ಕೊಟ್ಟೂರು: 80 ವರ್ಷದ ಇಳಿವಯಸ್ಸಿನಲ್ಲಿ ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿ ಮನೆಗೆ ವಾಪಾಸ್ಸಾಗಿದ್ದಾರೆ. ಕೊಟ್ಟೂರು ಪಟ್ಟಣದ ಹಿರಿಯರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಹೆದರದೇ ಕೋವಿಡ್ ಚಿಕಿತ್ಸೆಗೆ ಸ್ಪಂದಿಸಿ ಸೋಂಕಿನಿಂದ ಮುಕ್ತರಾಗಿದ್ದಾರೆ.
ಅನಾರೋಗ್ಯ ನಿಮಿತ್ತ ಆಗಾಗ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಕೋವಿಡ್ 19 ಪರೀಕ್ಷಿಸಿ ಸೋಂಕು ಇರುವುದು ದೃಢಪಟ್ಟಿತು. ಅವರನ್ನು ಬಳ್ಳಾರಿ ಜಿಲ್ಲೆ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು. ನಂತರ ಅವರ ಮಗನಿಗೆ ನನ್ನ ತಂದೆಯವರು ಬದುಕುತ್ತಾರೆ ಎಂಬ ನಂಬಿಕೆ ಸಹ ಹೋಯಿತು. ನಾನು ಹೆದರಿ ನನ್ನ ತಂದೆ ಉಳಿಯುವುದಿಲ್ಲವೆಂದು ವ್ಯಥೆಪಡುತ್ತಿದ್ದೆ. ಆದರೆಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಇಲ್ಲಿನ ವೈದ್ಯರು ಮುಂದಾದರು. ಚಿಕಿತ್ಸೆಗೆ ಸ್ಪಂದಿಸಿದ ನಮ್ಮ ತಂದೆಯವರು ಆರೋಗ್ಯದಲ್ಲಿ ಚೇತರಿಸಿಕೊಳ್ಳಲು ಪ್ರಾರಂಭಿಸಿದರು.
ಅಲ್ಲಿನಿಂದ ಇಲ್ಲಿವರೆಗೂ ಯಾವುದೇ ರೀತಿಯಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿಲ್ಲ. ಈ ಕೊರೊನಾದಿಂದ ಯಾವುದೇ ರೀತಿಯ ಭಯಬೇಡ ಎನ್ನುವುದಕ್ಕೆ ನಮ್ಮ ತಂದೆಯೇ ಉದಾಹರಣೆ ಎನ್ನುತ್ತಾರೆ ಮಗ. ಇದೊಂದು ಕಾಯಿಲೆ ವಿನಃ ಮರಣವಲ್ಲ. ಆದ್ದರಿಂದ ಯಾರೂ ಈ ಕಾಯಿಲೆಗೆ ಹೆದರದೆ ಮುನ್ನುಗ್ಗಿ ಕಾಯಿಲೆ ಗುಣಪಡಿಸಿಕೊಳ್ಳಿ. ಸರ್ಕಾರ ಹಾಗೂ ವೈದ್ಯರು ಹೇಳಿದಂತೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬೇರೆಯವರಿಗೆ ಕಾಯಿಲೆ ಹರಡದಂತೆ ಜಾಗೃತರಾಗಿರಿ ಎಂದು ಮನವಿ ಮಾಡಿದರು. 14 ದಿನ ನಿತ್ಯದ ಆಹಾರ ಹಾಗೂ ಚಿಕಿತ್ಸೆ ನೀಡಲು ಮುಂದಾದ ಜಿಲ್ಲಾಸ್ಪತ್ರೆ ಯಾವುದೇ ಸಣ್ಣ ಕೊರತೆ ಇಲ್ಲದ ಹಾಗೆ ದಿನಕ್ಕೆ 5ಮಾತ್ರೆಗಳನ್ನು ಕೊಟ್ಟು ಉಸಿರಾಟದ ತೊಂದರೆ ಸುಧಾರಿಸಿದರು ಎಂದು ಹಿರಿಯರು ಸಂತಸ ವ್ಯಕ್ತಪಡಿಸಿದರು.
ಕೋವಿಡ್ ಬಂದರೆ ಯಾರು ಹೆದರಬೇಕಿಲ್ಲ. ನಮ್ಮ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸೋಂಕಿತರಿಗೆ ತೊಂದರೆಯಾಗದಂತೆ ಊಟ ಮತ್ತು ಮಾತ್ರೆಗಳನ್ನು ನೀಡಿ ಚಿಕಿತ್ಸೆ ನೀಡುತ್ತಾರೆ. ಸೋಂಕಿತರು ಯಾವುದೇ ಕಾರಣಕ್ಕೂ ಭಯದಿಂದ ಬದುಕುವ ಹಾಗಿಲ್ಲ. ಮನೆಯಲ್ಲಿಯೇ ಇರುವಂತೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಗುಣಮುಖರನ್ನಾಗಿ ಮಾಡುವುದಷ್ಟೇ ಉದ್ದೇಶವಿರುವುದರಿಂದರೋಗಿಗಳು ರೋಗಮುಕ್ತರಾಗಲು ಸ್ಪಂದಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು –
ಎಸ್. ಎಸ್. ನಕುಲ್ ಡಿಸಿ, ಬಳ್ಳಾರಿ
ಸೋಂಕಿತರಿಗೆ ಚಿಕಿತ್ಸೆ ನೀಡಿ ಬೇಗ ಗುಣಮುಖರನ್ನಾಗಿಸುತ್ತಾರೆ. ಸೋಂಕು ಬಂದಾಗ ಹೆದರದೇ ಚಿಕಿತ್ಸೆ ಪಡೆದುಕೊಳ್ಳಿ. ಮಾಸ್ಕ್ ಮತ್ತು ಅಂತರದಿಂದ ಕೋವಿಡ್ ಓಡಿಸಿ.
– 80 ವರ್ಷದ ವೃದ್ಧ
-ಎಂ. ರವಿಕುಮಾರ