Advertisement

ಮೋದಿ ಸರಕಾರಕ್ಕೆ 8 ವರ್ಷ ಪೂರ್ಣ: ನಾಳೆ ಫ‌ಲಾನುಭವಿಗಳ ಜತೆ ಪ್ರಧಾನಿ ಸಂವಾದ

02:11 AM May 30, 2022 | Team Udayavani |

ಉಡುಪಿ/ಮಂಗಳೂರು:ಸ್ವತಂತ್ರ ಭಾರತದ ಅಮೃತ ಮಹೋತ್ಸವ ಮತ್ತು ಕೇಂದ್ರದಲ್ಲಿ ಪ್ರಧಾನಿ ಮೋದಿ ಸರಕಾರ 8 ವರ್ಷ ಗಳನ್ನು ಪೂರ್ಣಗೊಳಿಸಿರುವ ಪ್ರಯುಕ್ತ ಕೇಂದ್ರ ಸರಕಾರದ 9 ಮಂದಿ ಸಚಿವರು, ಇಲಾಖೆಗಳನ್ನು ಒಳಗೊಂಡ 16 ಯೋಜನೆಗಳು, ಕಾರ್ಯಕ್ರಮಗಳ ಕುರಿತು ಫ‌ಲಾನುಭವಿ ಗಳೊಂದಿಗೆ ಮೇ 31ರಂದು ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.

Advertisement

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪೋಷಣ್‌ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನ ಯೋಜನೆ, ಸ್ವತ್ಛಭಾರತ ಅಭಿಯಾನ (ಗ್ರಾಮೀಣ ಮತ್ತು ನಗರ ಪ್ರದೇಶ ಗಳೆರಡೂ ಒಳಪಡುತ್ತವೆ), ಜಲ ಜೀವನ್‌ ಅಭಿಯಾನ ಮತ್ತು ಅಮೃತ್‌, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಒಂದು ದೇಶ -ಒಂದು ಪಡಿತರ ಚೀಟಿ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್‌ ಭಾರತ್‌, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಪ್ರಧಾನಮಂತ್ರಿ ಮುದ್ರಾ ಯೋಜನೆ ಗಳ ಫ‌ಲಾನುಭವಿಗ ಳೊಂದಿಗೆ ಸಂವಾದ ನಡೆಯಲಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಕಾರ್ಯ ಕ್ರಮ ದೊಂದಿಗೆ ಬೆಳಗ್ಗೆ 11ಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಪ್ರಧಾನಿಯವರು ಶಿಮ್ಲಾದಿಂದ ದೇಶಾದ್ಯಂತ ಫ‌ಲಾನು ಭವಿಗಳೊಂದಿಗೆ ಸಂವಾದ ದಲ್ಲಿ ಪಾಲ್ಗೊಂಡು ಕಿಸಾನ್‌ ಸಮ್ಮಾನ್‌ ನಿಧಿಯ 11ನೇ ಕಂತನ್ನು ಬಿಡುಗಡೆ ಮಾಡುವರು. ವರ್ಚುವಲ್‌ ಮೂಲಕ ಈ ಸಂವಾದ ನಡೆಯಲಿದೆ.

ದೂರದರ್ಶನದ ರಾಷ್ಟ್ರೀಯ ವಾಹಿನಿ ಮತ್ತು ಸ್ಥಳೀಯ ವಾಹಿನಿಗಳ ಮೂಲಕ ಪ್ರಧಾನಿಯವರ ಜತೆಗಿನ ಈ ಸಂವಾದ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. MyGov ಮೂಲಕ ವೆಬ್‌ಕಾಸ್ಟ್ ಮಾಡಲಾಗುತ್ತದೆ. ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೆಸರನ್ನು ನೊಂದಾಯಿಸ ಬೇಕಾಗುತ್ತದೆ. ಈ ಕಾರ್ಯಕ್ರಮವನ್ನು ಇನ್ನಿತರ ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್‌, ಫೇಸುºಕ್‌, ಟ್ವಿಟರ್‌, ಇನ್ಸ್ಟಾಗ್ರಾಮ್ ಮೂಲಕವೂ ವೀಕ್ಷಿಸಬಹುದು.

ಇದರ ವೀಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು  ಭಾಗವಹಿ ಸುವರು ಎಂದು ಪ್ರಕಟನೆ ತಿಳಿಸಿದೆ.

Advertisement

ಇಂದು ಉಡುಪಿಯ ಮೂವರು ಮಕ್ಕಳಿಗೆ ಸೌಲಭ್ಯ ವಿತರಣೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 2020ರ ಮಾ. 11ರ ಬಳಿಕ ಕೋವಿಡ್‌ನಿಂದ ಹೆತ್ತವರಿಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಕೇಂದ್ರದ ಪಿಎಂ ಕೇರ್ ಫಾರ್‌ ಚಿಲ್ಡ್ರನ್‌ ಯೋಜನೆಯಡಿ ಸೌಲಭ್ಯ ಒದಗಿಸಲಾಗುತ್ತದೆ. ಉಡುಪಿ ಜಿಲ್ಲೆಯ ಮೂವರು ಮಕ್ಕಳಿಗೆ ಯೋಜನೆಯಡಿ ಸಮಗ್ರ ಕಿಟ್‌ (ಆಂಚೆ ಪಾಸ್‌ ಪುಸ್ತಕ, ಆಯುಷ್ಮಾನ್‌ ಕಾರ್ಡ್‌, ಪ್ರಧಾನಿಯವರಿಂದ ಪತ್ರ, ಪಿಎಂ ಕೇರ್ ಪ್ರಮಾಣಪತ್ರ) ವಿತರಣೆ ನಡೆಯಲಿದೆ. ಮೇ 30ರಂದು ಬೆಳಗ್ಗೆ 11ಕ್ಕೆ ಉಡುಪಿ ಜಿ.ಪಂ.ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next