Advertisement

85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವ ಸಿದ್ಧತೆ: ಡಿಸಿ ಶರತ್

12:36 PM Feb 05, 2020 | sudhir |

ಕಲಬುರಗಿ: ಫೆ 5 ರಿಂದ ಮೂರು ದಿನಗಳ ಕಾಲ‌ ನಡೆಯುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಗಳು ಶೇ 90 ರಷ್ಟು ಪೂರ್ಣಗೊಂಡಿವೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.

Advertisement

ಸಮ್ಮೇಳನದ ಸರ್ವ ಸಿದ್ದತೆ ಕುರಿತಾಗಿ ಸಮ್ಮೇಳನದ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಸರಕಾರ 10 ಕೋ ರೂ ಬಿಡುಗಡೆ ಮಾಡಿದೆ ಎಂದರು.

ಸಮ್ಮೇಳನದ ಮುಖ್ಯ ವೇದಿಕೆ, ಪುಸ್ತಕ ಮಳಿಗೆ, ಅಡುಗೆ ವೇದಿಕೆ ಸೇರಿದಂತೆ ಇತರ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ವಸತಿ ಹಾಗೂ ಸಾರಿಗೆ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ. 113 ಕಡೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಸಮ್ಮೇಳನಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಿಗಮವನ್ನು ಕೇಳಿಕೊಳ್ಳಲಾಗಿದೆ. ಅದೇ ಸಮ್ಮೇಳನದ ಮೂರು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಚಿಂತನೆ ನಡೆಸಲಾಗೊದೆ. ಈ ಕುರಿತು ಸೋಮವಾರ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

ಫೋನ್ ನಲ್ಲೇ ಮಾಹಿತಿ: ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಸಮ್ಮೇಳನದ ಸಿದ್ದತೆ ‌ಕುರಿತಾಗಿ ಫೋನ್ ಮಾಡಿ ದಿನಾಲು ಪಡೆಯುತ್ತಿದ್ದಾರೆ ಜತೆಗೆ ಸೂಕ್ತ ಸಲಹೆ ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಸಮ್ಮೇಳನಕ್ಕೆ ಈಗಾಗಲೇ ಕಲಬುರಗಿ ನಗರದ್ಯಾಂತ ಎಲ್ಲಾ ಶಾಲೆ ಕಾಲೇಜುಗಳಿಗೆ 3 ದಿನ ರಜೆ ಘೋಷಿಸಲಾಗಿದೆ ಆದರೆ ಸಮ್ಮೇಳನವನ್ನು ಮಕ್ಕಳು ಸಹ ಕಣ್ತುಂಬಿಕೊಳ್ಳಲು ಜಿಲ್ಲೆಯಾದ್ಯಂತ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ.

ಸಮ್ಮೇಳನದಲ್ಲಿ 500 ಪುಸ್ತಕ ಮಳಿಗೆ, 300 ವಾಣಿಜ್ಯ ಮಳಿಗೆ ತೆರೆಯಲಾಗಿದೆ

ಸಮ್ಮೇಳನದ ‘ವಿಜಯ ಪ್ರಧಾನ ವೇದಿಕೆ’ ಈಗಾಗಲೇ ಬಹುತೇಕ ಸಿದ್ದವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಲಬುರಗಿ ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಸಮ್ಮೇಳನಕ್ಕೆ 2 ಎಸ್ಪಿ, ಡಿವೈಎಸ್ಪಿ ಸೇರಿದಂತೆ ಭದ್ರತೆಗಾಗಿ 4 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

ಸಮ್ಮೇಳನದ ಮೆರವಣಿಗೆಯನ್ನ ಡ್ರೋಣ್ ಕ್ಯಾಮರದ ಮೂಲಕ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next