Advertisement
ಬೇರೆಲ್ಲ ಖಾದ್ಯ ತಯಾರಿಕೆಗಿಂತ ಸಿಹಿಖಾದ್ಯ ತಯಾರಿಸುವುದು ಒಂದು ಸವಾಲು. ಸ್ವಲ್ಪ ಅಳತೆ ತಪ್ಪಿದರೂ, ಅದು ಹಳ್ಳ ಹಿಡಿದಂತೆ. ಆದರೆ, ಸಮ್ಮೇಳನದಲ್ಲಿ ಯಾವ ಸಿಹಿಯೂ ಹದಗೆಟ್ಟಿರಲಿಲ್ಲ. ಈ ರಾಜಸ್ಥಾನಿ ಬಾಣಸಿಗರು ಉದ್ಯೋಗ ಅರಸಿಕೊಂಡು, ಎಂಟ್ಟತ್ತು ವರ್ಷಗಳ ಹಿಂದೆಯೇಕರ್ನಾಟಕಕ್ಕೆ ಬಂದವರಂತೆ. ತಮ್ಮ ಕೆಲಸದ ನಡುವೆ ಕನ್ನಡವನ್ನೇ ಆಡುತ್ತಾ, ಮಾದರಿಯಾಗಿದ್ದರು. ಮೈಸೂರು ಪಾಕ, ಬೇಸನ್ ಲಾಡು, ಬೂಂದಿ, ಹೆಸರುಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಹುಗ್ಗಿ ಸೇರಿದಂತೆ 8 ಖಾದ್ಯಗಳು ಕನ್ನಡಿಗರ ಹೃದಯ ಗೆದ್ದವು. ಒಟ್ಟು 30 ಸಿಬ್ಬಂದಿ ಕಳೆದ ಮೂರು ದಿನಗಳಿಂದ ಈ ಸಿಹಿಖಾದ್ಯ ತಯಾರಿಕೆಯಲ್ಲಿ ತೊಡಗಿದ್ದರು. ದಿನಕ್ಕೆ 5 ಲಕ್ಷ ಜನರಿಗೆ ಸಿಹಿ ತಯಾರಿಸುವಷ್ಟು ಸಾಮರ್ಥ್ಯ ಹೊಂದಿದ್ದೇವೆ. ಕರ್ನಾಟಕದಲ್ಲಿ ಹಲವು ದೊಡ್ಡ ಕಾರ್ಯಕ್ರಮಗಳಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ್ದೇವೆ ಎನ್ನುತ್ತಾರೆ ಸಿಹಿ ಖಾದ್ಯ ಪರಿಣತ ಜಬ್ಬರ್ ಸಿಂಗ್.