Advertisement

ಜ.2ರಿಂದ ಮಲತ್ಯಾಜ್ಯ ಸಂಸ್ಕರಣೆ ಸೇವೆ ಆರಂಭ: 80 ಬಡಗಬೆಟ್ಟು ಗ್ರಾ.ಪಂ. ಸಹಿತ 13 ಗ್ರಾ.ಪಂ. ವ್ಯಾಪ್ತಿಗೆ ಸೇವೆ ಲಭ್ಯ

10:24 PM Dec 29, 2022 | Team Udayavani |

ಉಡುಪಿ: ಗ್ರಾಮೀಣ ಭಾಗದಲ್ಲಿ ವ್ಯವಸ್ಥಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಮಲತ್ಯಾಜ್ಯ ನಿರ್ವಹಣೆಗೆ 80 ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ನೇತಾಜಿ ನಗರದಲ್ಲಿ ನಿರ್ಮಿಸಿರುವ ಮಲತ್ಯಾಜ್ಯ ಸಂಸ್ಕರಣ ಘಟಕವು ಜ. 2ರಿಂದ ಕಾರ್ಯಾರಂಭ ಮಾಡಲಿದೆ.

Advertisement

ರಾಜ್ಯ ಸರಕಾರ ಹಾಗೂ ಉಡುಪಿ ಜಿ.ಪಂ. ವತಿಯಿಂದ ಸುಮಾರು 24 ಲಕ್ಷ ರೂ. ಮೌಲ್ಯದ ವೈಜ್ಞಾನಿಕ ರೀತಿಯಲ್ಲಿ ಮಲತ್ಯಾಜ್ಯ ಸಕ್ಕಿಂಗ್‌ ಹಾಗೂ ಸಾಗಾಣಿಕೆಗೆ ಪೂರಕವಾದ ವಾಹನವನ್ನು ನೀಡಲಾಗಿದೆ. ಇದರ ಸಂಪೂರ್ಣ ನಿರ್ವಹಣೆಯನ್ನು ಬಡಗಬೆಟ್ಟು ಗ್ರಾ.ಪಂ. ಮೂಲಕವೇ ಮಾಡಲಾಗುತ್ತದೆ. ಮನೆ, ಉದ್ಯಮ, ಕೈಗಾರಿಕೆ, ವಾಣಿಜ್ಯ ಸಂಕೀರ್ಣದ ಶೌಚಾಲಯದ ಗುಂಡಿಯ ಮಲತ್ಯಾಜ್ಯವನ್ನು ಸಕ್ಕಿಂಗ್‌ ಮಾಡಿ, ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಜ.2ರಂದು ಈ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ಉಡುಪಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಾ, ಬಡಗಬೆಟ್ಟು ಗ್ರಾ.ಪಂ. ಪಿಡಿಒ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಶುಲ್ಕ ಎಷ್ಟು?
ವಾಸದ ಮನೆಯ ಮಲತ್ಯಾಜ್ಯ ಗುಂಡಿ ಯಿಂದ ತ್ಯಾಜ್ಯ ಸಕ್ಕಿಂಗ್‌ ಮಾಡಿ, ವಿಲೇವಾರಿ ಮಾಡಲು ಮೂಲ ಶುಲ್ಕ 3,000 ರೂ. ಪಾವತಿ ಸಬೇಕು. ಹಾಗೆಯೇ ವಾಣಿಜ್ಯ ಉದ್ದೇಶಿತ ಕಟ್ಟಡ, ಸಂಕೀರ್ಣ, ಉದ್ಯಮ ಇತ್ಯಾದಿ ಗಳಾಗಿದ್ದಲ್ಲಿ 5,000 ರೂ. ಮೂಲ ಶುಲ್ಕ ಪಾವತಿಸಬೇಕು. ಮೂಲ ಶುಲ್ಕದ ಜತೆಗೆ ಘಟಕ ದಿಂದ ಮನೆಗೆ ಅಥವಾ ವಾಣಿಜ್ಯ ಕಟ್ಟಡ, ಸಂಕೀರ್ಣಕ್ಕೆ ಇರುವ ಅಂತರದ ಆಧಾರದಲ್ಲಿ ಪ್ರತೀ ಕಿ.ಮೀ.ಗೆ 35 ರೂ. ಪಾವತಿಸಬೇಕು.

ಮುಂಗಡ ಬುಕ್ಕಿಂಗ್‌
ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳು ಸಹಿತವಾಗಿ ಸುತ್ತಲಿನ 13 ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಗಳು, ಗ್ರಾಮೀಣ ಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದವರು ಇದರ ಸೇವೆಯನ್ನು ಬಳಸಿಕೊಳ್ಳಬಹುದು. ಬಡಗಬೆಟ್ಟು ಗ್ರಾ.ಪಂ.ಗೆ ನೇರವಾಗಿ ಬಂದು ಶುಲ್ಕ ಪಾವತಿಸಬಹುದು ಅಥವಾ ಆನ್‌ಲೈನ್‌ ಮೂಲಕವೂ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ. ಮಾಹಿತಿಗೆ ದೂರವಾಣಿ 0820-2010020 ಅಥವಾ ಮೊಬೈಲ್‌ 9880044435 ಸಂಪರ್ಕಿಸಿ, ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ವೈಜ್ಞಾನಿಕ ಮಾದರಿಯ ಸಂಸ್ಕರಣೆ
ಮಲತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣದಿಂದ ಸಕ್ಕಿಂಗ್‌ ವಾಹನದ ಮೂಲಕ ತರುವ ತ್ಯಾಜ್ಯವನ್ನು ವಿವಿಧ ವಿಧಾನಗಳಲ್ಲಿ ಸಂಪೂರ್ಣ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತದೆ. ತ್ಯಾಜ್ಯವು 15 ದಿನಗಳ ಅನಂತರದಲ್ಲಿ ಗೊಬ್ಬರವಾಗಿ ಗಿಡಮರ ಅಥವಾ ಬೆಳೆಗಳಿಗೆ ಉಪಯೋಗಿಸಲು ಲಭ್ಯವಾಗಲಿದೆ ಎಂದು ಮೂಲ ಗಳು ತಿಳಿ ಸಿ ವೆ.

Advertisement

ಸೇವೆ ಹೇಗೆ?
ಮನೆ ಅಥವಾ ವಾಣಿಜ್ಯ ಸಂಕೀರ್ಣ ಯಾವುದೇ ಇರಲಿ. ಆದ್ಯತೆಯ ಮೇರೆಗೆ ಯಾರು ಮೊದಲು ಬುಕ್‌ ಮಾಡ ಲಿದ್ದಾರೆಯೋ ಅವರಿಗೆ ಮೊದಲ ಸೇವೆ ಒದಗಿಸಲಾಗುತ್ತದೆ. ಬುಕ್‌ ಮಾಡಿದ ದಿನವೇ ಅಥವಾ ಎರಡು ದಿನದ ಅಂತರ ದಲ್ಲಿ ಸೇವೆ ಲಭ್ಯವಾಗಲಿದೆ. ಮನೆಯವರಿಗೆ ಯಾವುದೇ ಕೆಲಸ ಇರುವುದಿಲ್ಲ. ಸಂಪೂರ್ಣವಾಗಿ ಸಕ್ಕಿಂಗ್‌ ಯಂತ್ರದ ಮೂಲಕವೇ ನಿರ್ವಹಿಸಲಾಗುತ್ತದೆ.

ಜಿಲ್ಲೆಯಲ್ಲೇ ಪ್ರಥಮ
80 ಬಡಗಬೆಟ್ಟು ಗ್ರಾ.ಪಂ.ನಲ್ಲಿ ನಿರ್ಮಾಣ ವಾಗಿರುವ ಮಲತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಅತ್ಯಂತ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇಂಹದ್ದೊಂದು ಸೇವೆ ಆರಂಭವಾಗುತ್ತಿರುವುದು ಉಡುಪಿ ಜಿಲ್ಲೆಯಲ್ಲೇ ಪ್ರಥಮ. ಬಡಗಬೆಟ್ಟು ಗ್ರಾ.ಪಂ. ಸಹಿತ ತಾಲೂಕು ವ್ಯಾಪ್ತಿಯ 13 ಗ್ರಾ.ಪಂ.ಗಳು ಇದರ ಸೇವೆ ಪಡೆಯಬಹುದು.
– ಶ್ರೀನಿವಾಸ ರಾವ್‌, ಸಿಪಿಒ, ಜಿ.ಪಂ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next