Advertisement

ಆಸ್ತಿ ವಿವರ ಸಲ್ಲಿಸಿಲ್ಲ ರಾಜ್ಯದ 82 ಐಎಎಸ್‌ ಅಧಿಕಾರಿಗಳು

12:08 PM May 22, 2017 | Harsha Rao |

ಹೊಸದಿಲ್ಲಿ: ಕರ್ನಾಟಕದ 82 ಮಂದಿ ಸೇರಿದಂತೆ ದೇಶದ 1800ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳು ನಿಗದಿತ ಅವಧಿಯೊಳಗೆ ತಮ್ಮ ಸ್ಥಿರಾಸ್ತಿ ವಿವರವನ್ನು ಸಲ್ಲಿಸಲು ವಿಫ‌ಲರಾಗಿದ್ದಾರೆ. ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯವೇ ಈ ಮಾಹಿತಿ ನೀಡಿದೆ.

Advertisement

ಕೇಂದ್ರ ಸರಕಾರದ ಆದೇಶದ ಪ್ರಕಾರ ದೇಶದ ಎಲ್ಲ ಐಎಎಸ್‌ ಅಧಿಕಾರಿಗಳು ಜನವರಿ ಅಂತ್ಯದವರೆಗಿನ ತಮ್ಮ ಸ್ಥಿರಾಸ್ತಿ ವಿವರಗಳನ್ನು ವರ್ಷಾಂತ್ಯದ ವೇಳೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, 1856 ಮಂದಿ ಐಎಎಸ್‌ ಅಧಿಕಾರಿಗಳು 2016ನೇ ಸಾಲಿನ ತಮ್ಮ ಆಸ್ತಿ ವಿವರವನ್ನು ಈವರೆಗೂ ಸಲ್ಲಿಸಿಲ್ಲ.

ಈ ಪೈಕಿ ಉತ್ತರ ಪ್ರದೇಶ ಕೇಡರ್‌ ಮುಂಚೂಣಿಯಲ್ಲಿದ್ದು, ಇಲ್ಲಿನ 255 ಅಧಿಕಾರಿಗಳು ವರದಿ ಸಲ್ಲಿಸಿಲ್ಲ. ಉಳಿದಂತೆ ಕರ್ನಾಟಕದ 82, ಮಧ್ಯಪ್ರದೇಶದ 118, ಪಶ್ಚಿಮ ಬಂಗಾಲದ 109, ಅರುಣಾಚಲಪ್ರದೇಶ, ಗೋವಾ, ಮಿಜೋರಾಮ್‌ ಕೇಂದ್ರಾಡಳಿತ ಪ್ರದೇಶಗಳ ಕೇಡರ್‌ನ 104 ಅಧಿಕಾರಿಗಳು ಮಾಹಿತಿ ಸಲ್ಲಿಸಿಲ್ಲ.

ಹೀಗೆ ಮಾಹಿತಿ ಸಲ್ಲಿಸದ ಅಧಿಕಾರಿಗಳ ಭಡ್ತಿ ಮತ್ತಿತರ ವೃತ್ತಿ ಸಂಬಂಧಿ ಅಂಶಗಳನ್ನು ತಡೆಹಿಡಿಯಲು ಸರಕಾರಕ್ಕೆ ಅವಕಾಶವಿದೆ. ನಿಯಮಗಳ ಪ್ರಕಾರ, ದೇಶದ ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸ್ಥಿರಾಸ್ತಿ ಹಾಗೂ ತಮ್ಮ ಭೋಗ್ಯದಲ್ಲಿರುವ ವಸ್ತುಗಳ ವಿವರವನ್ನು ಸರಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next