Advertisement

ರಾಜಕೀಯ ಸ್ವರದಲ್ಲೇ ಸಮ್ಮೇಳನಕ್ಕೆ ತೆರೆ

06:00 AM Nov 27, 2017 | Team Udayavani |

ರಾಷ್ಟ್ರಕ ಕುವೆಂಪು ಪ್ರಧಾನ ವೇದಿಕೆ ಮೈಸೂರು: 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯದಿಂದಲೇ ಆರಂಭವಾಗಿ, ರಾಜಕೀಯ ಭಾಷಣದ ಅಬ್ಬರದಿಂದಲೇ ಸಂಪನ್ನಗೊಂಡಿದೆ. ಚಂಪಾ ಅವರ ರಾಜಕೀಯ ಪ್ರೇರಿತ ಅಧ್ಯಕ್ಷೀಯ ಭಾಷಣಕ್ಕೆ ಎಂಟೂ ದಿಕ್ಕಿನಿಂದಲೂ ವಾಗ್ಧಾಳಿ ನಡೆಸಲು ಸಜ್ಜಾಗಿಯೇ ಬಂದಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಅವರು, ರಾಜಕಾರಣಕ್ಕೆ ಸಮ್ಮೇಳನದ ವೇದಿಕೆ ಬಳಸಿಕೊಂಡದ್ದು ಏಕೆ ಎಂದು ನೇರವಾಗಿಯೇ ಪ್ರಶ್ನೆ ಮಾಡಿದರು.

Advertisement

ಢೋಂಗಿ ಜಾತ್ಯತೀತವಾದದ ಪ್ರಚಾರ, ರಾಜಕಾರಣ ಮಾಡಲು ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಬಳಸಬೇಡಿ. ರಾಜಕೀಯ ಮೇಲಾಟ, ವೋಟು ಕೇಳಲು ಬಳಕೆಯಾದರೆ ಈ ವೇದಿಕೆ ಅಪಾತ್ರವಾಗುತ್ತದೆ ಎಂದು ಕೇಂದ್ರ ಸಚಿವರು ನೇರವಾಗಿಯೇ ಚಂಪಾ ಅವರಿಗೆ ತಿರುಗೇಟು ನೀಡಿದರು. ತಮ್ಮ ಮಾತಿನ ಆರಂಭದಲ್ಲಿ ಸಮ್ಮೇಳನಾಧ್ಯಕ್ಷ ಪೊ›.ಚಂದ್ರಶೇಖರ ಪಾಟೀಲ ಅವರ ಹೆಸರನ್ನು ಹೇಳಿದ್ದು ಬಿಟ್ಟರೆ, ತಮ್ಮ ಮಾತಿನುದ್ದಕ್ಕೂ ಅವರ ಹೆಸರೇಳದೆ ಅವರ ನಡೆಯನ್ನು ಕಟುವಾಗಿ ಟೀಕಿಸಿದರು.

ಕನ್ನಡ ರಾಷ್ಟ್ರೀಯ ವಿಚಾರದ ಭಾಗ. ಢೋಂಗಿ ಜಾತ್ಯತೀತ ವಾದದ ಹೆಸರು, ಸೋಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವೇದಿಕೆಯನ್ನು ಬಳಕೆ ಮಾಡಬಾರದು. ವೋಟು ಯಾರಿಗೆ ಹಾಕಬೇಕು ಎಂದು ಕೇಳುವುದಕ್ಕೆ ಬೇರೆಯದೇ ವೇದಿಕೆ ಇದೆ. ಅದಕ್ಕೆ ಇದು ವೇದಿಕೆಯಲ್ಲ. ಕಸಾಪ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಯಾವುದೇ ಪಕ್ಷದ ಮುಖವಾಣಿಯಲ್ಲ ಎಂದು ಹೇಳಿದರು.

ಮೈಸೂರು ಸಾಂಸ್ಕೃತಿಕ ರಾಜಧಾನಿ. ವಿಶ್ವಖ್ಯಾತ ದಸರಾ ಮೆರವಣಿಗೆ ಸಂದರ್ಭದಲ್ಲಿ ಅಂಬಾರಿ ಮೇಲೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವ ಸತ್ಸಂಪ್ರದಾಯ ಆಗಬೇಕಿತ್ತು ಎಂದು ಚಂಪಾ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

103 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡುವಲ್ಲಿ ಮೈಸೂರು ಅರಸರ ಔದಾರ್ಯವಿದೆ. ಹೀಗಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಾಜಮನೆತನದವರಾದ ಪ್ರಮೋದಾದೇವಿ ಒಡೆಯರ್‌, ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರಿಂದ ಚಾಲನೆ ಕೊಡಿಸುವಂತಹ ಉದಾರತೆ ತೋರಿಸಬಹುದಿತ್ತು ಎಂದರು.

Advertisement

ಕನ್ನಡ ಕಟ್ಟಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ವೈಷಮ್ಯ, ವಿಷಬೀಜ ಬಿತ್ತುವುದು, ಢೋಂಗಿ ಜಾತ್ಯತೀತವಾದದ ಕಲಸು ಮೇಲೊಗರವಾದರೆ ಕನ್ನಡ ಕಟ್ಟುವ ಕೆಲಸವಾಗಲ್ಲ. ಕನ್ನಡಕ್ಕೆ ಮೂಲಭೂತವಾಗಿ ದೈವತ್ವವಿದೆ, ಅದನ್ನು ಮುಂದೆ ಬೆಳೆಸುತ್ತಾ ಹೋಗೋಣ ಎಂದು ಹೇಳಿದರು.

ವರ್ಗಸಂಘರ್ಷ, ರಕ್ತಕ್ರಾಂತಿ, ಸಮಾಜ ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ನಡುವೆ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಜ್ಞೆ ಬೇಕಿದೆ. ಕನ್ನಡ ಮತ್ತು ಬೇರೆ ಭಾಷೆಗಳ ಮಧ್ಯೆ ಸಂಘರ್ಷದ ನಡುವೆ ಕನ್ನಡ ಕಟ್ಟುವ ಕೆಲಸ ನಡೆದಿದೆ. ಜಾತ್ಯತೀತ ಭಾರತದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಢೋಂಗಿ ಜಾತ್ಯತೀತತೆ ವೈಭàಕರಣ, ಅಫ‌jಲ್‌ ಗುರು ಸೇರಿದಂತೆ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವುದು, ಕಾಶ್ಮೀರದಲ್ಲಿನ ಘಟನೆಯ ಬಗೆಗೆ ದೇಶ ವಿರೋಧಿ ವಾದ ಮಾಡುವುದು ಸರಿಯಲ್ಲ ಎಂದರು.

ಅನಂತ್‌ ಭಾಷಣದ ಪ್ರಮುಖಾಂಶಗಳು
– ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗೆ ಕೇಂದ್ರ ಸರ್ಕಾರ ಬದ್ಧ.
– ಕೇಂದ್ರ-ರಾಜ್ಯ ಸರ್ಕಾರಗಳು ಒಟ್ಟಾದರೆ ಆಯಾ ರಾಜ್ಯಗಳ ಭಾಷೆಯಲ್ಲೇ ಕಲಿಕಾ ಮಾಧ್ಯಮ ತರಲು ಸಾಧ್ಯ
– ಕನ್ನಡದ ಅಸ್ತಿತ್ವ ಉಳಿಸಿಕೊಂಡು ಅಭಿವೃದ್ಧಿ ಹೊಂದಲು ಗಣಕೀಕೃತ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕು.
– ಪಂಪ, ರನ್ನ, ರಾಘವಾಂಕರಿಂದ ಇತ್ತೀಚಿನವರೆಗಿನ ಕವಿಗಳ ಗ್ರಂಥಗಳನ್ನು ಗಣಕೀಕರಣಗೊಳಿಸಿ, ಎಲ್ಲ ಒಂದೇ ಆ್ಯಪ್‌ನಲ್ಲಿ ಸಿಗುವಂತಾಗಬೇಕು.
– ಕನ್ನಡ ಶಾಲೆಗಳಲ್ಲಿನ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಹುಡುಕಿ, ಕನ್ನಡ ಶಾಲೆಗಳ ಬಲವರ್ಧನೆಗೊಳಿಸಬೇಕು
– ಐಟಿ- ಬಿಟಿಯಿಂದ ಭೌತ-ರಸಾಯನ- ಖಗೋಳ ಶಾಸ್ತ್ರ ಸೇರಿದಂತೆ ಆಧುನಿಕ ತಂತ್ರಜ್ಞಾನಗಳೆಲ್ಲವೂ ಕನ್ನಡದಲ್ಲಿ ಬಂದರೆ ಕನ್ನಡ ಕಟ್ಟಲು ಸಾಧ್ಯ.
– ಸಂಸತ್‌ ಅಧಿವೇಶನ ನಡೆಯುವಾಗ ದೆಹಲಿಗೆ ರಾಜ್ಯದ ನಿಯೋಗ ಕರೆ ತನ್ನಿ.
– ನೆಲ-ಜಲ-ಗಡಿ ಷಯದಲ್ಲಿ ಪûಾತೀತವಾಗಿ ಕೆಲಸ ಮಾಡಿಕೊಡಲು ಸಿದ್ಧ.

-ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next