertisement

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು ಕಲಾಂ ಅವರ ಗುಣಗಾನ ಮಾಡಿ ಅತ್ಯಂತ ಸರಳವಾಗಿ ಬದುಕಿದ ಕಲಾಂ ಮಹಾನ್‌ ದೇಶಪ್ರೇಮಿ; ಯುವ ಜನರಿಗೆ ಅವರು ಎಂದೆಂದೂ ಸ್ಫೂರ್ತಿಯ ಚಿಲುಮೆಯಾಗಿರುತ್ತಾರೆ ಎಂದು ಹೇಳಿದ್ದಾರೆ. 

ಕಲಾಂ ಅವರು ಜನಿಸಿದ್ದು 1931ರ ಅಕ್ಟೋಬರ್‌ 15ರಂದು; ತಮಿಳು ನಾಡಿನ ರಾಮೇಶ್ವರದಲ್ಲಿ. ಭೌತಶಾಸ್ತ್ರ ಮತ್ತು ಏರೋಸ್ಪೇಸ್‌ ಇಂಜಿನಿಯರಿಂಗ್‌ ಓದಿದ್ದ ಅವರು ವಿಶ್ವ ವಿಜ್ಞಾನ ಮತ್ತು ಮಾನವತೆಗೆ ನೀಡಿದ ಅಸಾಮಾನ್ಯ ಕೊಡುಗೆಗಳಾಗಿ ಪ್ರಾತಃಸ್ಮರಣೀಯರಾಗಿದ್ದಾರೆ.

2002ರಲ್ಲಿ ಕಲಾಂ ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಜನರ ರಾಷ್ಟ್ರಪತಿ ಎಂದೇ ತಮ್ಮ ನಡೆ-ನುಡಿ-ಸರಳ ಬಾಳ್ವೆಯಿಂದ ಖ್ಯಾತರಾಗಿದ್ದರು. 2015ರ ಜುಲೈ 27ರಂದು ಶಿಲಾಂಗ್‌ನ ಐಐಎಂ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡುತ್ತಿದ್ದಾಗ ಕಲಾಂ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಟ್ಟಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next