Advertisement

ಈವರೆಗೆ 22 ಸಾವಿರ ಉಗ್ರರನ್ನು ಹತ್ಯೆಗೈಯಲಾಗಿದೆ; ಕೇಂದ್ರ ಲೋಕಸಭೆಗೆ ನೀಡಿದ ಅಂಕಿ-ಅಂಶ

10:07 AM Dec 11, 2019 | Nagendra Trasi |

ನವದೆಹಲಿ: ಆಗಸ್ಟ್ 2019ರವರೆಗೆ ಪಾಕಿಸ್ತಾನ ಮೂಲದ 84 ಉಗ್ರರು ಒಳನುಸುಳಲು ಯತ್ನಿಸಿದ್ದರು. ಇದರಲ್ಲಿ 59 ಉಗ್ರರು ಭಾರತೀಯ ಗಡಿಯೊಳಗೆ ಪ್ರವೇಶಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ.

Advertisement

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದ ಶ್ರೀಧರ್ ಕೋಟಾಗಿರಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಜಿ.ಕೃಷ್ಣಾ ರೆಡ್ಡಿ, 1990ರಿಂದ ಈವರೆಗೆ ಜಮ್ಮು-ಕಾಶ್ಮೀರದಲ್ಲಿ 22, 557 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. 1011 ಉಗ್ರರನ್ನು ಹೊಡೆದುರುಳಿಸಲಾಗಿದೆ. 42 ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

2005ರಿಂದ 2019ರ ಅಕ್ಟೋಬರ್ ವರೆಗೆ ಭದ್ರತಾ ಪಡೆಗಳ ತೀಕ್ಷ್ಣ ಕಣ್ಗಾವಲಿನಿಂದಾಗಿ 2,253 ಉಗ್ರರನ್ನು ಒಳನುಸುಳದಂತೆ ತಡೆದು ಹಿಂದಕ್ಕೆ ಅಟ್ಟಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಗಡಿ ಮೂಲಕ ಒಳನುಸಳಲು ಪ್ರಯತ್ನಿಸಿದ್ದು, ಪರೋಕ್ಷ ಯುದ್ಧದ ಮೂಲಕ ಕಣಿವೆಯಲ್ಲಿ ಉಗ್ರರ ಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಿಂಸಾಚಾರ ನಡೆಸಿ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಲು ನೆರೆದೇಶ ಸಂಚು ರೂಪಿಸತ್ತು. ಆದರೆ ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸುವ ಮೂಲಕ ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗಿತ್ತು ಎಂದು ತಿಳಿಸಿದರು.

ಅಲ್ಲದೇ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೀಗ ಜಮ್ಮು-ಕಾಶ್ಮೀರದಲ್ಲಿ  ಜನಜೀವನ ಸಂಪೂರ್ಣ ಯಥಾಸ್ಥಿತಿಗೆ ಮರಳಿದೆ. ಆದರೆ ಕಾಂಗ್ರೆಸ್ ನ ಮನಸ್ಥಿತಿಯನ್ನು ಯಥಾಸ್ಥಿತಿಗೆ ತರುವುದು ಸಾಧ್ಯವೇ ಇಲ್ಲ. ಯಾಕೆಂದರೆ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ರಕ್ತಪಾತವಾಗಲಿದೆ ಎಂದು ಭವಿಷ್ಯ ನುಡಿಯುತ್ತಿದೆ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next