Advertisement

World Cup: ವಿಶ್ವಕಪ್‌ ಕ್ರಿಕೆಟ್‌ ವೇಳೆ 8,400 ಕಿ.ಮೀ. ಪಯಣಿಸಲಿದೆ ಟೀಮ್‌ ಇಂಡಿಯಾ!

10:57 PM Jun 27, 2023 | Team Udayavani |

ನವದೆಹಲಿ: ಇದೊಂದು ಕೌತುಕದ ಲೆಕ್ಕಾಚಾರ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಅತೀ ಹೆಚ್ಚು ಪ್ರಯಾಣ ಮಾಡುವ ತಂಡ ಯಾವುದು ಎಂಬುದೊಂದು ಪ್ರಶ್ನೆ. ಇಂಥದೊಂದು ದಾಖಲೆಯನ್ನು ಟೀಮ್‌ ಇಂಡಿಯಾ ಬರೆಯಲಿದೆ!

Advertisement

9 ಲೀಗ್‌ ಪಂದ್ಯಗಳನ್ನು 9 ಬೇರೆ ಬೇರೆ ನಗರಗಳಲ್ಲಿ ಆಡಲಿರುವ ಭಾರತ ತಂಡ, ಈ 34 ದಿನಗಳ ಅವಧಿಯಲ್ಲಿ ಗರಿಷ್ಠ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಾಗುತ್ತದೆ. ಒಂದು ವೇಳೆ ಭಾರತ ತಂಡ ಸೆಮಿಫೈನಲ್‌ ಅಥವಾ ಫೈನಲ್‌ ತಲುಪಿದರೆ ಸುಮಾರು 9,700 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ವೇಳಾಪಟ್ಟಿ ಪ್ರಕಾರ ಭಾರತ ಅತೀ ಹೆಚ್ಚು 9 ನಗರಗಳಲ್ಲಿ ಲೀಗ್‌ ಪಂದ್ಯಗಳನ್ನು ಆಡಲಿರುವ ಏಕೈಕ ತಂಡವಾಗಿದೆ. ಉಳಿದ ತಂಡಗಳು ಒಂದು ತಾಣದಲ್ಲಿ ಗರಿಷ್ಠ 2 ಪಂದ್ಯಗಳನ್ನು ಆಡಲಿವೆ. ಇದೇ ವೇಳೆ ಪಾಕಿಸ್ಥಾನ ತಂಡ ಈ ವಿಶ್ವಕಪ್‌ ವೇಳೆ 6,849 ಕಿ.ಮೀ. ದೂರ ಸಂಚಾರ ಮಾಡಲಿದೆ. ಭದ್ರತಾ ಕಾರಣಗಳಿಂದ ಪಾಕಿಸ್ಥಾನ 5 ನಗರಗಳಲ್ಲಷ್ಟೇ ಲೀಗ್‌ ಪಂದ್ಯಗಳನ್ನು ಆಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next