Advertisement

ನೆಲಮಂಗಲದಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 85 ಲಕ್ಷ ರೂಪಾಯಿ ವಶ 

10:21 AM May 01, 2018 | Team Udayavani |

ಬೆಂಗಳೂರು: ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ರೂಪಾಯಿ ಹಣವನ್ನು  ಮಂಗಳವಾರ ಬೆಳಗ್ಗೆ  ಜಪ್ತಿ ಮಾಡಲಾಗಿದೆ. 

Advertisement

ಶಿವಮೊಗ್ಗದತ್ತ ಸಾಗುತ್ತಿದ್ದ  ಮಹೀಂದ್ರಾ ಎಕ್ಸ್‌ ಯುವಿ ಕಾರನ್ನು ಜಾಸ್‌ ಟೋಲ್‌ ಬಳಿ ತಪಾಸಣೆ  ನಡೆಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಕೂಡಲೇ ಚಾಲಕ ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ. 

ತೆರಿಗೆ ವಂಚಸಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಐಟಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next