Advertisement

Ayodhya: 85,000 ಕೋಟಿ ರೂ. ಹೂಡಿಕೆ- ಮೂಲ ಸೌಕರ್ಯ, ಹೋಟೇಲ್‌ ನಿರ್ಮಾಣ ಈಗ ಬಿರುಸು

01:20 AM Jan 25, 2024 | Team Udayavani |

ಅಯೋಧ್ಯಾ: ರಾಮ ಮಂದಿರ ನಿರ್ಮಾಣದ ಬಳಿಕ ಅಯೋಧ್ಯೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದ ಮರು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಇನ್ನೂ 178 ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ. ಇದರ ನಡುವೆಯೇ 2031ರ ವೇಳೆಗೆ ಈಡೇರಿಸುವ ಗುರಿ ಹೊಂದಿರುವ ಅಯೋಧ್ಯಾ ಮಾಸ್ಟರ್‌ ಪ್ಲಾನ್‌ನ ಸಿದ್ದತೆಗಳೂ ನಡೆಯುತ್ತಿದ್ದು, 8 ಪ್ರಮುಖ ಅಂಶಗಳ ಮೇಲೆ ಅಯೋಧ್ಯೆ ಮರು ಅಭಿವೃದ್ಧಿಗೆ ಯೋಜಿಸಲಾಗಿದೆ.

Advertisement

ಅಧ್ಯಾತ್ಮಿಕ ವಿಶ್ವ ವಿದ್ಯಾಲಯ, ಗ್ರೀನ್‌ ಟೌನ್‌ಶಿಪ್‌, ಜಲಮೂಲಗಳು, ನದಿ ಮುಂಭಾಗದ ಅಭಿವೃದ್ಧಿ, ಧರ್ಮಶಾಲೆಗಳ ನಿರ್ಮಾಣವೂ ಇದರಲ್ಲಿ ಸೇರಿದೆ. ಪ್ರಗತಿಯಲ್ಲಿರುವ ಈ ಎಲ್ಲಾ ಕಾರ್ಯಗಳೂ ಪೂರ್ಣಗೊಂಡರೆ ಅಯೋಧ್ಯೆಗೆ ಹೊಸ ಆರ್ಥಿಕ ಶಕ್ತಿ ಲಭಿಸುವ ಮೂಲಕ ರಾಜ್ಯದ ಆರ್ಥಿಕತೆಯೂ ಪ್ರಗತಿ ಸಾಧಿಸಲಿದೆ. ಇದರ ಜತೆಗೆ ಹಲವಾರು ಕಂಪನಿಗಳೂ ಪವಿತ್ರ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಘಟಕಗಳನ್ನು ತೆರೆಯಲು ಮುಂದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next