ಕೋಲಾರ: ನಗರದ ಮೆಥೋಡಿಸ್ಟ್ ಚರ್ಚ್‌ನ ಸಭಾಪಾಲನಾ ಸಮ್ಮೇಳನದಲ್ಲಿ ಮೆಥೋಡಿಸ್ಟ್ ಸಂವಿ ಧಾನ ಮತ್ತು ಕ್ರಮಗಳಿಗೆ ವಿರುದ್ಧವಾಗಿ ನಡೆದು ಕೊಂಡಿರುವ ದೇವ್‌ಕುಮಾರ್, ನಿರ್ಮಲ್‌ಕುಮಾರ್, ಸುನೀಲ್ ಕುಮಾರ್, ಸನ್ನಿರಾಜ್, ಸರಿತಾ ಸನ್ನಿರಾಜ್, ರೈಚಲ್ ಸಹನಾ, ಡೇವಿಡ್ ಹೆಲ್ತ್ ಇವರುಗಳನ್ನು ಶಿಸ್ತುಕ್ರಮದ ಅನ್ವಯ ಚರ್ಚ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ.
ಈ ಎಂಟು ವ್ಯಕ್ತಿಗಳಿಗೂ ಚರ್ಚ್‌ಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲವೆಂದು ಸಮ್ಮೇಳನದ ಅಧ್ಯಕ್ಷ ವಿ.ಡೇವಿಡ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದಸ್ಯರಿಂದ ಪ್ರತಿಭಟನೆ: ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್‌ನ 8 ಮಂದಿ ಸದಸ್ಯರನ್ನು ಅಮಾನತ್ತುಗೊಳಿಸಿರುವ ಫಾದರ್ ಶಾಂತಕುಮಾರ್ ವರ್ತನೆ ಖಂಡಿಸಿ, ಚರ್ಚ್‌ನ ಪಾಪರ್ಟಿ ಚೇರ್ ಮನ್ ಸುಧೀರ್,ದೇವಕುಮಾರ್, ನಿರ್ಮಲ ಕುಮಾರ್ ನೇತೃತ್ವದಲ್ಲಿ ಹಲವಾರು ಮಂದಿ ಚರ್ಚ್ ಆವರಣದಲ್ಲಿನ ಪಾದ್ರಿ ನಿವಾಸದೆದುರು ಪ್ರತಿಭಟನೆ ನಡೆಸಿದರು. ಕ್ರೈಸ್ತ ಸಮುದಾಯದ ಕೆಲವು ಸದಸ್ಯರನ್ನು ಸದಸ್ಯತ್ವ ದಿಂದ ಅಮಾನತ್ತುಗೊಳಿಸಿರುವ ಕ್ರಮ ಸರಿಯಿಲ್ಲ, ಇದೊಂದು ಸರ್ವಾಧಿಕಾರಿ ವರ್ತನೆ ಎಂದು ಟೀಕಿಸಿ, ಕೂಡಲೇ ಅಮಾನತು ವಾಪಸ್ ಪಡೆಯಲು ಒತ್ತಾಯಿಸಿದರು.
ಚರ್ಚ್‌ನ ಆಡಳಿತ ದಾರಿ ತಪ್ಪಿದೆ, ಪಾದ್ರಿ ಶಾಂತ ಕುಮಾರ್ ತಮ್ಮ ಧೋರಣೆ ಬದಲಿಸಿಕೊಳ್ಳಲು ಹಲವಾರು ಬಾರಿ ತಿಳಿಸಿದ್ದರೂ ಅವರು ಸರಿಹೋಗಿಲ್ಲ, ಅಂತಹವರಿಂದ ಸಮುದಾಯದಲ್ಲಿ ಶಾಂತಿ ಕದಡುತ್ತಿದೆ ಎಂದು ಆರೋಪಿಸಿದರು.
Related Articles
ಚರ್ಚ್ ಆಡಳಿತ ದಾರಿತಪ್ಪಲು ಕಾರಣರಾಗಿರುವ ಫಾದರ್ ಶಾಂತಕುಮಾರ್ ಅವರನ್ನು ಆಡಳಿತ ಮಂಡಳಿಯಿಂದ ತೆಗೆದುಹಾಕಬೇಕು ಎಂದು ಸದಸ್ಯರಾದ ದೇವಕುಮಾರ್,ನಿರ್ಮಲ್‌ಕುಮಾರ್ ತಬೀತಾ ಆಂಟಿ, ಉಷಾ, ಶರ್ಲಿ, ಸರಿತಾ, ಆಶಾ, ಸನ್ನಿರಾಜ್, ಸುನಿಲ್,ಡೇವಿಡ್,ಜೋಸೆಫ್, ಬೆ„ಚಲ್ ಜೋಸೆಫ್, ಪ್ರತಾಪ್,ಜಾರ್ಜ್,ಪ್ರಸನ್ನ ಮೋಹನ್ ಮತ್ತಿತರರು ಒತ್ತಾಯಿಸಿ ಪ್ರತಿಭಟನೆ ಮುಂದು ವರೆಸಿದರು.
ಸ್ಥಳಕ್ಕೆ ಧಾವಿಸಿದ ನಗರಠಾಣೆ ಪಿಎಸ್‌ಐ ಅರುಣ್ ಕುಮಾರ್ ಮತ್ತು ಸಿಬ್ಬಂದಿ ಪ್ರತಿಭಟಿಸುತ್ತಿದ್ದ ಕ್ರೈಸ್ತ ಸಮುದಾಯವನ್ನು ಸಮಾಧಾನಪಡಿಸಿದರು. ಕ್ರೈಸ್ತ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ, ನಿಮ್ಮ ಸಮಸ್ಯೆ ಇದ್ದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಎರಡೂ ಕಡೆಯವರಿಗೂ ಮನವರಿಕೆ ಮಾಡಿ ಪ್ರತಿಭಟನೆ ತಣ್ಣಗಾಗಿಸಿದರು.