Advertisement

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

01:55 PM Jun 15, 2024 | Team Udayavani |

ಛತ್ತೀಸ್‌ಗಢ: ಛತ್ತೀಸ್‌ಗಢದ ನಾರಾಯಣಪುರ ಪ್ರದೇಶದ ಅಬುಜ್‌ಮದ್‌ನಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲೀಯರು ಹತರಾಗಿದ್ದು ಓರ್ವ ಸೇನಾ ಯೋಧ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

Advertisement

ನಾರಾಯಣಪುರ ಜಿಲ್ಲೆಯ ಮಾದ್ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ಅದರಂತೆ ಇಂದು ಅಬುಜ್ಮದ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 8 ನಕ್ಸಲೀಯರು ಹತರಾಗಿದ್ದಾರೆ ಮತ್ತು ನಕ್ಸಲರ ದಾಳಿಗೆ ಸಿಲುಕಿ ಸೇನಾ ಯೋಧ ಕೂಡ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಬುಜ್ಮದ್ ಎಂಬುದು ನಾರಾಯಣಪುರ, ಬಿಜಾಪುರ ಜಿಲ್ಲೆ ಮತ್ತು ದಾಂತೇವಾಡ ಜಿಲ್ಲೆಯಲ್ಲಿ ಬರುವ ಅರಣ್ಯ ಪ್ರದೇಶವಾಗಿದೆ. ಇದೊಂದು ದಟ್ಟ ಅರಣ್ಯ ಪ್ರದೇಶವಾಗಿದ್ದು ಜನ ಪ್ರವೇಶ ನಿರ್ಬಂಧಿತ ಪ್ರದೇಶವಾಗಿದೆ ಈ ಪ್ರದೇಶವನ್ನು ಮಾವೋವಾದಿ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಎಂಬ ನಾಲ್ಕು ಜಿಲ್ಲೆಗಳ ಭದ್ರತಾ ಸಿಬ್ಬಂದಿಗಳು ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೋದಾಗ ಅಭುಜ್ಮಾರ್ಹ್ ಅರಣ್ಯದಲ್ಲಿ ಇಂದು ಬೆಳಿಗ್ಗೆ ಗುಂಡಿನ ದಾಳಿ ಆರಂಭವಾಗಿದೆ.

ಜೂನ್ 12 ರಂದು ಕಾರ್ಯಾಚರಣೆ ಪ್ರಾರಂಭವಾಯಿತು:
ನಕ್ಸಲೀಯರ ವಿರುದ್ಧ ನಡೆಸಲಾಗುತ್ತಿರುವ ಈ ಕಾರ್ಯಾಚರಣೆಯಲ್ಲಿ ನಾಲ್ಕು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) 53 ನೇ ಬೆಟಾಲಿಯನ್ ಸಿಬ್ಬಂದಿ ಭಾಗಿಯಾಗಿದ್ದಾರೆ. ಈ ಕಾರ್ಯಾಚರಣೆಯನ್ನು ಜೂನ್ 12 ರಂದು ಆರಂಭಿಸಲಾಗಿತ್ತು. ಇದುವರೆಗೆ ನಡೆಸಿದ ಅತಿ ದೊಡ್ಡ ದಾಳಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Advertisement
Advertisement

Udayavani is now on Telegram. Click here to join our channel and stay updated with the latest news.

Next