Advertisement

ಆಗಸ್ಟ್ 15ಕ್ಕೆ ಕಾಶ್ಮೀರದಲ್ಲಿ ಬೀಭತ್ಸ ಕೃತ್ಯ ಎಸಗಲು ಐಎಸ್‌ಐ ಚಿತಾವಣೆ

11:18 AM Aug 03, 2021 | Team Udayavani |

ಶ್ರೀನಗರ/ಹೊಸದಿಲ್ಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಐಎಸ್‌ಐ ಮತ್ತು ಉಗ್ರರು ಆ.15ರ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಭತ್ಸ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದೆ.

Advertisement

ಇದನ್ನೂ ಓದಿ:ದಿಢೀರ್ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,549 ಕೋವಿಡ್ ಪ್ರಕರಣ ಪತ್ತೆ

ಅದಕ್ಕಾಗಿ ವಿಶೇಷ ನಿಯಂತ್ರಣ ಕೊಠಡಿ, ಎಂಟು ಹೊಸ ಮಾರ್ಗಗಳ ಮೂಲಕ ಉಗ್ರರನ್ನು ಕಾಶ್ಮೀರದೊಳಕ್ಕೆ ನುಗ್ಗಿಸಲು ಸಂಚು ರೂಪಿಸು  ತ್ತಿದೆ. ಅದಕ್ಕಾಗಿ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ, ಉಗ್ರ ಸಂಘಟನೆಗಳಾದ ಲಷ್ಕರ್‌, ಜೈಶ್‌, ಅಲ್‌-ಬದ್ರ್ ಸಂಘಟನೆಗಳ ಜತೆಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ ಎನ್ನುವುದು ಗುಪ್ತಚರ ಸಂಸ್ಥೆಗಳ ಅಂಬೋಣ. ಇದರ ಜತೆಗೆ ಎಲ್‌ಒಸಿಯ ಆಚೆ ಇರುವ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 27 ಹೊಸ ಉಗ್ರರಿಗೆ ತರಬೇತಿ
ನೀಡುವ ಕೇಂದ್ರಗಳಿವೆ ಎಂದು ಕಂಡುಕೊಂಡಿವೆ.

ನಾಲ್ವರ ಬಂಧನ: ಅನಂತನಾಗ್‌ ಜಿಲ್ಲೆಯಲ್ಲಿ ಲಷ್ಕರ್‌ ಉಗ್ರ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಉಗ್ರ ಜಾಲವನ್ನು ಭೇದಿಸಲಾಗಿದೆ. ಅವರು, ಸುಧಾರಿತ ಸ್ಫೋಟಕಗಳನ್ನು ಸಿದ್ಧಪಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.

ಉಗ್ರ ಮಸೂದ್‌ ಜತೆ ಲಂಬೂಗೆ ನೇರ ಸಂಪರ್ಕ?
ಪುಲ್ವಾಮಾದಲ್ಲಿ ಎನ್‌ಕೌಂಟರ್‌ನಲ್ಲಿ ಹತನಾದ ಲಷ್ಕರ್‌ ಉಗ್ರ ಮೊಹಮ್ಮದ್‌ ಇಸ್ಮಾಯಿಲ್‌ ಅಳ್ವಿ ಅಲಿಯಾಸ್‌ ಲಂಬೂಗೆ ನೇರವಾಗಿ ಮಸೂದ್‌ ಅಜರ್‌ನ ಸಂಪರ್ಕವಿತ್ತು ಎಂಬ ಬಗ್ಗೆ ಶಂಕೆಗಳಿವೆ. ಇದಕ್ಕೆ ಕಾರಣ ಜು.31ರಂದು ಘಟನೆ ನಡೆದಿದ್ದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದ್ದ ಮೂರು ಐಫೋನ್‌
ಗಳು. ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. 2019ರ ಪುಲ್ವಾಮಾದಲ್ಲಿ ಯೋಧರನ್ನು ಹತ್ಯೆ ಮಾಡಿದ ಘಟನೆಯ ಸೂತ್ರಧಾರನೂ ಆಗಿರುವ ಲಂಬೂ, ಉಗ್ರ ಅಜರ್‌ನ ರಕ್ತ ಸಂಬಂಧಿ. ಆತ ಮಸೂದ್‌ ಅಜರ್‌ನ ಕಿರಿಯ ಸಹೋದರ ಮುμ¤ ಅಬ್ದುಲ್‌ ರೌಫ್ ಅಜರ್‌ ಜತೆಗೆ ಸತತವಾಗಿ ಸಂಪರ್ಕದಲ್ಲಿದ್ದ. ಮುಫ್ತಿ ಅಬ್ದುಲ್‌ ಬಗ್ಗೆ ಸೇನೆಯಲ್ಲಿ “ಮಾರಾ’ ಎಂಬ ಸಂಕೇತದ ಹೆಸರೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next