Advertisement

Ayodhya: ರಾಮ ಮಂದಿರದ ನೆಲ ಅಂತಸ್ತಿನ ಶೇ 80 ರಷ್ಟು ಕಾಮಗಾರಿ ಪೂರ್ಣ

08:41 PM Jul 17, 2023 | Team Udayavani |

ಅಯೋಧ್ಯೆ : ರಾಮ ಮಂದಿರದ ನೆಲ ಅಂತಸ್ತಿನ ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2024ರ ಜನವರಿ 15 ಮತ್ತು 24ರ ನಡುವೆ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

Advertisement

”ಅಕ್ಟೋಬರ್ ವೇಳೆಗೆ ದೇವಾಲಯದ ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಅಂತಿಮ ಸ್ಪರ್ಶ ಮಾತ್ರ ಉಳಿಯಲಿದ್ದು ಅದನ್ನು ಡಿಸೆಂಬರ್‌ಗೆ ಪೂರ್ಣಗೊಳಿಸಲಿದ್ದೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಐದು ವರ್ಷದ ಅವತಾರದಲ್ಲಿರುವ ಬಲ ರಾಮನ ಮೂರ್ತಿಯನ್ನು ರಾಮಮಂದಿರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗುತ್ತದೆ, ಗರ್ಭಗುಡಿಯಲ್ಲಿನ ವಿಗ್ರಹದ ಪ್ರತಿಷ್ಠಾಪನೆಯು 2024 ರಲ್ಲಿ ಜನವರಿ 15 ಮತ್ತು 24 ರ ನಡುವೆ ನಡೆಯಲಿದೆ ಎಂದು ಹೇಳಿದರು.

21 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ರಾಯ್ ಹೇಳಿದರು. ರಾಮಮಂದಿರದ ಚೌಕಟ್ಟು ಅಮೃತಶಿಲೆಯದ್ದಾಗಿದ್ದು, ಬಾಗಿಲುಗಳು ಮಹಾರಾಷ್ಟ್ರದ ತೇಗದ ಮರದಿಂದ ಕೆತ್ತಲಾಗಿದೆ. ಈಗಾಗಲೇ ಕೆತ್ತನೆ ಕೆಲಸವೂ ಆರಂಭವಾಗಿದೆ. 1,000 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ದುರಸ್ತಿ ಕಾರ್ಯದ ಅಗತ್ಯವಿರುವುದಿಲ್ಲ” ಎಂದು ಹೇಳಿದರು.

162 ಸ್ತಂಭಗಳು ಸಿದ್ಧವಾಗಿದ್ದು, 4,500 ಕ್ಕೂ ಹೆಚ್ಚು ವಿಗ್ರಹಗಳನ್ನು ಈ ಕಂಬಗಳಲ್ಲಿ ಕೆತ್ತಲಾಗುತ್ತಿದೆ. ಇವುಗಳಲ್ಲಿ ತ್ರೇತಾ ಯುಗದ ಒಂದು ನೋಟ ಕಾಣಿಸುತ್ತದೆ. ಕೇರಳ ಮತ್ತು ರಾಜಸ್ಥಾನದ 40 ಕುಶಲಕರ್ಮಿಗಳು ಕಂಬಗಳ ಮೇಲೆ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಕಂಬವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಕಂಬದಲ್ಲಿ ಇಪ್ಪತ್ತರಿಂದ 24 ಮೂರ್ತಿಗಳನ್ನು ಕೆತ್ತಲಾಗುತ್ತಿದೆ. ಮೇಲಿನ ಭಾಗದಲ್ಲಿ ಎಂಟರಿಂದ 12, ಮಧ್ಯದಲ್ಲಿ ನಾಲ್ಕರಿಂದ ಎಂಟು ಮತ್ತು ಕೆಳಗಿನ ಭಾಗದಲ್ಲಿ ನಾಲ್ಕರಿಂದ ಆರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಸ್ತಂಭದ ಮೇಲೆ ಪ್ರತಿಮೆಯನ್ನು ಕೆತ್ತಲು ಒಬ್ಬ ಕುಶಲಕರ್ಮಿ ಸುಮಾರು 200 ದಿನಗಳನ್ನು ತೆಗೆದುಕೊಳ್ಳುತ್ತಾನೆ. ದೇವಾಲಯದ ಅಡಿಪಾಯವು 15 ಅಡಿ ಆಳ ಮತ್ತು ಕಲ್ಲಿನಿಂದ ಮಾಡಲ್ಪಟ್ಟಿದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next