ಚಿಕ್ಕಬಳ್ಳಾಪುರ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿನ ಪಿಯುಸಿ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.87.96ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ವಿ.ಅಶೋಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 22 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ 241 ಬಾಲಕರು ಹಾಗೂ 299 ಬಾಲಕಿಯರು ಸೇರಿ ಒಟ್ಟು 540 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 475 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.87.96ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಗೌರಿಬಿದನೂರು ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ತರುಣ್ ಕುಮಾರ್ ಜಿ. 579 (ಶೇ.96.50), ಬಾಗೇಪಲ್ಲಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಸತೀಶ್ ಎನ್.ಎಸ್ 568(ಶೇ.94.66), ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿ ನಿಲಯದ ಪಲ್ಲವಿ ಕೆ.ಆರ್ 567 (ಶೇ.94.50), ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಾಗೇಶ್ ಪಿ.ಎ 564 (ಶೇ.94.00) ಅಂಕ ಗಳಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಶೈಲಜಾ ಎನ್.ಎಸ್ 564 (ಶೇ.94.00), ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಿಜಯ್ ಕೆ. 553 (ಶೇ.92.16).
ಚಿಂತಾಮಣಿ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಕೀರ್ತನ ಬಿ.ಎಂ 552 (ಶೇ.92.00), ಗೌರಿಬಿದನೂರು ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಮಲ್ಲಿಕಾ.ಸಿ.ಎಸ್ 552 (ಶೇ.92.00) ಹಾಗೂ ಚಿಕ್ಕಬಳ್ಳಾಪುರ ನಗರದ ಡಿ.ದೇವರಾಜ ಅರಸು, ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಮೇಘನ 549 (ಶೇ91.50) ಅಂಕ ಪಡೆದಿದ್ದಾರೆ ಎಂದು ಡಾ.ವಿ.ಅಶೋಕ್ ತಿಳಿಸಿದ್ದಾರೆ.
ಡೀಸಿ, ಸಿಇಒ ಮೆಚ್ಚುಗೆ: ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಹಾಸ್ಟೆಲ್ ಕ್ಷೇಮಪಾಲಕರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಗುರುದತ್ತ ಹೆಗಡೆ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ.ವಿ.ಅಶೋಕ್ ಹಾಗೂ ಎಲ್ಲಾ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಬಾರಿಗಿಂತ ಉತ್ತಮ: ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಸತಿ ನಿಲಯದ ಒಟ್ಟು 475 ವಿದ್ಯಾರ್ಥಿಗಳಲ್ಲಿ ಶೇ.90ರ ಮೇಲ್ಪಟ್ಟು ಅಂಕಗಳನ್ನು 31 ವಿದ್ಯಾರ್ಥಿಗಳು, ಶೇ.80ರ ಮೇಲ್ಪಟ್ಟು ಅಂಕಗಳನ್ನು 134 ವಿದ್ಯಾರ್ಥಿಗಳು, ಶೇ.70ರ ಮೇಲ್ಪಟ್ಟು ಅಂಕಗಳನ್ನು 147 ವಿದ್ಯಾರ್ಥಿಗಳು, ಶೇ.60ರ ಮೇಲ್ಪಟ್ಟು ಅಂಕಗಳನ್ನು 98 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಪಡೆದು ಗಮನ ಸೆಳೆದಿದ್ದಾರೆ.