Advertisement

ಬಿಜನಗೇರಾ ಗ್ರಾಪಂ: ಶೇ.86.74 ಮತದಾನ

05:16 PM Dec 29, 2020 | Suhan S |

ರಾಯಚೂರು: ಚುನಾವಣಾ ಆಯೋಗದಿಂದ ಸ್ಥಗಿತಗೊಂಡಿದ್ದ ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಮತದಾನ ನಡೆಯಿತು.

Advertisement

ಶೇ.86.74ರಷ್ಟು ಮತದಾನವಾಗಿದೆ. ಬಿಜನಗೇರಾ ಗ್ರಾಪಂ ಚುನಾವಣೆಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಅವರು ರಾಯಚೂರು ತಾಲೂಕಿನ ಬಿಜನಗೇರಾ, ಸಿದ್ರಾಂಪುರ, ರಾಜಲಬಂಡ ಹಾಗೂ ಐಜಾಪುರ ಗ್ರಾಮದ ಮತಗಟ್ಟೆಗಳನ್ನು ವೀಕ್ಷಿಸಿದರು. ಸಿದ್ರಾಂಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಚಿಸಲಾಗಿದ್ದ 231 ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮತದಾನ, ಚುನಾವಣಾ ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲಿಸಿದರು. ಮತದಾನ ಶಾಂತಿಯುತವಾಗಿ ನಡೆಯುತ್ತಿರುವ ಬಗ್ಗೆ ಪಿಆರ್‌ಒ ಅವರಿಂದ ಮಾಹಿತಿ ಪಡೆದುಕೊಂಡರು.  ನಂತರ ಪೊಲಿಂಗ್‌ ಏಜೆಂಟ್‌ರಿಗೆ ಗುರುತಿನ ಚೀಟಿ ನೀಡಿರುವ ಬಗ್ಗೆ ಖಾತ್ರಿ ಪಡಿಸಿಕೊಂಡರು.

ನಂತರ ಬಿಜನಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಚಿಸಲಾಗಿದ್ದ227/ಎ, 227 ಮತಗಟ್ಟೆ ಕೇಂದ್ರ ಹಾಗೂ ರಾಜಲಬಂಡ ಗ್ರಾಮದ ಸರಕಾರಿ ಕಿರಿಯಪ್ರಾಥಮಿಕ ಶಾಲೆಯ 232 ಮತಗಟ್ಟೆ ಕೇಂದ್ರಮತ್ತು ಐಜಾಪುರ ಗ್ರಾಮದ ಸರಕಾರಿ ಹಿರಿಯಪ್ರಾಥಮಿಕ ಶಾಲೆಯ 233/ಎ, 233 ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಹರಿಬಾಬು, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಡಿವೈಎಸ್‌ಪಿ ಶಿವನಗೌಡ ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next