Advertisement
ಸೋಮವಾರ ಇಲ್ಲಿನ “ಅಸಾಹಿ ಶಿಂಬುನ್’ ದೈನಿಕ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ. 43ರಷ್ಟು ಜಪಾನಿಯರು ಒಲಿಂಪಿಕ್ಸ್ ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾರೆ. ಶೇ. 40 ಮಂದಿ ಇದನ್ನು ಮತ್ತೆ ಮುಂದೂಡುವುದೇ ಕ್ಷೇಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಕಸ್ಮಾತ್ ಒಲಿಂಪಿಕ್ಸ್ ನಡೆದರೆ ವೀಕ್ಷಕರಿಗೆ ಅವಕಾಶ ಕಲ್ಪಿಸಬಾರದು ಎಂಬುದು ಶೇ. 59ರಷ್ಟು ಜಪಾನಿಯರ ಅನಿಸಿಕೆ.
ಒಂದು ತಿಂಗಳ ಹಿಂದೆ ಇದೇ ಪತ್ರಿಕೆ ನಡಿಸಿದ ಸಮೀಕ್ಷೆಯಲ್ಲಿ ಶೇ. 35 ಮಂದಿ ಮಾತ್ರ ಒಲಿಂಪಿಕ್ಸ್ ರದ್ದುಗೊಳಿಸಿ ಎಂದು ಆಗ್ರಹಿಸಿದ್ದರು. ಈಗ ಇಂಥವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗಮನಿಸಿಬಹುದು. ಜಪಾನ್ ಈಗ 4ನೇ ಕೊರೊನಾ ಅಲೆಯ ವಿರುದ್ಧ ಹೋರಾಡುತ್ತಿದೆ. ಸ್ಪಷ್ಟ ನಿರ್ಧಾರ: ಫೆಡರರ್ ಆಗ್ರಹ
ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಕ್ರೀಡಾಪಟುಗಳಿಗೆ ಸ್ಪಷ್ಟ ನಿರ್ಧಾರವೊಂದನ್ನು ತಿಳಿಸಬೇಕಾದುದು ಅತ್ಯಗತ್ಯ ಎಂಬುದಾಗಿ ಟೆನಿಸಿಗ ರೋಜರ್ ಫೆಡರರ್ ಗ್ರಹಿಸಿದ್ದಾರೆ. ಕ್ರೀಡಾಳುಗಳಲ್ಲಿ ಯಾವುದೇ ಗೊಂದಲ, ದ್ವಂದ್ವ ಇರಬಾರದು. ಇದರಿಂದ ಅವರ ಸಿದ್ಧತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಫೆಡರರ್ ಹೇಳಿದರು.