Advertisement

ಸ್ಪೈಸ್‌ಜೆಟ್‌ನಿಂದ 8 ಹೊಸ ವಿಮಾನ ಸಂಚಾರ ಆರಂಭ : ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿಕೆ

07:31 PM Jul 11, 2021 | Team Udayavani |

ನವದೆಹಲಿ: ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ತಮ್ಮ ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ್ದಾರೆ.

Advertisement

ಮಧ್ಯಪ್ರದೇಶ ಮತ್ತು ಗುಜರಾತ್‌ನ ವಿವಿಧ ನಗರಗಳ ನಡುವೆ ಸ್ಪೆಸ್‌ಜೆಟ್‌ 8 ಹೊಸ ವಿಮಾನಗಳ ಸಂಚಾರ ಶುರು ಮಾಡಲಿದೆ ಎಂದು ಅವರು ಘೋಷಿಸಿದ್ದಾರೆ.

ಶುಕ್ರವಾರದಿಂದ ಗ್ವಾಲಿಯರ್‌-ಮುಂಬೈ-ಗ್ವಾಲಿಯರ್‌, ಗ್ವಾಲಿಯರ್‌-ಪುಣೆ-ಗ್ವಾಲಿಯರ್‌, ಜಬಲ್ಪುರ್‌-ಸೂರತ್‌-ಜಬಲ್ಪುರ್‌, ಅಹ್ಮದಾಬಾದ್‌-ಗ್ವಾಲಿಯರ್‌-ಅಹ್ಮದಾಬಾದ್‌ ನಡುವೆ ವಿಮಾನಗಳು ಸಂಚಾರ ಆರಂಭಿಸಲಿವೆ.

ಕೇಂದ್ರ ಸರ್ಕಾರದ ಉಡಾನ್‌ ನೀತಿಯ ಅನ್ವಯ ವಿಮಾನಯಾನವನ್ನು ಎಲ್ಲರಿಗೂ ತಲುಪಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ : ಶ್ರೀಕೃಷ್ಣಮಠ : ಎರಡೂವರೆ ತಿಂಗಳ ಬಳಿಕ ಭಕ್ತರಿಂದ ದರ್ಶನ ಆರಂಭ

Advertisement
Advertisement

Udayavani is now on Telegram. Click here to join our channel and stay updated with the latest news.

Next