Advertisement

Sahara: 8 ಲಕ್ಷ ವರ್ಷಗಳ ಹಿಂದೆ ಹಚ್ಚ ಹಸಿರಿನಿಂದ ಕೂಡಿದ್ದ ಸಹಾರಾ ಮರುಭೂಮಿ!

09:43 PM Sep 25, 2023 | Team Udayavani |

ವಾಷಿಂಗ್ಟನ್‌: ವಿಶ್ವದ ಅತಿ ದೊಡ್ಡ ಮರುಭೂಮಿಯಾದ ಉತ್ತರ ಆಫ್ರಿಕಾದ ಸಹಾರಾ ಮರುಭೂಮಿಯು 8 ಲಕ್ಷ ವರ್ಷಗಳ ಹಿಂದೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು ಎಂಬುದನ್ನು ನೂತನ ಅಧ್ಯಯನವೊಂದು ಬಹಿರಂಗಪಡಿಸಿದೆ.

Advertisement

ಫಿನ್‌ಲ್ಯಾಂಡ್‌ನ‌ ಹೆಲ್ಸಿಂಕಿ ವಿಶ್ವವಿದ್ಯಾಲಯ ಮತ್ತು ಬ್ರಿಟನ್‌ನ ಬ್ರಿಸ್ಟನ್‌ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಡಾ.ಎಡ್ವರ್ಡ್‌ ಆರ್ಮ್ಸ್ಟ್ರಾಂಗ್‌ ನೇತೃತ್ವದ ತಂಡ ಅಧ್ಯಯನ ನಡೆಸಿದ್ದು, ಈ ಕುರಿತ ಸಂಶೋಧನಾ ಪ್ರಬಂಧವನ್ನು “ನೇಚರ್‌ ಕಮ್ಯುನಿಕೇಶನ್ಸ್‌” ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

“ಸವನ್ನಾ ಮತ್ತು ಅರಣ್ಯ ಪರಿಸರ ವ್ಯವಸ್ಥೆಗಳಾಗಿ ಸಹಾರಾ ಮರುಭೂಮಿಯ ಆವರ್ತಕ ರೂಪಾಂತರವು ಭೂಮಿಯ ಮೇಲಿನ ಅತ್ಯಂತ ಗಮನಾರ್ಹವಾದ ಪರಿಸರ ಬದಲಾವಣೆಗಳಲ್ಲಿ ಒಂದಾಗಿದೆ’ ಎಂದು ಡಾ. ಎಡ್ವರ್ಡ್‌ ಆರ್ಮ್ಸ್ಟ್ರಾಂಗ್‌ ಹೇಳಿದ್ದಾರೆ.

“ಈಗಿನ ಸಹಾರಾ ಮರುಭೂಮಿಯು ಸುಮಾರು 8 ಲಕ್ಷ ವರ್ಷಗಳ ಹಿಂದೆ ನದಿಗಳು, ಸರೋವರಗಳು, ಸಸ್ಯಗಳ ಸಮೂಹ ಹಾಗೂ ನೀರು ಅವಲಂಬಿತ ಪ್ರಾಣಿಗಳಾದ ಹಿಪ್ಪೊಗಳಿಂದ ಕೂಡಿತ್ತು. ಇದಕ್ಕೆ ಅನೇಕ ಪುರಾವೆಗಳು ಸಿಕ್ಕಿವೆ. ಸೂರ್ಯನ ಸುತ್ತ ಭೂಮಿಯ ಕಕ್ಷೆಯ ಬದಲಾವಣೆ ಹಾಗೂ ಹಿಮಯುಗದಲ್ಲಿನ ಬದಲಾವಣೆಗಳ ಪರಿಣಾಮಗಳಿಂದಾಗಿ ಹಸಿರು ಸಂಪೂರ್ಣವಾಗಿ ನಶಿಸಿ, ಮರುಭೂಮಿಯಾಯಿತು’ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next