1983ರ ಭಾರತ ಕ್ರಿಕೆಟ್ ತಂಡದ ವಿಶ್ವಕಪ್ ವಿಜಯದ ಕುರಿತಾದ ಚಿತ್ರ ‘83’ ಯ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಭಾರಿ ಪ್ರಂಶಸೆಗೆ ಪಾತ್ರವಾಗಿದೆ. ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್ ಪಾತ್ರದಲ್ಲಿ ಅಭಿನಯಿಸಿರುವ ರಣವೀರ್ ಸಿಂಗ್ ಪಾತ್ರಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
83 ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದೂರಿ, ಮಧು ಮಂಟೆನಾ ವರ್ಮಾ ಮತ್ತು ಸಾಜಿದ್ ನಾಡಿಯವಾಲ ಮುಂತಾದವರು ನಿರ್ಮಾಣ ಮಾಡಿದ್ದಾರೆ.
ಟ್ರೈಲರ್ ನಲ್ಲಿ ರಣವೀರ್ ಸಿಂಗ್ ಜೊತೆಗೆ ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ ಮಿಂಚಿದ್ದಾರೆ. “ನಾವು 35 ವರ್ಷಗಳ ಹಿಂದೆ ಸ್ವಾತಂತ್ರ್ಯವನ್ನು ಗೆದ್ದಿದ್ದೇವೆ ಆದರೆ ನಾವು ಗೌರವವನ್ನು ಇನ್ನೂ ಗಳಿಸಿಲ್ಲ” ಎಂಬ ಡೈಲಾಗ್ ನೋಡುಗರಿಗೆ ಅಭಿಮಾನದ ಕಿಚ್ಚು ಹತ್ತಿಸುತ್ತದೆ.
ಇದನ್ನೂ ಓದಿ:‘ಅಮೃತ್ ಅಪಾರ್ಟ್‌ಮೆಂಟ್ಸ್’ ನಲ್ಲಿ ಗೆಲುವಿನ ನಗೆ
Related Articles
‘83’ ಚಿತ್ರವು ಡಿಸೆಂಬರ್ 24 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್ ಮತ್ತು ನಾಗಾರ್ಜುನ ಅಕ್ಕಿನೇನಿ ಅವರ ಅನ್ನಪೂರ್ಣ ಸ್ಟುಡಿಯೋಸ್ ಕ್ರಮವಾಗಿ ತಮಿಳು ಮತ್ತು ತೆಲುಗು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದೆ. ಪೃಥ್ವಿರಾಜ್ ಅವರ ನಿರ್ಮಾಣ ಮತ್ತು ಕಿಚ್ಚ ಸುದೀಪ ಅವರ ಶಾಲಿನಿ ಆರ್ಟ್ಸ್ ಈ ಚಿತ್ರವನ್ನು ಮಲಯಾಳಂ ಮತ್ತು ಕನ್ನಡ ಆವೃತ್ತಿಗಳಲ್ಲಿ ಕೈಜೋಡಿಸುತ್ತಿದೆ.
– KIRTI AZAD (@Kirtiazaad) 30 Nov 2021