Advertisement

ಮನೆ ಬಿಡದ 82 ಮಾಜಿ ಸಂಸದರು

11:09 AM Sep 17, 2019 | sudhir |

ನವದೆಹಲಿ: ಮಾಜಿ ಸಂಸದರಿಗೆ ದೆಹಲಿಯಲ್ಲಿ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಲೋಕಸಭೆ ಸಮಿತಿ ಈಗಾಗಲೇ ಹಲವು ಬಾರಿ ಕಟ್ಟುನಿಟ್ಟಾಗಿ ಆದೇಶ ನೀಡಿದ್ದರೂ, ಇನ್ನೂ 82 ಮಾಜಿ ಸಂಸದರು ಮನೆ ಖಾಲಿ ಮಾಡಿಲ್ಲ.

Advertisement

ಕಳೆದ ಆಗಸ್ಟ್‌ 19 ರಂದು 200 ಮಾಜಿ ಸಂಸದರಿಗೆ ಸಿ.ಆರ್‌. ಪಾಟೀಲ್‌ ನೇತೃತ್ವದ ವಸತಿ ವಿಚಾರಕ್ಕಾಗಿನ ಲೋಕಸಭೆಯ ಸಮಿತಿ ನೋಟಿಸ್‌ ನೀಡಿತ್ತು.

ಒಂದು ವಾರದೊಳಗೆ ಬಂಗಲೆ ಖಾಲಿ ಮಾಡುವಂತೆ ಸೂಚಿಸಿತ್ತು. ಇಲ್ಲದಿದ್ದರೆ, ನೀರು, ವಿದ್ಯುತ್‌ ಮತ್ತು ಅಡುಗೆ ಅನಿಲ ಸಂಪರ್ಕವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಇಷ್ಟಾದರೂ, 82 ಮಾಜಿ ಸಂಸದರು ಮನೆ ಖಾಲಿ ಮಾಡಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ನಿಯಮಗಳ ಪ್ರಕಾರ ಲೋಕಸಭೆ ವಿಸರ್ಜನೆ ಯಾಗುತ್ತಿದ್ದಂತೆಯೇ ಒಂದು ತಿಂಗಳಲ್ಲಿ ಸಂಸದರು ತಮ್ಮ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next