Advertisement

ಅಫ್ಘಾನಿಸ್ಥಾನ:ಕ್ರಿಕೆಟ್‌ ಪಂದ್ಯದ ವೇಳೆ ಸರಣಿ ಬಾಂಬ್‌ ಸ್ಫೋಟ, 8 ಸಾವು

11:24 AM May 19, 2018 | Team Udayavani |

ಕಾಬೂಲ್‌ : ಜಲಾಲಾಬಾದ್‌ ನ ಪ್ರಾಂತೀಯ ರಾಜಧಾನಿಯಾಗಿರುವ ನಂಗರ್‌ಹಾರ್‌ನ ಕ್ರಿಕೆಟ್‌ ಮೈದಾನದಲ್ಲಿ ನಿನ್ನೆ  ಶುಕ್ರವಾರ ತಡ ರಾತ್ರಿ, ಪವಿತ್ರ ರಮ್ಜಾನ್‌ ತಿಂಗಳ ಪ್ರಯುಕ್ತ ಏರ್ಪಡಿಸಲಾಗಿದ್ದ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ನೂರಾರು ಜನರು ಮತ್ತು ಕ್ರಿಕೆಟ್‌ ಆಟಗಾರರು ಸೇರಿದ್ದಾಗ ಸರಣಿ ಬಾಂಬ್‌ ಸ್ಫೋಟಗಳ ಸಂಭವಿಸಿ ಕನಿಷ್ಠ ಎಂಟು ಮಂದಿ ಮೃತಪಟ್ಟರೆಂದು ಅಫ್ಘಾನ್‌ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಈ ಸರಣಿ ಬಾಂಬ್‌ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಗಾಯಗೊಂಡರೆಂದು ನಂಗರ್‌ಹಾರ್‌ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ತಿಳಿಸಿದರು. 

ಈ ಸರಣಿ ಬಾಂಬ್‌ ಸ್ಫೋಟಗಳ ಹೊಣೆಗಾರಿಕೆಯನ್ನು ಯಾವುದೇ ಉಗ್ರ ಸಂಘಟನೆ ಈ ತನಕ ವಹಿಸಿಕೊಂಡಿಲ್ಲ; ಆದರೂ ಪೂರ್ವ ಅಫ್ಘಾನಿಸ್ಥಾನದ ಈ ಭಾಗದಲ್ಲಿ ತಾಲಿಬಾನ್‌ ಬಂಡುಕೋರರು  ಮತ್ತು ಐಸಿಸ್‌ ಉಗ್ರರು ಸಕ್ರಿಯರಾಗಿರುವುದರಿಂದ ಇದು ಅವರೇ ನಡೆಸಿರುವ ಕೃತ್ಯವೆಂದು ಶಂಕಿಸಲಾಗಿದೆ. 

ಸರಣಿ ಬಾಂಬ್‌ ನ್ಪೋಟಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರ ಖೋಗ್ಯಾನಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next