Advertisement
ರೆಸಾರ್ಟ್ ಕೋಣೆಯಲ್ಲಿ ಪ್ರಜ್ಞಾ ಹೀನರಾಗಿ ಬಿದ್ದಿದ್ದ ಎಂಟು ಮಂದಿಯನ್ನು ಏರ್ ಲಿಫ್ಟ್ ಮೂಲಕ ಎಚ್ ಎಎಮ್ ಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರೆಲ್ಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಸಿಂಗ್ ತಿಳಿಸಿದ್ದಾರೆ.
Related Articles
Advertisement
ಎಲ್ಲರೂ ಕೋಣೆಯ ಕಿಟಕಿ, ಬಾಗಿಲುಗಳಿಗೆ ಒಳಗಿನಿಂದ ಬೋಲ್ಟ್ ಹಾಕಿಕೊಂಡಿದ್ದರು. ಬಿಸಿ ಗಾಳಿಗೆ ಉಸಿರುಗಟ್ಟಿ ಎಂಟು ಮಂದಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿರುವುದಾಗಿ ವರದಿ ತಿಳಿಸಿದೆ.
ಮೃತಪಟ್ಟವರೆಲ್ಲಾ ಕೇರಳ ಮೂಲದವರು ಎಂದು ವರದಿ ತಿಳಿಸಿದೆ. ನೇಪಾಳ ರೆಸಾರ್ಟ್ ನಲ್ಲಿ ಸಾವನ್ನಪ್ಪಿರುವ ಎಂಟು ಮಂದಿ ಕೇರಳ ಪ್ರವಾಸಿಗರ ಮೃತದೇಹವನ್ನು ರಾಜ್ಯಕ್ಕೆ ತರಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಕೇರಳ ಸರ್ಕಾರ ತಿಳಿಸಿದೆ ಎಂದು ವರದಿ ಹೇಳಿದೆ.
ಘಟನೆ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಸಂತಾಪ ವ್ಯಕ್ತಪಡಿಸಿರುವುದಾಗಿ ಪ್ರಕಟಣೆ ತಿಳಿಸಿದೆ. ಆದಷ್ಟು ಶೀಘ್ರದಲ್ಲಿಯೇ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ವ್ಯವಹಾರಗಳ ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ.